‘ಪಕ್ಷ ನನಗೆ ಮಾತೃ ಸಮಾನ.. ಅಭಿಮಾನ ಶಿಸ್ತು ಮೀರಬಾರದು’ ಬೆಂಬಲಿಗರಿಗೆ ಬಿಎಸ್​ವೈ ಸಂದೇಶ

‘ಪಕ್ಷ ನನಗೆ ಮಾತೃ ಸಮಾನ.. ಅಭಿಮಾನ ಶಿಸ್ತು ಮೀರಬಾರದು’ ಬೆಂಬಲಿಗರಿಗೆ ಬಿಎಸ್​ವೈ ಸಂದೇಶ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಟ್ವೀಟ್ ಮಾಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಬೆಂಬಲಿಗರಿಗೆ, ಹಿತೈಷಿಗಳಿಗೆ ಸಂದೇಶವೊಂದನ್ನ ನೀಡಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಸಂದೇಶವೇನು..?
ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ, ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ ಎಂದು ಹೇಳಿದ್ದಾರೆ.

The post ‘ಪಕ್ಷ ನನಗೆ ಮಾತೃ ಸಮಾನ.. ಅಭಿಮಾನ ಶಿಸ್ತು ಮೀರಬಾರದು’ ಬೆಂಬಲಿಗರಿಗೆ ಬಿಎಸ್​ವೈ ಸಂದೇಶ appeared first on News First Kannada.

Source: newsfirstlive.com

Source link