ನಿನ್ನೆಯಷ್ಟೇ ಕೋವಿಡ್ 3 ನೇ ಅಲೆಯಿಂದ ನೀವು ಉಳಿಯದಿದ್ದರೂ ಪರವಾಗಿಲ್ಲ.. ನಾನು ಉಳಿಯಬೇಕೆಂದು ಹೇಳಿಕೆ ಕೊಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಬಿಜೆಪಿ ನಾಯಕ ಉಮೇಶ್ ಕತ್ತಿ ಇಂದು ಮತ್ತೊಂದು ಹೇಳಿಕೆ ಕೊಟ್ಟಿದ್ದಾರೆ.

ಸುದ್ದಿಗೋಷ್ಟಿಯೊಂದರಲ್ಲಿ ಮಾತನಾಡಿದ ಉಮೇಶ್ ಕತ್ತಿ ಹೇಳಿದ್ದಿಷ್ಟು..

ಸಾಯೋವ್ರು ಯಾಕ್ ಸತ್ರೂ ಲೆಕ್ಕವಿಲ್ಲ.. ಈ ಕೋವಿಡ್ ಸಂದರ್ಭದಲ್ಲಿ ತೊಂದರೆಗಳು ಆಗ್ತಿವೆ.. ಯಾಕ್ ಸತ್ರು ಅಂತ ಅರ್ಥವಾಗ್ತಾ ಇಲ್ಲ..ರೆಮ್ಡಿಸಿವಿರ್ 6 ಇಂಜೆಕ್ಸನ್ ತಗೊಂಡ್ರೂ ಸಾಯ್ತಾರೆ..ಅದಕ್ಕೆ ಏನ್ ಮಾಡೋಕಾಗುತ್ತೆ..? ಹಾರ್ಟ್ ಅಟ್ಯಾಕ್, ಶುಗರ್, ಬೇರೆ ಬೇರೆ ರೋಗಗಳೂ ಇವೆ. ಅಂತವ್ರು ಸತ್ರೆ ಏನೂ ಮಾಡಕ್ಕಾಗಲ್ಲ.. ಅಥವಾ ಧೈರ್ಯ ಕಳೆದುಕೊಂಡವನಿಗೂ ಏನೂ ಮಾಡೋಕಾಗಲ್ಲ.. ಅವರಿಗೆ ಧೈರ್ಯ ತುಂಬೋದು ಹೇಗೆ..? ಪಂಪ್ ಹೊಡೆದು ಧೈರ್ಯ ತುಂಬೋಕಾಗಲ್ಲ.. ಸಾಯುವವರ ಸಂಖ್ಯೆ ಹೆಚ್ಚಾಗ್ತಾ ಇದೆ ಒಪ್ತೀವಿ.. ಮೆಡಿಸಿನ್ ಕೊಟ್ಟು, ಆಕ್ಸಿಜನ್ ಕೊಟ್ಟು ಎಲ್ಲಾ ಆದ್ಮೇಲೂ ಸಾಯೋರಿದ್ದಾರೆ.. ಅದಕ್ಕೆ ಪರಿಹಾರ ಇಲ್ಲ.

The post ಪಂಪ್ ಹೊಡ್ದು ಧೈರ್ಯ ತುಂಬೋಕಾಗುತ್ತಾ..? ಅಂತವ್ರ್ ಸತ್ರೆ ಏನೂ ಮಾಡೊಕಾಗಲ್ಲ- ಉಮೇಶ್ ಕತ್ತಿ appeared first on News First Kannada.

Source: newsfirstlive.com

Source link