ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿದ್ದೇನೆ: ಮಲ್ಲಿಕಾರ್ಜುನ ಖರ್ಗೆ | Entered Congress president Election race to strengthen party Says Mallikarjun Kharge


ಬಿಜೆಪಿ ಯಾವಾಗಲೂ ಕಾಂಗ್ರೆಸ್ ಬಗ್ಗೆ ಕೆಳಮಟ್ಟದಲ್ಲಿ ಮಾತಾಡುತ್ತದೆ. ಬಿಜೆಪಿ ಯಾವಾಗ ಚುನಾವಣೆ ಮಾಡಿದೆ?ಗಾಂಧಿ ಪರಿವಾರ ಈ ದೇಶಕ್ಕೆ ಬಹಳಷ್ಟು ಮಾಡಿದೆ. ಅವರು ಜೀವ ತ್ಯಾಗ ಮಾಡಿದ್ದಾರೆ

ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿದ್ದೇನೆ: ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

ದೆಹಲಿ: ಕಾಂಗ್ರೆಸ್ (Congress) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಶುಕ್ರವಾರ ನಾಮಪತ್ರ ಸಲ್ಲಿಸಿದ್ದು ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಖರ್ಗೆ ನಡೆಸಿರುವ ಮೊದಲ ಸುದ್ದಿಗೋಷ್ಠಿ ಇದಾಗಿದೆ. ಕೆಪಿಸಿಸಿಗೂ ಕೂಡ ನಾನು ಅಧ್ಯಕ್ಷ ಆಗಿದ್ದೆ. ಬಾಲ್ಯದಿಂದ ಈತನಕ ನಾನು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈಗಲೂ ನಾನು ಹೋರಾಟ ಮಾಡುತ್ತೇನೆ.ಕರ್ನಾಟಕ ದಲ್ಲಿ ವಿಪಕ್ಷ ನಾಯಕ, ಬಹುತೇಕ ಎಲ್ಲಾ ಸಚಿವ ಸ್ಥಾನಗಳನ್ನು ಕೂಡ ಅಲಂಕರಿಸಿದ್ದೇನೆ. ಸಚಿವನಾಗಿ ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಇದು ಪಾರ್ಟ ಟೈಮ್ ಜಾಬ್ ಅಲ್ಲ ಫುಲ್ ಟೈಮ್ಸ್ ಜಾಬ್. ನಾನು ಯಾವಾಗಲೂ ಫುಲ್ ಟೈಮ್ ಕೆಲಸ ಮಾಡಿದ್ದೇನೆ. ಯಾವಾಗಲೂ ಹೃದಯದಿಂದ ಕೆಲಸ ಮಾಡಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ. ನಿರುದ್ಯೋಗ, ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚುತ್ತಿದೆ, ಹಣದುಬ್ಬರ ಹೆಚ್ಚುತ್ತಿದೆ. ಶ್ರೀಮಂತರು, ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗುತ್ತಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಖರ್ಗೆ ಬಿಜೆಪಿ ಎಂಟು ವರ್ಷಗಳಲ್ಲಿ ಅವರು ಹೇಳಿದ ಯಾವುದಕ್ಕೂ ಪರಿಹಾರ ನೀಡಿಲ್ಲ ಎಂದಿದ್ದಾರೆ.

ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಯಾರು ಚುನಾವಣೆ ಗೆ ಸ್ಪರ್ಧಿಸಲ್ಲ ಎಂದರು. ಹೀಗಿರುವಾಗ ನೀನು ಚುನಾವಣಾ ಗೆ ಸ್ಪರ್ಧೆ ಮಾಡಬೇಕು ಎಂದು ಹಲವರು ಹೇಳಿದ್ದಾರೆ. ಹಾಗಾಗಿ ಸ್ಪರ್ಧೆಗೆ ಇಳಿದೆ. ನಾನು ಯಾರ ವಿರುದ್ದವೂ ಸ್ಪರ್ಧೆ ಮಾಡುತ್ತಿಲ್ಲ. ನನ್ನ ವಿಚಾರ, ಸಿದ್ದಾಂತ ಗಳನ್ನು ಮುಂದಿಟ್ಟು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಪಕ್ಷದ ಸಿದ್ದಾಂತ, ವಿಚಾರಧಾರೆ ಮುಂದೆ ಇಟ್ಟುಕೊಂಡು ಸ್ಪರ್ಧೆ ಮಾಡುತ್ತಿದ್ದೇನೆ ನನ್ನ ಪಕ್ಷದ ಎಲ್ಲರ ಸಹಕಾರ ಕೂಡ ಬೇಕು ಎಂದು ಖರ್ಗೆ ಮನವಿ ಮಾಡಿದ್ದಾರೆ.

ಬಿಜೆಪಿ ಯಾವಾಗಲೂ ಕಾಂಗ್ರೆಸ್ ಬಗ್ಗೆ ಕೆಳಮಟ್ಟದಲ್ಲಿ ಮಾತಾಡುತ್ತದೆ. ಬಿಜೆಪಿ ಯಾವಾಗ ಚುನಾವಣೆ ಮಾಡಿದೆ?ಗಾಂಧಿ ಪರಿವಾರ ಈ ದೇಶಕ್ಕೆ ಬಹಳಷ್ಟು ಮಾಡಿದೆ. ಅವರು ಜೀವ ತ್ಯಾಗ ಮಾಡಿದ್ದಾರೆ. 10 ವರ್ಷ ಸರ್ಕಾರ ಮಾಡಿದ್ರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಧಿಕಾರಕ್ಕೆ ಹಪಹಪಿಸಿದ್ರಾ..? ಅವರ ತ್ಯಾಗ್ಯ ಬಹಳಷ್ಟು ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಜಿ-23 ಅನ್ನೋದು ಇಲ್ಲ. ಎಲ್ಲರೂ ಒಟ್ಟುಗೂಡಿ ಬಿಜೆಪಿ, ಆರ್ ಎಸ್ ಎಸ್ ವಿರುದ್ದ ಹೋರಾಟ ಮಾಡುತ್ತೇವೆ. ತರೂರ್, ನನ್ನ ಸಹೋದರ, ತಮ್ಮ. ಸ್ಪರ್ಧೆ ಮಾಡುತ್ತೇನೆ ಎಂದು ತರೂರ್ ಫೋನ್ ಮಾಡಿ ಹೇಳಿದ್ದರು.
ಶಶಿತರೂರ್ ಹೈಕಮಾಂಡ್ ಸಂಸ್ಕತಿ ಗೆ ಫುಲ್ ಸ್ಟಾಪ್ ಇಡುವ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದಾಗ ನಾನು ತರೂರ್ ಪ್ರಶ್ನೆಗೆ ಉತ್ತರ ಕೊಡಲು ಬಂದಿಲ್ಲ. 9300 ಮತದಾರರ ಮುಂದೆ ನನ್ನ ವಿಚಾರ ಮುಂದಿಡುತ್ತೇನೆ. ಸಿದ್ದಾಂತ, ವಿಚಾರ ಪ್ರಸ್ತಾಪ ಮಾಡುತ್ತೇನೆ. ಹೈಕಮಾಂಡ್ ರಿಮೋಟ್ ಕಂಟ್ರೋಲ್ ಏನೂ ಇಲ್ಲ ಎಂದಿದ್ದಾರೆ.

ಏತನ್ಮಧ್ಯೆ, ಖರ್ಗೆ ಪರ ಪ್ರಚಾರ ಮಾಡಲು ಪಕ್ಷದ ಮೂವರು ನಾಯಕರು ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ನಾನು, ದೀಪೇಂದರ್ ಎಸ್ ಹೂಡಾ ಮತ್ತು ಸೈಯದ್ ನಸೀರ್ ಹುಸೇನ್ ಅವರು ಪಕ್ಷದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆಯ ಪ್ರಚಾರಕ್ಕಾಗಿ ಅಧಿಕೃತ ವಕ್ತಾರ ಹುದ್ದೆಗೆ ರಾಜೀನಾಮೆ ನೀಡಿದ್ದೇವೆ ಮತ್ತು ಈ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕೆಂದು ಬಯಸುತ್ತೇವೆ” ಎಂದು ಕಾಂಗ್ರೆಸ್ ನ ಗೌರವ್ ವಲ್ಲಭ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.