
ಯಾವನು ಅಭಿವೃದ್ಧಿ ಮಾಡೋಕೆ ಹೇಳಿದ್ದು, ನೀವೆಲ್ಲ ನಿಧಿ ಕಳ್ಳರು ಎಂದು ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಹಿಂದೂ ಜಾಗರಣ ಕಾರ್ಯಕರ್ತರು
ಕಳೆದ ಒಂದು ವರ್ಷದಿಂದ ಸುಮಾರು ಸುಮಾರು 2 ಕೋಟಿ ವೆಚ್ಚದಲ್ಲಿ ಬಿ.ಶ್ರೀರಾಮುಲು ಪಂಪಾ ಸರೋವರ ಅಭಿವೃದ್ಧಿ ಕಾರ್ಯ ಮಾಡಿಸುತ್ತಿದ್ದಾರೆ. ಆದ್ರೆ ಪುನಶ್ಚೇತನ ಹೆಸರಲ್ಲಿ ಮಹಾಲಕ್ಷ್ಮಿ ಮೂರ್ತಿಗೆ ಧಕ್ಕೆಯಾಗಿದೆ. ಇಲ್ಲಿಂದ ಹೋಗಿ ಎಂದು ಹಿಂದೂ ಜಾಗರಣ ಕಾರ್ಯಕರ್ತರು ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಮೂಲ ಲಕ್ಷ್ಮೀ ವಿಗ್ರಹಕ್ಕೆ ಧಕ್ಕೆ ಮಾಡಿದ ಆರೋಪ ಕೇಳಿ ಬಂದಿದ್ದು ಹಿಂದೂ ಜಾಗರಣ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಪಂಪಾ ಸರೋವರದ ಪುನಶ್ಚೇತನ ಹೆಸರಲ್ಲಿ ಮೂಲ ಲಕ್ಷ್ಮೀ ವಿಗ್ರಹಕ್ಕೆ ಧಕ್ಕೆ ಮಾಡಲಾಗುತ್ತಿದೆ. ಗರ್ಭಗುಡಿಯಲ್ಲಿದ್ದ ಮೂಲ ವಿಗೃಹ ಕಿತ್ತಿಟ್ಟಿದ್ದಕ್ಕೆ ಹಿಂದೂ ಜಾಗರಣ ಕಾರ್ಯಕರ್ತರು, ಕೆಲಸ ಮಾಡ್ತಿದ್ದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ನಿಧಿಗಾಗಿ ನೀವು ಇಲ್ಲಿಗೆ ಬಂದಿದ್ದೀರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಕಳೆದ ಒಂದು ವರ್ಷದಿಂದ ಸುಮಾರು ಸುಮಾರು 2 ಕೋಟಿ ವೆಚ್ಚದಲ್ಲಿ ಬಿ.ಶ್ರೀರಾಮುಲು ಪಂಪಾ ಸರೋವರ ಅಭಿವೃದ್ಧಿ ಕಾರ್ಯ ಮಾಡಿಸುತ್ತಿದ್ದಾರೆ. ಆದ್ರೆ ಪುನಶ್ಚೇತನ ಹೆಸರಲ್ಲಿ ಮಹಾಲಕ್ಷ್ಮಿ ಮೂರ್ತಿಗೆ ಧಕ್ಕೆಯಾಗಿದೆ. ಇಲ್ಲಿಂದ ಹೋಗಿ ಎಂದು ಹಿಂದೂ ಜಾಗರಣ ಕಾರ್ಯಕರ್ತರು ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವನು ಅಭಿವೃದ್ಧಿ ಮಾಡೋಕೆ ಹೇಳಿದ್ದು, ನೀವೆಲ್ಲ ನಿಧಿ ಕಳ್ಳರು ಎಂದು ಆಕ್ರೋಶ ಹೊರ ಹಾಕಿದ್ದಾರೆ.