ದಕ್ಷಿಣ ಕನ್ನಡ: ವಿದ್ಯುತ್ ಶಾಕ್ ತಗುಲಿ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಕೊಕ್ಕಡ ಸಮೀಪದ ಪಟ್ರಮೆ ಎಂಬಲ್ಲಿ ಕೋಡಂದೂರು ನಿವಾಸಿ ಹರೀಶ್ ಎಂಬವರ ಪತ್ನಿ ಗೀತಾ ಹಾಗೂ ನಾಲ್ಕೂವರೆ ವರ್ಷದ ಮಗು ಭವಿಷ್ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಇಂದು ಮುಂಜಾನೆ ಗೀತಾರವರು ಮಗು ಭವಿಷ್‌ನನ್ನು ಹಿಡಿದುಕೊಂಡು ಮನೆ ಸಮೀಪದ ತೋಟಕ್ಕೆ ನೀರು ಬಿಡಲು ಪಂಪ್ ಸ್ವಿಚ್ ಆನ್ ಮಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪಂಪ್ ಸ್ವಿಚ್ ಆನ್ ಮಾಡಲು ತೆರಳಿದ್ದ ತಾಯಿ ಮತ್ತು ಮಗು ಮನೆಗೆ ಹಿಂದಿರುಗದೇ ಇರುವ ಕಾರಣ ಪತಿ ಹರೀಶ್ ತೋಟದ ಪಂಪ್ ಹೌಸ್ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

The post ಪಂಪ್ ಸ್ವಿಚ್​​ ಹಾಕಲು ಹೋದಾಗ ಕರೆಂಟ್​​​ ಶಾಕ್​ ಹೊಡೆದು ತಾಯಿ-4 ವರ್ಷದ ಮಗು ದುರ್ಮರಣ appeared first on News First Kannada.

Source: newsfirstlive.com

Source link