ಪಟಿಯಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಘೋಷಣೆ | Amarinder Singh will contest the upcoming Punjab assembly elections from the Patiala assembly constituency


ಪಟಿಯಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಘೋಷಣೆ

ಅಮರಿಂದರ್ ಸಿಂಗ್​

ಪಟಿಯಾಲ: ಮುಂಬರುವ ಪಂಜಾಬ್  ವಿಧಾನಸಭಾ ಚುನಾವಣೆಯಲ್ಲಿ ಪಟಿಯಾಲ ವಿಧಾನಸಭಾ ಕ್ಷೇತ್ರದಿಂದ (Patiala assembly constituency)  ಸ್ಪರ್ಧಿಸುವುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ (Amarinder Singh )ಘೋಷಿಸಿದ್ದಾರೆ. “ನಾನು ಪಟಿಯಾಲದಿಂದ ಸ್ಪರ್ಧಿಸುತ್ತೇನೆ. ಪಟಿಯಾಲ 400 ವರ್ಷಗಳಿಂದ ನಮ್ಮೊಂದಿಗಿದೆ ಮತ್ತು ಸಿಧು ಕಾರಣ ನಾನು ಅದನ್ನು ಬಿಡಲು ಹೋಗುವುದಿಲ್ಲ” ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ತಿಳಿಸಿದ್ದಾರೆ. ಪಟಿಯಾಲಾ ಸಿಂಗ್ ಅವರ ಕುಟುಂಬದ ಭದ್ರಕೋಟೆಯಾಗಿದೆ, ಅವರು ನಾಲ್ಕು ಬಾರಿ ಸ್ಥಾನವನ್ನು ಗೆದ್ದಿದ್ದಾರೆ ಮತ್ತು ಅವರ ಪತ್ನಿ ಪ್ರಣೀತ್ ಕೌರ್ 2014 ರಿಂದ 2017 ರವರೆಗೆ ಮೂರು ವರ್ಷಗಳ ಕಾಲ ಅದನ್ನು ಪ್ರತಿನಿಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿಂಗ್ಅವರ ತಂದೆ ಮಹಾರಾಜ ಸರ್ ಯಾದವಿಂದರ್ ಸಿಂಗ್ ಅವರು ಪಟಿಯಾಲ ರಾಜವಂಶದ ಕೊನೆಯ ಮಹಾರಾಜರಾಗಿದ್ದರು.

TV9 Kannada


Leave a Reply

Your email address will not be published. Required fields are marked *