ತುಮಕೂರು: ತೈಲ ಬೆಲೆ ಹೆಚ್ಚಳ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ 100 ನಾಟ್​​ಔಟ್ ಎಂಬ​ ಕಾರ್ಯಕ್ರಮದ ನಡೆಸುತ್ತಿದ್ದು, ಇಂದು ಮೂರನೇ ದಿನ ಪ್ರತಿಭಟನೆ ಮುಂದುವರೆದಿದೆ. ಇಂದು ಡೀಸಲ್ ಬೆಲೆ ಕೂಡ 100 ರೂಪಾಯಿ ಮುಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಬಂದು ಜನರನ್ನು ಕ್ಯೂನಲ್ಲಿ ನಿಲ್ಲಿಸಿದೆ. ಹೀಗಾಗಿ ನನ್ನ ಹೊಟ್ಟೆ ಉರಿಯುತ್ತಿದೆ. ನೋಟು ಬದಲಾವಣೆ, ಜನ್ ಧನ್, ಅಕ್ಸಿಜನ್, ಬೆಡ್, ರೆಮಿಡಿಸಿವರ್ ಗಾಗಿ ಕ್ಯೂನಲ್ಲಿ ನಿಲ್ಲಿಸಲಾಗಿದೆ. ನಂತರ ಹೆಣ ಸುಡಲೂ ಕ್ಯೂ, ಈಗ ನಾವು ರೇಷನ್ ಕಿಟ್ ಕೊಡಲೂ ಕ್ಯೂ ನಲ್ಲಿ ನಿಲ್ಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲೆಕ್ಷನ್​​​ಗಾಗಿ ಕಾಂಗ್ರೆಸ್ ಪಕ್ಷ ಈ ಕಾರ್ಯಕ್ರಮ ಮಾಡುತ್ತಿಲ್ಲ. ಪಕೋಡ ಮಾರಿ ಅಂದ್ರು, ಪಕೋಡ ಮಾಡೋಣ ಎಂದರೇ ಎಣ್ಣೆ 250 ರೂಪಾಯಿ ಆಗಿದೆ. ನೌಕರರ ಸಂಬಳ, ದಿನಗೂಲಿ ನೌಕರರ ಸಂಬಳ, ಪೊಲೀಸರ ಸಂಬಳ ಜಾಸ್ತಿ ಮಾಡಬೇಕು. ಕೇಂದ್ರ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಿ ಪಿಕ್ ಪಾಕೆಟ್​​ ಮಾಡುತ್ತಿದೆ ಎಂದು ಆರೋಪಿಸಿದರು.

The post ‘ಪಕೋಡ ಮಾರಿ ಅಂದ್ರು, ಆದ್ರೆ ಎಣ್ಣೆ ₹250 ಆಗಿದೆ’- ಡಿ.ಕೆ ಶಿವಕುಮಾರ್ ಆಕ್ರೋಶ appeared first on News First Kannada.

Source: newsfirstlive.com

Source link