ಪಂದ್ಯದೂದ್ದಕ್ಕೂ ಆ್ಯಕ್ಟೀವ್​ ಮೂಡ್​​.. ಮೈದಾನದಿಂದ ಅಭಿಮಾನಿಗಳನ್ನ ರಂಜಿಸಿದ ಕೊಹ್ಲಿ

ಪಂದ್ಯದೂದ್ದಕ್ಕೂ ಆ್ಯಕ್ಟೀವ್​ ಮೂಡ್​​.. ಮೈದಾನದಿಂದ ಅಭಿಮಾನಿಗಳನ್ನ ರಂಜಿಸಿದ ಕೊಹ್ಲಿ

ಚೊಚ್ಚಲ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಟೂರ್ನಿಗೆ ತೆರೆ ಬಿದ್ದಿದೆ. ಮಳೆಯ ಕಾಟದ ನಡೆವೆಯೂ ನಡೆದ ಭಾರತ-ನ್ಯೂಜಿಲೆಂಡ್​ ನಡುವಿನ ಪಂದ್ಯ, ಅಭಿಮಾನಿಗಳಿಗೆ ಬೇಸರ ತರಿಸಿದ್ರಲ್ಲಿ ಅನುಮಾನವೇ ಇಲ್ಲ. ಫ್ಯಾನ್ಸ್​​ ಮಾತ್ರವಲ್ಲ, ಕ್ರಿಕೆಟಿಗರು ಕೂಡ ಕೆಲಕಾಲ ಮಂಕಾಗಿದ್ರು. ಇದನ್ನ ಕೊಹ್ಲಿ ತನ್ನ ವಿಶಿಷ್ಠ ಫಾರ್ಮಾಲಾದೊಂದಿಗೆ ಬಗೆಹರಿಸಿದ್ರು. ಹಾಗಾದ್ರೆ, ಕೊಹ್ಲಿ ಮಾಡಿದ್ದೇನು?

ಐಸಿಸಿ​ ಟೆಸ್ಟ್​ ಚಾಂಪಿಯನ್​ಶಿಪ್​ ಎಂಬ ಕಾನ್ಸೆಪ್ಟ್​​ ಪರಿಚಯಿಸಿದ ದಿನದಿಂದಲೂ, ಕುತೂಹಲ ಕೆರಳಿಸಿದ್ದ ಚೊಚ್ಚಲ ಟೂರ್ನಿಗೆ ತೆರ ಬಿದ್ದಿದೆ. ಸೌತ್​​ಹ್ಯಾಂಪ್ಟನ್​ನಲ್ಲಿ ಕಳೆ 6 ದಿನಗಳಿಂದ ನಡೆದ ಫೈನಲ್​ ಪಂದ್ಯದೊಂದಿಗೆ, ಸುದೀರ್ಘ 2 ವರ್ಷಗಳ ಕಾಲ ನಡೆದ ಟೂರ್ನಿಗೆ ಎಂಡ್​​ ಕಾರ್ಡ್​ ಬಿದ್ದಿದೆ. ಆದ್ರೆ, 2 ವರ್ಷಗಳಿಂದ ಕುತೂಹಲದಿಂದ ಕಾದಿದ್ದ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆ ಮೂಡಿಸಿದೆ.

ಐಸಿಸಿ ಟೂರ್ನಿಗಳೆಂದ ಮೇಲೆ, ಇಡೀ ವಿಶ್ವ ಕ್ರಿಕೆಟ್​​ ಲೋಕದ ಚಿತ್ತ ಅದರತ್ತ ನೆಟ್ಟಿರುತ್ತೆ. ಹಾಗೇಯೇ ನಿನ್ನೆಗೆ ಅಂತ್ಯ ಕಂಡ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಕೂಡ, ಇಡೀ ವಿಶ್ವದ ಗಮನ ಸೆಳೆದಿತ್ತು. ಫೈನಲ್​ ಪಂದ್ಯದ ಆರಂಭಕ್ಕೂ ಮೊದಲೇ ಸೋಲು-ಗೆಲುವಿನ ಲೆಕ್ಕಾಚಾರಗಳು, ತಂಡದ ಆಯ್ಕೆ ಸೇರಿದಂತೆ ನಡೆದ ಹಲ ಚರ್ಚೆಗಳು ಪಂದ್ಯದ ಮೇಲೆ ಕುತೂಹಲವನ್ನ ಹೆಚ್ಚಿಸಿದ್ವು. ಆದ್ರೆ ಮಳೆ ಫ್ಯಾನ್ಸ್​​ ಆಸೆಗೆ ನೀರೆರಚಿತು. ಮೊದಲ ಹಾಗೂ 4ನೇ ದಿನದಾಟ ಮಳೆಯಿಂದಾಗಿ ಸಂಪೂರ್ಣ ರದ್ದಾದ್ರೆ, ಉಳಿದ 4 ದಿನಗಳ ಆಟ ನಿಗಧಿತ ಓವರ್​​ಗಳಿಗಿಂತ ಮುಂಚೆಯೇ ಅಂತ್ಯ ಕಂಡವು.

ಮೈದಾನದಿಂದ ಅಭಿಮಾನಿಗಳನ್ನ ರಂಜಿಸಿದ ಕೊಹ್ಲಿ
ಮೊದಲ ಇನ್ನಿಂಗ್ಸ್​ನಲ್ಲಿ 44, 2ನೇ ಇನ್ನಿಂಗ್ಸ್​​ನಲ್ಲಿ ಕೇವಲ 13 ರನ್​..! ಹೀಗಿದ್ದೂ ಕೊಹ್ಲಿ ಅಭಿಮಾನಿಗಳನ್ನ ರಂಜಿಸಿದ್ದು, ಹೇಗೆ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಟೀಮ್​ ಇಂಡಿಯಾ ನಾಯಕ ಕೊಹ್ಲಿ ಅಭಿಮಾನಿಗಳನ್ನ ರಂಜಿಸಿದ್ದು ಬ್ಯಾಟಿಂಗ್​ನಿಂದಲ್ಲ…! ಫೀಲ್ಡಿಂಗ್​ ವೇಳೆ ಪಂದ್ಯದೂದ್ದಕ್ಕೂ ಇದ್ದ ರೀತಿಯಿಂದ.

ಇಡೀ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು ಸಹಜವಾಗಿಯೇ ಅಭಿಮಾನಿಗಳಲ್ಲಿ ಬೇಸರ ತರಿಸಿತ್ತು. ಇದನ್ನ ಸ್ಪಷ್ಟವಾಗಿ ಅರಿತಿದ್ದ ಟೀಮ್​ ಇಂಡಿಯಾ ನಾಯಕ ಅಭಿಮಾನಿಗಳನ್ನ ಸಾಧ್ಯವಾದಷ್ಟು ರಂಜಿಸುವ ಪ್ರಯತ್ನ ಮಾಡಿದ್ರು. ಮೈದಾನದಲ್ಲಿ ಸದಾ ಅಗ್ರೆಸ್ಸೀವ್​ ಮೂಡ್​ನಲ್ಲೇ ಹೆಚ್ಚು ಕಾಣಿಸಿಕೊಳ್ತಿದ್ದ ಕೊಹ್ಲಿ, ಸೌತ್​​ಹ್ಯಾಪ್ಟಂನ್​ನಲ್ಲಿ ಫ್ಯಾನ್ಸ್​​ಗಳನ್ನ ಎಂಗೇಜ್​ ಮಾಡುವ ಪ್ರಯತ್ನ ಮಾಡಿದ್ರು. ಮೈದಾನದಲ್ಲಿ ಅಭಿಮಾನಿಗಳಿಗಾಗಿ ಬಾಂಗ್ರಾ ನೃತ್ಯ ಮಾಡಿದ್ದೇ ಇದಕ್ಕೆ ಸಾಕ್ಷಿ!

ಪಂದ್ಯದೂದ್ದಕ್ಕೂ ಆ್ಯಕ್ಟೀವ್​ ಮೂಡ್​​ನಲ್ಲಿದ್ದ ಕ್ಯಾಪ್ಟನ್​ ವಿರಾಟ್​​
ಸಲಹೆ-ಸೂಚನೆಗಳೊಂದಿಗೆ ಆಟಗಾರರ ಬೂಸ್ಟ್​​ ಅಪ್​

ಬಾಂಗ್ರಾ ನೃತ್ಯ ಮಾಡಿ ಅಭಿಮಾನಿಗಳನ್ನ ರಂಜಿಸಿದ್ದ ಕೊಹ್ಲಿ, 5 ದಿನದಾಟದಲ್ಲಿ ಸ್ವತಃ ಟೀಮ್​ ಇಂಡಿಯಾ ಆಟಗಾರರನ್ನ ಹುರಿದುಂಬಿಸಿದ್ರು. ನಾಯಕನಾಗಿ ಸಹ ಆಟಗಾರರನ್ನ ಆ್ಯಕ್ಟೀವ್​ ಆಗಿ ಇಟ್ಟುಕೊಳ್ಳೋದು ಹೇಗೆ ಅನ್ನೋದನ್ನ, ಸೌತ್​ಹ್ಯಾಂಪ್ಟನ್​ ಮೈದಾನದಲ್ಲಿ ವಿರಾಟ್​ ಮಾಡಿ ತೋರಿಸಿದ್ರು. ಸ್ವತಃ ಅಂತರಾಷ್ಟ್ರೀಯ ಕ್ರಿಕೆಟ್​​​ ಕೌನ್ಸಿಲ್ ಟ್ವಿಟ್​​ ಮಾಡಿರುವ ವಿಡಿಯೋ ತುಣಕೆ ಅದನ್ನ ಸಾರಿ ಹೇಳ್ತಿದೆ.

ತನ್ನ ಅಗ್ರೆಸ್ಸೀವ್​ ಎಕ್ಸ್​​​ಪ್ರೆಶನ್ಸ್​ಗಳಿದಂಲೇ ಸುದ್ದಿಯಾಗ್ತಿದ್ದ ಕೊಹ್ಲಿ, ಇನ್ನಿಂಗ್ಸ್​​ನೂದ್ದಕ್ಕೂ ಸಖತ್​ ಆ್ಯಕ್ಟೀವ್​ ಆಗಿದ್ರು. ಎಸೆತದಿಂದ ಎಸೆತಕ್ಕೆ ಇಡೀ ತಂಡಕ್ಕೆ ಸಲಹೆ ಸೂಚನೆಗಳನ್ನ ನೀಡ್ತಿದ್ರು. ಇಷ್ಟೇ ಅಲ್ಲ..! ಪ್ರತಿ ವಿಕೆಟ್​​ ಬಿದ್ದಾಗಲೂ ಬೌಲರ್​​ಗಿಂತ ಹೆಚ್ಚು ಸೆಲಬ್ರೇಷನ್​ ಮಾಡ್ತಿದ್ರು. ಇದರೊಂದಿಗೆ ಇಡೀ ತಂಡವನ್ನ ಅಗ್ರೆಸ್ಸೀವ್​ ಮೂಡ್​​ನಲ್ಲಿಟ್ಟಿದ್ರು.

ಟೀಮ್​ ಇಂಡಿಯಾದ ಎನರ್ಜಿ ಬೂಸ್ಟರ್​​​ ಕೊಹ್ಲಿ​​..!
ಕೇವಲ ಇದೊಂದು ಪಂದ್ಯ ಮಾತ್ರವಲ್ಲ, ನಾಯಕನ ಜವಾಬ್ಧಾರಿ ಹೊತ್ತಿರುವ ವಿರಾಟ್​​​ ಕೊಹ್ಲಿ, ಇಡೀ ಟೀಮ್​ ಇಂಡಿಯಾದ ಎನರ್ಜಿ ಬೂಸ್ಟರ್​ ಅಂದ್ರೆ ತಪ್ಪಾಗಲ್ಲ. ಪ್ರತಿ ಪಂದ್ಯ, ಪ್ರತಿ ಸರಣಿಗಳಲ್ಲೂ ಆಟಗಾರರನ್ನ ಸದಾ ಆ್ಯಕ್ಟೀವ್ ಆಗಿ​ ಇಟ್ಟುಕೊಳ್ಳುವ ಪ್ರಯತ್ನವನ್ನ ಕೊಹ್ಲಿ ಮಾಡ್ತಾರೆ. ಅದರಲ್ಲೂ ಮೈದಾನಕ್ಕಿಳಿದಾಗ ಕೊಹ್ಲಿಯಲ್ಲಿರುವ ವಿಶಿಷ್ಠ ಆ್ಯಟಿಟೂಡ್,​​ ಎಲ್ಲರ ಗಮನ ಸೆಳೆಯುತ್ತೆ. 2019ರ ಏಕದಿನ ವಿಶ್ವಕಪ್​ ಟೂರ್ನಿಯ ವೇಳೆಯೂ ಐಸಿಸಿ ಕೊಹ್ಲಿಯ ವಿಡಿಯೋ ಫೂಟೆಜ್​ ಒಂದನ್ನ ಬಿಡುಗಡೆ ಮಾಡಿತ್ತು. ಅದರಲ್ಲೂ ಕೊಹ್ಲಿಯ ವಿಶೇಷ ಹಾವ-ಭಾವಗಳು ದಾಖಲಾಗಿದ್ವು.

ಇಷ್ಟೇ ಅಲ್ಲ..! ಈ ಹಿಂದೆ ಇಂಗ್ಲೆಂಡ್​ ತಂಡ ಭಾರತಕ್ಕೆ ಬಂದಾಗ ನಡೆದ ಟೆಸ್ಟ್​ ಸರಣಿಯಲ್ಲೂ ಮೈದಾನದಿಂದಲೇ ಅಭಿಮಾನಿಗಳನ್ನ ಕೊಹ್ಲಿ ಎಂಗೇಜ್​ ಮಾಡಿದ್ರು. ಆ ಸಂದರ್ಭದ ವಿಡಿಯೋಗಳು ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿದ್ವು.

ಒಟ್ಟಿನಲ್ಲಿ ನಾಯಕ ಅನ್ನೋ ಕಾರಣಕ್ಕೋ ಅಥವಾ ಅಗ್ರೆಸ್ಸೀವ್​ ಮೂಡ್​ನಲ್ಲಿರ್ತಾರೆ ಅನ್ನೋ ಕಾರಣಕ್ಕೋ,​ ಕೊಹ್ಲಿ ಮೈದಾನದಲ್ಲಿದ್ದಷ್ಟೂ ಕಾಲ ಕ್ಯಾಮರಾದ ಹದ್ದಿನ ಕಣ್ಣಿನಲ್ಲಿಯೇ ಇರ್ತಾರೆ. ಈ ಕಾರಣಕ್ಕೆ ಟೀಮ್​ ಇಂಡಿಯಾ ನಾಯಕ ಸೋಷಿಯಲ್​ ಮಿಡಿಯಾದಲ್ಲಿ ಹೆಚ್ಚು ಟ್ರೆಂಡಿಂಗ್​ನಲ್ಲಿರೋದು ಕೂಡ.

The post ಪಂದ್ಯದೂದ್ದಕ್ಕೂ ಆ್ಯಕ್ಟೀವ್​ ಮೂಡ್​​.. ಮೈದಾನದಿಂದ ಅಭಿಮಾನಿಗಳನ್ನ ರಂಜಿಸಿದ ಕೊಹ್ಲಿ appeared first on News First Kannada.

Source: newsfirstlive.com

Source link