ದಕ್ಷಿಣ ಆಫ್ರಿಕಾದಲ್ಲಿ ನಿನ್ನೆ ನಡೆದ ಎರಡನೇ ಏಕದಿನ ಕ್ರಿಕೆಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಐದು ಬಾಲ್ ಎದುರಿಸಿ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿದ್ರು. ಆದರೆ ಆಟದ ಪ್ರತಿ ಕ್ಷಣದಲ್ಲೂ ಅತ್ಯುತ್ಸಾಹಿ, ಕ್ರೀಡಾಭಿಮಾನದಿಂದಿರುವ ವಿರಾಟ್, ತುಂಬಾ ಎಂಜಾಯ್ ಮಾಡ್ತಿರ್ತಾರೆ. ಅದರಂತೆ ನಿನ್ನೆಯ ದಿನ ರಿಷಭ್ ಪಂತ್ ಅವರ ಸ್ಫೋಟಕ ಬ್ಯಾಟಿಂಗ್ಗಳನ್ನ ಕಣ್ತುಂಬಿಕೊಂಡು ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಪಂತ್ ಅವರು ಬಾಲ್ ಅನ್ನ ಬೌಂಡರಿ ಲೈನ್ಗೆ ಕಳುಹಿಸುತ್ತಿದ್ದಂತೆ, ಡ್ಯಾನ್ಸ್ ಮಾಡಿ ಹುರಿದುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಸದ್ಯ ಕೊಹ್ಲಿ ಮಾಡಿರುವ ಡ್ಯಾನ್ಸ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಟ್ರೆಂಡಿಂಗ್ನಲ್ಲಿದೆ. ವಿಡಿಯೋದಲ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ವಿರಾಟ್, ಶಿಖರ್ ಧವನ್ ಜೊತೆ ಕೂತಿರ್ತಾರೆ. ಪಂತ್ ಚೆನ್ನಾಗಿ ಬ್ಯಾಟ್ ಬೀಸುತ್ತಿದ್ದಂತೆ ವಿರಾಟ್ ಕೂತಲ್ಲಿಯೇ ಡ್ಯಾನ್ಸ್ ಮಾಡುತ್ತಾರೆ.
ಇನ್ನು ಮೊದಲ ಏಕದಿನ ಸರಣಿಯಲ್ಲಿ 51 ರನ್ಗಳಿಸಿದ್ದ ಕೊಹ್ಲಿ ಎರಡನೇ ಪಂದ್ಯದಲ್ಲಿ ಯಾವುದೇ ರನ್ ಗಳಿಸಿಲ್ಲ. ಅಂದ್ಹಾಗೆ ನಿನ್ನೆ ರಿಷಭ್ ಪಂತ್ 71 ಬಾಲ್ ಎದುರಿಸಿ, 85 ರನ್ಗಳಿಸಿದ್ದರು. ಎರಡು ಸಿಕ್ಸ್ ಹಾಗೂ 10 ಬೌಂಡರಿಗಳನ್ನ ಬಾರಿಸುವ ಮೂಲಕ ಟೀಂ ಇಂಡಿಯಾದ ಮೊತ್ತವನ್ನ 287ಕ್ಕೆ ಹೆಚ್ಚಿಸಿದ್ದರು.
virat kohli reaction after rishabh pant six
pic.twitter.com/KG1nhR0AZa
— munchin
(@buzy_introvert) January 21, 2022
The post ಪಂತ್ ಬಿಗ್ ಹಿಟ್.. ವಿರಾಟ್ ಸೂಪರ್ ಡ್ಯಾನ್ಸ್.. ಟ್ರೋಲ್ ಆದ ‘ಕಿಂಗ್’..! appeared first on News First Kannada.