ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಸೇರಲು ಪ್ಲಾನ್; ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಬಾಗಿಲು ತಟ್ಟಿದ್ರಾ? | Sumalatha Ambareesh is likely to join the BJP party


ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಸೇರಲು ಪ್ಲಾನ್; ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಬಾಗಿಲು ತಟ್ಟಿದ್ರಾ?

ಸುಮಲತಾ ಅಂಬರೀಶ್

ಮಂಡ್ಯ: ಪಕ್ಷೇತರ ಸಂಸದೆ ಆಗಿರುವ ಸುಮಲತಾ ಅಂಬರೀಷ್ (Sumalatha Ambareesh) ಭಾರತೀಯ ಜನತಾ ಪಾರ್ಟಿಗೆ ಸೇರಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮದ್ದೂರು ಕ್ಷೇತ್ರದಲ್ಲಿ ಅಭಿಷೇಕ್ ಅಂಬರೀಶ್ (Abhishek Ambareesh) ಅಖಾಡಕ್ಕೆ ಇಳಿಸಲು ಪ್ಲಾನ್ ಮಾಡಿರುವ ಸುಮಲತಾ, ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಬಾಗಿಲು ತಟ್ಟಿದ್ರಾ ಎಂಬ ಪ್ರಶ್ನೆ ಮೂಡಿದೆ. ಮದ್ದೂರಿನಲ್ಲಿ ಎಸ್ಎಂ ಕೃಷ್ಣ ಸಹೋದರನ ಮಗನಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಬಹುತೇಕ ನಿರ್ಧಾರವಾಗಿದೆ. ಈಗಾಗಲೇ ಗುರುಚರಣೆಗೆ ಟಿಕೆಟ್ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶವಿಕುಮಾರ್ ಹೇಳಿದ್ದಾರೆ. ಇದರಿಂದ ಅನಿವಾರ್ಯವಾಗಿ ಸುಮಲತಾ ಬಿಜೆಪಿ‌ಗೆ ಒಲವು ತೋರಿಸಿರುವಂತೆ ಕಾಣುತ್ತಿದೆ.

ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸುಮಲತಾ ನಡೆ ಸದ್ಯ ಕುತೂಹಲಕ್ಕೆ ಕಾರಣವಾಗಿದೆ. ತನ್ನ ಬೆಂಬಲಿಗರ ಜೊತೆ ಬಿಜೆಪಿ ಸೇರ್ಪಡೆಗೆ ಸುಮಲತಾ ಪ್ಲಾನ್ ಮಾಡಿದ್ದಾರೆ. ಸಾಕಷ್ಟು ಬಾರಿ ಬಿಜೆಪಿ ನಾಯಕರ ಜೊತೆಯೂ ಮಾತುಕತೆ ನಡೆಸಿದ್ದಾರೆ. ನಿನ್ನೆ ಮದುವೆಯೊಂದರಲ್ಲಿ ಬೆಂಬಲಿಗರ ಜೊತೆ ಸುಮಲತಾ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಇನ್ನು ಮೇ ತಿಂಗಳಲ್ಲಿ ಬೆಂಬಲಿಗರ ಜೊತೆ ಬಿಜೆಪಿ ಸೇರುವ ಪ್ಲಾನ್ ಮಾಡಿದ್ದಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಆರಂಭವಾಗಿದೆ.

ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡುವಾಗ ಅಭಿಷೇಕ್ ಅಂಬರೀಷ್ ರಾಜಕೀಯಕ್ಕೆ ಪ್ರವೇಶಿಸುವ ಸುಳಿವನ್ನು ನೀಡಿದ್ದರು. ಜನರು ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಅಂತ ಹೇಳಿದ್ದರು. ಭವಿಷ್ಯದಲ್ಲಿ ಏನೇನು ಆಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಹೀಗಾಗಿ ಜನ ಬಯಸಿದರೆ ಎಲೆಕ್ಷನ್​ನಲ್ಲಿ ನಿಲ್ಲುತ್ತೇನೆ. ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಿಗೆ ಉತ್ತಮ ಶಾಸಕರು ಸಿಗಬೇಕು ಅಂದಿದ್ದರು.

TV9 Kannada


Leave a Reply

Your email address will not be published.