ಪಠ್ಯಪುಸ್ತಕಗಳಲ್ಲಿ ಬಸವ ಮತ್ತು ಕುವೆಂಪುಗೆ ಆಗಿರುವ ಅವಮಾನಕ್ಕೆ ನಾದಬ್ರಹ್ಮ ಹಂಸಲೇಖ ‘ಕುಪ್ಪಳ್ಳಿ ಕಹಳೆ’ ಮೊಳಗಿಸಿದರು! | Noted composer Hamsalekha starts protest for offence caused to Basavanna and Kuvempu in textbooks ARBನಮ್ಮನ್ನು ಭಾಷಾಂಧರು ಅಂತ ಕರೆದರೂ ಚಿಂತೆಯಿಲ್ಲ, ನಮ್ಮ ನಾಡಿನ ಮಹಾನುಭಾವರಿಗೆ ಆಗಿರುವ ಅವಮಾನಕ್ಕೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

TV9kannada Web Team


| Edited By: Arun Belly

Jun 15, 2022 | 10:44 AM
Shivamogga: ಪಠ್ಯಪುಸ್ತಕಗಳ ಪರಿಷ್ಕರಣೆ ಕುರಿತ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ನಾದಬ್ರಹ್ಮ ಹಂಸಲೇಖಾ (Hamsalekha) ಅವರ ನೇತೃತ್ವದಲ್ಲಿ ಬುಧವಾರದಿಂದ ರಾಷ್ಟ್ರಕವಿ ಕುವೆಂಪು ಅವರು ಜನ್ಮತಳೆದ ಕುಪ್ಪಳ್ಳಿಯಿಂದ (Kuppalli) ಒಂದು ಪ್ರತಿಭಟನೆ ಶುರುವಾಗಿದೆ. ಈ ಸಂದರ್ಭದಲ್ಲಿ ಮಾತಾಡಿದ ಹಂಸಲೇಖ ಅವರು, ನಮಗೆ ಅಂದರೆ ಮಹಾಮನೆ ಕಲ್ಯಾಣ, ಗುರುಮನೆ ಕವಿಶೈಲ. ಬಸವ (Basava) ಅಂದರೆ ಕನ್ನಡ ಮತ್ತು ಕುವೆಂಪು ಅಂದರೆ ಕರ್ನಾಟಕ, ಅವರಿಬ್ಬರಿಗೂ ಅವಮಾನ ಆಗಿದೆ. ನಮಗೆ ನಾಡಗೀತೆ ಇಲ್ಲ, ನಮ್ಮ ನಾಡೇ ಗೀತೆ. ಹಿಂದೆ ಕನ್ನಡಕ್ಕಾಗಿ ಗೋಕಾಕ ಚಳುವಳಿ ನಡೆದಂತೆ ಈಗ ನಾವು ಕುಪ್ಪಳ್ಳಿ ಕಹಳೆ ಊದುತ್ತಿದ್ದೇವೆ, ಇದು ನಾಡಿನಾದ್ಯಂತ ಮೊಳಗಬೇಕು. ನಮ್ಮನ್ನು ಭಾಷಾಂಧರು ಅಂತ ಕರೆದರೂ ಚಿಂತೆಯಿಲ್ಲ, ನಮ್ಮ ನಾಡಿನ ಮಹಾನುಭಾವರಿಗೆ ಆಗಿರುವ ಅವಮಾನಕ್ಕೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published.