ವಿರೇಂದ್ರ ಸೆಹ್ವಾಗ್​… ಟೀಮ್​ ಇಂಡಿಯಾ ಕಂಡಂತಹ ಗ್ರೇಟ್ ಎಕ್ಸ್​ಫ್ಲೋಸಿವ್​​ ಬ್ಯಾಟ್ಸ್​​ಮನ್​​​.! ಸೀಮಿತ ಓವರ್​​ಗಳ ಪಂದ್ಯಗಳಲ್ಲಿ ಮಾತ್ರವಲ್ಲ, ಟೆಸ್ಟ್​​​ನಲ್ಲೂ ಭಯಭೀತರಾಗದೆ ಬ್ಯಾಟ್​​​​​​​​​ ಬೀಸಿದ ಮಾಸ್ಟರ್​​​..! ಅದೆಂತಹ ಟಾಪ್​ ಬೌಲರ್​​ ಆದ್ರೂ, ಈ ಮಾಜಿ ಓಪನರ್ ಹಿಗ್ಗಾಮುಗ್ಗಾ ಜಾಡಿಸ್ತಿದ್ರು. ಅದೇ ರೀತಿ ಆಸ್ಟ್ರೇಲಿಯಾದ ಮಾಜಿ ಕೀಪರ್​​​ ಆ್ಯಡಂ ಗಿಲ್​​ಕ್ರಿಸ್ಟ್​ ಕೂಡ, ಹೊಡಿಬಡಿ ಆಟಕ್ಕೇ ಫೇಮಸ್ಸ್​​​..! ಇದೀಗ ಈ ಸಾಲಿಗೆ ಯಂಗ್​​ ಬ್ಯಾಟ್ಸ್​ಮನ್​ ಸೇರಿಕೊಂಡಿದ್ದಾನೆ. ಜೊತೆಗೆ ಈತ ಗೇಮ್​ ಚೇಂಜರ್​​ ಕೂಡ ಹೌದು..!

ಪಂತ್​ ಫಿಯರ್​ಲೆಸ್​​ ಆಟಕ್ಕೆ ಎಲ್ಲಾ ತಂಡಗಳಿಗೂ ನಡುಕ..!
ಸ್ಫೋಟಕ ಬ್ಯಾಟಿಂಗ್​​ನಲ್ಲಿ ಸೆಹ್ವಾಗ್​ರನ್ನೇ ಮೀರಿಸ್ತಾರಾ ಪಂತ್​..?

ಕಳೆದ ಆರು ತಿಂಗಳಿಂದ ಹೆಚ್ಚು ಮುಂಚೂಣಿಯಲ್ಲಿರೋ ಹೆಸರು ಟೀಮ್​ ಇಂಡಿಯಾದ ಫ್ಯೂಚರ್​ ಸ್ಟಾರ್​ ರಿಷಭ್​ ಪಂತ್​ರದ್ದು. ಟಾಪ್​ ಬೌಲಿಂಗ್​​​​​ ಅಟ್ಯಾಂಕಿಂಗ್​ ಅನ್ನೇ ಡಾಮಿನೇಟೇಡ್​ ಮಾಡಿದ್ದೇ ಅದಕ್ಕೆ ಕಾರಣ..! ಕಳೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ಟೆಸ್ಟ್​ ಸರಣಿಗಳಲ್ಲಿ ಪಂತ್​ರ ಡೈನಾಮಿಕ್​​ ಆಟ ಹಾಗಿತ್ತು. ಮೂರು ಸ್ವರೂಪಗಳಲ್ಲಿ ಸಕ್ಸಸ್​ ಕಂಡಿರೋ ಪಂತ್​, ಟೆಸ್ಟ್ ಕ್ರಿಕೆಟ್​​​ನಲ್ಲಿ ಬೆಂಕಿ ಬಿರುಗಾಳಿ ಬ್ಯಾಟಿಂಗ್​ನಿಂದಲೇ ಅಟ್ರಾಕ್ಷನ್​​..! ಲೋ ಆರ್ಡರ್​​​ನಲ್ಲಿ​​ ವಿನಾಶಕಾರಿಯಾಗಿ ಬ್ಯಾಟಿಂಗ್​ ನಡೆಸೋ ಪಂತ್​ರ​​​ ಫಿಯರ್​ಲೆಸ್​ ಆಟ, ಎಲ್ಲಾ ತಂಡಗಳ ಆಟಗಾರರ ಎದೆ ನಡುಗಿಸಿದೆ. ಜೊತೆಗೆ ಟೆಸ್ಟ್​​​ನಲ್ಲಿ ನಿರಾತಂಕವಾಗಿ ಬ್ಯಾಟ್​​ ಬೀಸೋದನ್ನ ಹೇಳಿಕೊಟ್ಟ ಸೆಹ್ವಾಗ್​​ರನ್ನೇ ಮೀರಿಸೋ ಹಂತಕ್ಕೆ ಬೆಳೆದಿದ್ದಾರೆ.

ಸ್ಫೋಟಕ ಬ್ಯಾಟಿಂಗ್​ನಿಂದಲೇ ಉಲ್ಕಾಶಿಲೆಯಂತೆ ಬೆಳೆದ ರಿಷಭ್​​​​..!

2000 ದಶಕದಲ್ಲಿ ವಿಶ್ವ ಕ್ರಿಕೆಟ್​​ನಲ್ಲಿ ಮೋಸ್ಟ್​ ಡೇಂಜರಸ್​​ ಟೀಮ್​​ ಎನಿಸಿಕೊಂಡಿದ್ದ​​ ಆಸ್ಟ್ರೇಲಿಯಾ ತಂಡದ ಆ್ಯಡಮ್​ ಗಿಲ್​​ಕ್ರಿಸ್ಟ್ ಮತ್ತು ​ಟೀಮ್​ ಇಂಡಿ​ಯಾದ ವೀರೂ ನೀಡ್ತಿದ್ದ ಕನ್ಸಿಸ್ಟೆಂಟ್​​ ಬೇಸಿಸ್​​ನಡಿಯೇ ಪಂತ್​ ಕೂಡ ಹೆಜ್ಜೆ ಹಾಕಿದ್ದಾರೆ. ಪ್ರತಿಸ್ಪರ್ಧಿಗಳಲ್ಲಿ ಭಯ ಹುಟ್ಟಿಸುತ್ತಿದ್ದ ಈ ಇಬ್ಬರಂತೆ ಪಂತ್ ಕೂಡ ಎದುರಾಳಿಗಳಲ್ಲಿ ಭಯ ಹುಟ್ಟಿಸುವ ಆಟಗಾರ. ಹೀಗಂತ ಟೀಮ್​ ಇಂಡಿಯಾದ ಕೀಪರ್​​ ದಿನೇಶ್​ ಕಾರ್ತಿಕ್​​ ಹಾಡಿ ಹೊಗಳಿದ್ದಾರೆ.

ರಿಷಭ್ ಪಂತ್ ಟೀಮ್ ಇಂಡಿಯಾದ ಪ್ರಮುಖ ಆಟಗಾರ. ತಮ್ಮ ಅತ್ಯದ್ಭುತ ಆಟದಿಂದಲೇ ಕಳೆದೆರಡು ಸರಣಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಬಹುಮುಖ್ಯವಾಗಿ ಅಂದರೆ, ಪಂತ್ ಬ್ಯಾಟಿಂಗ್ ಮಾಡುವ ವೇಳೆ ಎದುರಾಳಿ ತಂಡಕ್ಕೆ ನಡುಕ ಉಂಟು ಮಾಡಬಲ್ಲ, ಗುಣ ಹೊಂದಿದ್ದಾರೆ. ಈ ಹಿಂದೆ ವೀರೇಂದ್ರ ಸೆಹ್ವಾಗ್ ಮತ್ತು ಗಿಲ್‌ಕ್ರಿಸ್ಟ್ ಈ ಸಾಮರ್ಥ್ಯ ಹೊಂದಿದ್ದರು. ಇದೀಗ ಪಂತ್ ಕೂಡ ಎದುರಾಳಿ ತಂಡದ ಆಟಗಾರರಿಗೆ ಭಯ ಹುಟ್ಟಿಸುವ ಆಟಗಾರನಾಗಿದ್ದಾರೆ..
-ದಿನೇಶ್ ಕಾರ್ತಿಕ್, ವಿಕೆಟ್​ ಕೀಪರ್​​

ಟೆಸ್ಟ್​​ ಕರಿಯರ್​​ನಲ್ಲಿ ಅಸಾಧಾರಣ ಪ್ರದರ್ಶನ ತೋರಿರುವ ಫಿಯರ್​​ಲೆಸ್​​ ಪಂತ್​, ಒಟ್ಟು 20 ಟೆಸ್ಟ್​​​ಗಳಲ್ಲಿ 45ರ ಸರಾಸರಿಯಂತೆ 1358 ರನ್​ ಕಲೆಹಾಕಿದ್ದಾರೆ. ಮೂರು ಶತಕ ಮತ್ತು 6 ಅರ್ಧಶತಕ ಸಿಡಿಸಿರೋ ಈ ಔಟ್​​ಸ್ಟಾಂಡಿಂಗ್​​ ಪ್ಲೇಯರ್​, ಎದುರಾಳಿ ತಂಡಕ್ಕೆ ಡೆವಿಲ್​​​ ಆಗಿದ್ದಾರೆ. ಈ ಸಂಖ್ಯೆಗಳು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗೆ ಅತ್ಯುತ್ತಮ ಎನಿಸಿಕೊಂಡಿದೆ. ಜೊತೆಗೆ ಸೆಹ್ವಾಗ್​ ಮತ್ತು ಗಿಲ್​ಕ್ರಿಸ್ಟ್​​ಗೆ ಪಂತ್​​ರನ್ನ ಹೋಲಿಸಿರೋದಕ್ಕೂ ಕೂಡ ನಿಖರ ಕಾರಣವಿದೆ. ಬೌಲರ್​​ಗಳಿಗೆ ಥ್ರೆಟ್​ ಆಗಿರುವ ಪಂತ್​ ಬ್ಯಾಟಿಂಗ್​​ ಸ್ಟ್ರೈಕ್​ರೇಟ್​, ಈ ದಿಗ್ಗಜ್ಜರನ್ನೇ ಮೀರಿಸುವ ಹಂತಕ್ಕೆ ಬಂದು ತಲುಪಿದೆ. ಆ ಮೂಲಕ ಕ್ರಾಂತಿಕಾರಿಯಾಗಲು ಹೊರಟಿರುವ ಪಂತ್​​, ಟೆಸ್ಟ್ ಕ್ರಿಕೆಟ್‌ನ ಸ್ಟ್ರೈಕ್​​ರೇಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್​​​ ಮಾದರಿಯಲ್ಲಿ ಟಾಪ್​ ಸ್ಟ್ರೈಕ್​ರೇಟರ್ಸ್​
ಆಟಗಾರ                  ಸ್ಟ್ರೈಕ್​ರೇಟ್
ಸೆಹ್ವಾಗ್​                      82.23
ಗಿಲ್​ಕ್ರಿಸ್ಟ್​                    82.00
ವಾರ್ನರ್​​                   72.68
ಪಂತ್​​                       71.47
ರಿಚರ್ಡ್ ​                   70.19

ನೊಡಿದ್ರಲ್ವಾ..! ಅಲ್ಪ ಅವಧಿಯಲ್ಲೇ ಬ್ಯಾಟಿಂಗ್​ ಸ್ಟ್ರೈಕ್​ರೇಟ್ ಅನ್ನ ಪಂತ್​​ ಹೇಗೆ ಹೆಚ್ಚಿಸಿಕೊಂಡಿದ್ದಾರೆ ಅನ್ನೋದನ್ನ. ಅದಕ್ಕೆಲ್ಲಾ ಕಾರಣ, ಆಸಿಸ್​ ಮತ್ತು ಇಂಗ್ಲೆಂಡ್​ ವಿರುದ್ಧ ನಡೆಸಿದ ಅಬ್ಬರದ ಆಟ. ಎರಡೂ ಸರಣಿಗಳಲ್ಲಿ ಕ್ಲಾಸ್​ ಆ್ಯಂಡ್​ ಮಾಸ್​ ಬ್ಯಾಟಿಂಗ್​​ನಿಂದಲೇ ಕೌಂಟರ್​​ ನೀಡಿದ್ದ ಪಂತ್​, ಗೇಮ್​ ಚೇಂಜರ್​​ ಆಗಿದ್ರು. ಗಬ್ಬಾದಲ್ಲಿ ಸಿಡಿಸಿದ 89 ರನ್​ ಮತ್ತು ಅಹ್ಮದಾಬಾದ್​ನಲ್ಲಿ ಶತಕದ ಮೂಲಕ ಅಬ್ಬರಿಸಿದ​ ಸರಣಿ ಗೆಲುವಿನ ರೂವಾರಿಯಾಗಿದ್ದ ಪಂತ್​​, ಇದೀಗ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ನಲ್ಲೂ ಮ್ಯಾಚ್​ ವಿನ್ನಿಂಗ್​ ಪರ್ಫಾರ್ಮೆನ್ಸ್​ ನೀಡೋ ಭರವಸೆ ಮೂಡಿಸಿದ್ದಾರೆ.

ಸದ್ಯ ರೆಡ್​​ ಹಾಟ್​ ಫಾರ್ಮ್​ನಲ್ಲಿರೋ ರಿಷಭ್​​ ಪಂತ್​ ಅಬ್ಬರದ ಆಟ ಹೀಗೆ ಮುಂದುವರೆದರೆ, ಕೆಲವೇ ದಿನಗಳಲ್ಲಿ ದಿಗ್ಗಜ್ಜರ ದಾಖಲೆಯನ್ನ ಅಳಿಸಿ ಹಾಕಿ, ಮೊದಲ ಸ್ಥಾನಕ್ಕೇರೋದ್ರಲ್ಲಿ ಅನುಮಾನವೇ ಇಲ್ಲ.

The post ಪಂತ್ ಪರಾಕ್ರಮಕ್ಕೆ ಎದುರಾಳಿ ಬೌಲರ್​ಗಳು ಗಢಗಢ appeared first on News First Kannada.

Source: newsfirstlive.com

Source link