ಪಕ್ಷ ಬಯಸಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧವಾಗಿದ್ದೇನೆ: ನಿಖಿಲ್ ಕುಮಾರಸ್ವಾಮಿ ಹೇಳಿಕೆ | Nikhil Kumaraswamy on participating election JDS Karnataka Politics Mandya News


ಪಕ್ಷ ಬಯಸಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧವಾಗಿದ್ದೇನೆ: ನಿಖಿಲ್ ಕುಮಾರಸ್ವಾಮಿ ಹೇಳಿಕೆ

ನಿಖಿಲ್‌ ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಮಂಡ್ಯ: ಪಕ್ಷ ಬಯಸಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧವಾಗಿದ್ದೇನೆ. ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ಸೋತಾಗಲೇ ನಮ್ಮ ನಡೆ ಹೇಗಿರಬೇಕೆಂದು ತಿಳಿಯಬಹುದು. ಕೆ.ಆರ್. ಪೇಟೆ ಉಪ ಚುನಾವಣೆ ಬಳಿಕ ಪರಿಷತ್ ಎಲೆಕ್ಷನ್‌ ನಡೆಯುತ್ತಿದೆ. ನಾವು ವಿಧಾನಪರಿಷತ್ ಚುನಾವಣೆಯನ್ನ ಎದುರಿಸುತ್ತಿದ್ದೇವೆ. ಒತ್ತಾಯದಿಂದ ಅಪ್ಪಾಜಿಗೌಡರನ್ನ ಚುನಾವಣೆಗೆ ಕಣಕ್ಕಿಳಿಸಿಲ್ಲ ಎಂದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಿಖಿಲ್‌ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಎಂಎಲ್​ಸಿ ಚುನಾವಣೆ ಪ್ರಚಾರ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ 4,025 ಮತಗಳಿವೆ, ಈ ಪೈಕಿ 2,546 ಜೆಡಿಎಸ್ ಬೆಂಬಲಿತ ಸದಸ್ಯರಿದ್ದಾರೆ. ನಗರಸಭೆ, ಪುರಸಭೆಗಳು ಜೆಡಿಎಸ್ ಹಿಡಿತದಲ್ಲಿವೆ. ನಾವು ಸಚಿವರಾಗಿ ಹಲವು ಅಭಿವೃದ್ದಿ ಕೆಲಸ ಮಾಡಿದ್ದೇವೆ. ಹೋದ ಕಡೆಗಳಲ್ಲಿ ನಮಗೆ ಬೆಂಬಲ ಸಿಕ್ತಿದೆ ಎಂದು ಪಾಂಡವಪುರದಲ್ಲಿ ಶಾಸಕ ಸಿ.ಎಸ್ ಪುಟ್ಟರಾಜು ಹೇಳಿಕೆ ನೀಡಿದ್ದಾರೆ.

ನಾನು ಪಕ್ಷ ಬಿಡ್ತೀನಿ ಎಂದು ಯಾರ ಬಳಿಯೂ ಹೇಳಿಲ್ಲ. ಅದ್ಯಾಕೆ ಹಾಗೆ ಸುದ್ದಿ ಮಾಡ್ತಾರೊ ಗೊತ್ತಿಲ್ಲ. ಪಾಂಡವಪುರ ತಾಲೂಕಿನಲ್ಲಿ ಪ್ರಥಮವಾಗಿ ನಾನು ಸಂಸದನಾಗಿ ಸಚಿವನಾಗಿ ಕೆಲಸ ಮಾಡಿದ್ದೀನಿ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಸೇರಿ ಗೆಲ್ಲಿಸಿದ್ದಾರಲ್ಲ, ಈಗ ಅವರು ಹೇಳಬೇಕು. ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳು ಒಂದಾದರೂ ನಾವು ಈ ಚುನಾವಣೆಯಲ್ಲಿ 1 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಬಿಜೆಪಿ ಪಕ್ಷ ಇನ್ನ ಒಂದೂವರೆ ವರ್ಷದಲ್ಲಿ ಏನಾಗುತ್ತೆ ಗೊತ್ತಿಲ್ಲ. ದೇವೇಗೌಡ್ರು, ಕುಮಾರಸ್ವಾಮಿ ಇಬ್ಬರೂ ಎರಡು ದಿನಗಳ ಕಾಲ ಚುನಾವಣಾ ಪ್ರಚಾರ ಕಾರ್ಯ ಮಾಡ್ತಾರೆ. ಈ ಚುನಾವಣೆಯಲ್ಲಿ ನಮಗೆ ಎರಡೂ ಪಕ್ಷಗಳು ಪೈಪೋಟಿನೇ ಅಲ್ಲ. ಕಾಂಗ್ರೆಸ್​ನ ಗೂಳಿಗೌಡ ಯಾರು ಅನ್ನೋದೆ ಜನರಿಗೆ ಗೊತ್ತಿಲ್ಲ. ಜಿಲ್ಲೆಯಲ್ಲಿ ಬಿಜೆಪಿಗೆ ಬೇಸ್ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್ ಸದಸ್ಯತ್ವಕ್ಕೆ ಜೆಡಿಎಸ್​ ನಾಯಕ ಸಿಆರ್ ಮನೋಹರ್​ ರಾಜೀನಾಮೆ

ಇದನ್ನೂ ಓದಿ: ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿಲ್ಲ, ಕಾಂಗ್ರೆಸ್ ನಮ್ಮ ಬೆಂಬಲ ಕೇಳಿಲ್ಲ: ಎಚ್​ಡಿ ಕುಮಾರಸ್ವಾಮಿ

TV9 Kannada


Leave a Reply

Your email address will not be published. Required fields are marked *