ಮೈಸೂರು: ಮಾಜಿ ಸಚಿವ ಜಿಟಿ ದೇವೇಗೌಡ ಸೇರಿ ಕಾಂಗ್ರೆಸ್ಗೆ ಯಾರೇ ಬಂದರೂ ಸ್ವಾಗತಿಸುತ್ತೇವೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದು, ಹಿನಕಲ್ನಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಜೆಡಿಎಸ್ ನಾಯಕ ಜಿಟಿ ದೇವೇಗೌಡ ಹಂಚಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜಿ.ಟಿ ದೇವೇಗೌಡ ನಾನು ಬಹಳ ಕಾಲ ಒಟ್ಟಿಗೆ ಇದ್ದಿವಿ. ಆದ್ರೆ ಕಳೆದ ಭಾರಿ ಜಿ.ಟಿ ದೇವೇಗೌಡ ಈ ಕ್ಷೇತ್ರದಲ್ಲಿ ನನ್ನನ್ನೆ ಸೋಲಿಸಿದ್ರು. ಈಗ ಜಿಟಿಡಿ ಕಾಂಗ್ರೆಸ್ಗೆ ಬರ್ತಾರೆ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಜಿಟಿಡಿಗೂ ಕಾಂಗ್ರೆಸ್ ಮೇಲೆ ಒಲವಿದೆ. ಆದ್ರೆ ಹೆಚ್ಡಿಕೆ ಹಾಗೂ ದೇವೇಗೌಡ್ರು ಜಿಟಿಡಿ ಅವರನ್ನ ಉಳಿಸಿಕೊಳ್ಳಲು ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಕಾಂಗ್ರೆಸ್ ಗೆ ಬರೋದು ಬಿಡೋದು ಜಿಟಿಡಿಗೆ ಬಿಟ್ಟದ್ದು. ಅಷ್ಟೇ ಅಲ್ಲದೆ ಜಿಟಿಡಿ ಸೇರಿ ಕಾಂಗ್ರೆಸ್ಗೆ ಯಾರೆ ಬಂದ್ರು ಸ್ವಾಗತಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಇದೇ ವೇಳೆ ಶಾಸಕ ಜಿ.ಟಿ. ದೇವೇಗೌಡ, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ್ರು.. 1983 ರಿಂದ ನಿರಂತರವಾಗಿ ನಾನು-ಸಿದ್ದರಾಮಯ್ಯ ಜೊತೆಯಾಗಿ ಬೆಳೆದಿದ್ದೇವೆ. ಕಾರಣಾಂತರಗಳಿಂದ ಸಿದ್ದರಾಮಯ್ಯ ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರ್ಪಡೆಯಾಗಿ ಸಿಎಂ ಆಗಿದ್ರು. ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ಹಲವು ಯೋಜನೆಗಳು ಜಾರಿಗೆ ತಂದ್ರು. ಅಷ್ಟೇ ಅಲ್ಲ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಜವಾಬ್ದಾರಿಯುತವಾಗಿ ಕೆಲಸ ಕಾರ್ಯ ಮಾಡಿ, ಜನ ಮೆಚ್ಚುಗೆ ಪಡೆದುಕೊಂಡಿದ್ದಾರೆ ಅಂತ ಭಾಷಣ ಉದ್ದಕ್ಕೂ ಸಿದ್ದರಾಮಯ್ಯರನ್ನ ಜಿ.ಟಿ. ದೇವೇಗೌಡ ಹಾಡಿ ಹೊಗಳಿದ್ದಾರೆ.