ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಾಯಿಸಲು ಮುಂದಾಯ್ತಾ ? ಕಸಾಪ | Kannada Sahitya Parishat will Change Name of Pampa Mahakavi Road ?


ನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) (Kannada Sahitya Parishat KSP) ಕವಿ ಪಂಪನ ಹೆಸರಿನ ರಸ್ತೆಯ ಹೆಸರನ್ನು ಬದಲಾಯಿಸಲು ಮುಂದಾಯ್ತಾ ? ಎಂಬ ಪ್ರಶ್ನೆ ಉದ್ಭವವಾಗಿದೆ.

ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಾಯಿಸಲು ಮುಂದಾಯ್ತಾ ? ಕಸಾಪ

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) (Kannada Sahitya Parishat KSP) ಕವಿ ಪಂಪನ ಹೆಸರಿನ ರಸ್ತೆಯ ಹೆಸರನ್ನು ಬದಲಾಯಿಸಲು ಮುಂದಾಯ್ತಾ ? ಎಂಬ ಪ್ರಶ್ನೆ ಉದ್ಭವವಾಗಿದೆ. ಮಿಂಟೋ ಆಸ್ಪತ್ರೆಯ ಮುಂಬಾಗದಿಂದ ಸಾಗುವ ಪಂಪ ಮಹಾಕವಿ ರಸ್ತೆಯನ್ನು ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಅಂತಾ ತಿದ್ದುಪಡಿ ಮಾಡಲು ಕಸಪಾ ಅಧ್ಯಕ್ಷ ಮಹೇಶ್​ ಜೋಶಿ ಮುಂದಾಗಿದ್ದಾರೆ.

ಪರಿಷತ್​ನ ನಿರ್ಧಾರಕ್ಕೆ ಕರ್ನಾಟಕ ಜೈನ್ ಅಸೋಷಿಯೇಷನ್ ತೀರ್ವ ವಿರೋಧ ವ್ಯಕ್ತಪಡಿಸಿದೆ. ಈ ನಿರ್ಧಾರ ಜೈನ್ ಕವಿಗೆ ಮಾಡುವ ಅವಮಾನ ಅಂತಾ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಹೆಸರಿಗೆ ಸಾಹಿತಿಗಳಿಂದಲೂ ವಿರೋಧ ವ್ಯಕ್ತವಾಗುತ್ತಿದೆ.

ಕನ್ನಡ ಸಾಹಿತ್ಯದಲ್ಲಿ ಆದಿ ಕವಿ ಪಂಪಾ ಅವರಿಗೆ ವಿಶೇಷ ಅಸ್ಮಿತೆ ಇದೆ. ಜೈನ್ ಕವಿ ಪಂಪನ ಹೆಸರು ಬದಲಾಯಿಸುವ ಚಿಂತನೆ ಕೈಬಿಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಜೈನ ಸಮುದಾಯ ಕಸಪಾ ಅಧ್ಯಕ್ಷರ ಜೊತೆ ವಾಗ್ವದಕ್ಕೆ ಮುಂದಾಗಿದೆ.

ಪಂಪನ ಹೆಸರ ಬದಲಾಯಿಸದಂತೆ ಅಧ್ಯಕ್ಷರ ಜೊತೆ ಮಾತಿನ ಚಕುಮಕಿ ನಡೆದಿದ್ದು, ಬೇರೆ ಬೇರೆ ಜಿಲ್ಲಗಳಿಂದ ಬಂದಿರುವ ಜೈನ್ ಸಮುದಾಯದ ಜಿಲ್ಲಾ ಅಧ್ಯಕ್ಷರುಗಳಿಂದ ಯಾವುದೇ ಕಾರಣಕ್ಕೂ ಜೈನ್ ಕವಿ ಪಂಪನ ಹೆಸರಿನ ರಸ್ತೆ ಬದಲಾಯಿಸದಂತೆ ಕಸಾಪ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.