ಪಕ್ಷದಲ್ಲಿ ಸಹಿ ಸಂಗ್ರಹ, ಒತ್ತಡ ರಾಜಕಾರಣಕ್ಕೆ ಆಸ್ಪದವಿಲ್ಲ -ರೇಣುಕಾಚಾರ್ಯಗೆ ಎಚ್ಚರಿಕೆ

ಪಕ್ಷದಲ್ಲಿ ಸಹಿ ಸಂಗ್ರಹ, ಒತ್ತಡ ರಾಜಕಾರಣಕ್ಕೆ ಆಸ್ಪದವಿಲ್ಲ -ರೇಣುಕಾಚಾರ್ಯಗೆ ಎಚ್ಚರಿಕೆ

ಹುಬ್ಬಳ್ಳಿ: ಸಿಎಂ ಬಿಎಸ್​ವೈ ಪರ ಸಹಿ ಸಂಗ್ರಹ ಮಾಡಿದ್ದೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಟೀಲ್.. ನಮ್ಮ ಪಾರ್ಟಿಯಲ್ಲಿ ಸಹಿ ಸಂಗ್ರಹ, ಒತ್ತಡ, ಒತ್ತಾಯ ಅಂತ ವಿಷಯಗಳಿಗೆ ಆಸ್ಪದವಿಲ್ಲ. ನಮ್ಮದು ಶಾಸನಬದ್ಧ ಪಾರ್ಟಿ. ರಾಷ್ಟ್ರೀಯ ನಾಯಕರು, ಹೈಕಮಾಂಡ್ ಏನ್ ಸೂಚಿಸುತ್ತೋ ಪಾಲನೆ ಮಾಡುವ ಪಕ್ಷ ಎಂದರು.

ಅದನ್ನೆ ನಿನ್ನೆ ಸಿಎಂ ಚೆನ್ನಾಗಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕರು ಏನ್ ಹೇಳ್ತಾರೆ ಅದರ ಮೇಲೆ ನನ್ನ ಕೆಲಸ ಅಂದಿದ್ದಾರೆ. ಅದನ್ನ ಪಕ್ಷದ ಕಾರ್ಯಕರ್ತರು, ನಾಯಕರು, ಶಾಸಕರು ಅರ್ಥ ಮಾಡಿಕೊಳ್ಳಬೇಕು. ಹಿಗಾಗೇ ಇಲ್ಲಿ ಸಹಿ ಸಂಗ್ರಹದ ಅವಶ್ಯಕತೆ ಇಲ್ಲ. ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ.

ಯಾರಾದ್ರು ಇಂತಹ ಕೆಲಸಕ್ಕೆ ಮುಂದಾದ್ರೆ ಅವರನ್ನ ಕರೆದು ಮಾತನಾಡುತ್ತೇನೆ. ರೇಣುಕಾಚಾರ್ಯ ಅವರನ್ನ ಕರೆದು ಮಾತನಾಡುತ್ತೇನೆ. ಶಾಸಕರು ಯಾರೂ ಅವರವರ ಕ್ಷೇತ್ರ ಬಿಟ್ಟು ತೆರಳಬಾರದು. ಕೊರೊನಾ ನಿಯಂತ್ರಣ ಕೆಲಸ ಮಾಡಬೇಕು. ಎಲ್ಲವನ್ನ ಪಾರ್ಟಿ ಗಮನಿಸುತ್ತಿದೆ. ಇನ್ಮೇಲೆ ಅನಿವಾರ್ಯ ಇದ್ದರೆ ಬೆಂಗಳೂರಿಗೆ ಹೋಗಲಿ. ಜನ ನಮಗೆ ಆಶೀರ್ವಾದ ಮಾಡಿದ್ದು ಜನಸೇವೆ ಮಾಡೋದಕ್ಕೆ. ನಮ್ಮ ಪಕ್ಷದಲ್ಲಿ ಸರ್ವ ಸಮ್ಮಿತಿಯ ನಾಯಕ ಬಿ.ಎಸ್.ಯಡಿಯೂರಪ್ಪ. ಹೀಗಾಗೇ ಯಾವುದೇ ಚರ್ಚೆಗಳಿಲ್ಲ, ಸಿಎಂ ಹುದ್ದೆ ಖಾಲಿ ಇಲ್ಲ ಎಂದರು.

The post ಪಕ್ಷದಲ್ಲಿ ಸಹಿ ಸಂಗ್ರಹ, ಒತ್ತಡ ರಾಜಕಾರಣಕ್ಕೆ ಆಸ್ಪದವಿಲ್ಲ -ರೇಣುಕಾಚಾರ್ಯಗೆ ಎಚ್ಚರಿಕೆ appeared first on News First Kannada.

Source: newsfirstlive.com

Source link