
ಬರಗೂರು ರಾಮಚಂದ್ರಪ್ಪ, ನಾಡೋಜ ಡಾ.ಹಂಪ ನಾಗರಾಜಯ್ಯ ಸಿಎಂ ಪತ್ರ ಬರೆದಿದ್ದಾರೆ
ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ ಬರಗೂರು ರಾಮಚಂದ್ರಪ್ಪ, ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಪ್ರೌಢಶಿಕ್ಷಣ ಪಠ್ಯಪುಸ್ತಕಗಳ ಪರಿಷ್ಕರಣೆ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿವಾದಕ್ಕೆ ಸರ್ಕಾರ ತಕ್ಷಣ ತೆರೆ ಎಳೆಯಬೇಕೆಂದು ಆಗ್ರಹಿಸಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa), ನಾಡೋಜ ಡಾ.ಹಂಪ ನಾಗರಾಜಯ್ಯ (Hampa Nagarajaiah) ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಯವರು ತಕ್ಷಣ ಮಧ್ಯಪ್ರವೇಶಿಸಬೇಕು ಅಂತಾ ಮನವಿ ಮಾಡಿರುವ ಹಂಪ ನಾಗರಾಜಯ್ಯ ಅವರು ಪರಿಷ್ಕೃತ ಚಕ್ರತೀರ್ಥ ಪಠ್ಯವನ್ನು ತಡೆಹಿಡಿಯುವಂತೆ ಒತ್ತಾಯಿಸಿದ್ದಾರೆ.
ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ ಬರಗೂರು ರಾಮಚಂದ್ರಪ್ಪ, ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 4ನೇ ತರಗತಿ ‘ಪರಿಸರ ಅಧ್ಯಯನ’ ಪುಸ್ತಕದ ಪರಿಷ್ಕರಣೆ ಮಾಡಿಲ್ಲ. ಕುವೆಂಪು ಕುರಿತ ಪರಿಚಯ ನನ್ನ ನೇತೃತ್ವದ ಸಮಿತಿಯೂ ಬರೆದಿಲ್ಲ. ಈ ಪರಿಚಯವು ಪಠ್ಯಪುಸ್ತಕದ ಮೂಲ ರಚನೆಯಲ್ಲಿ ಬರೆಯಲ್ಪಟ್ಟಿದೆ. ನಮ್ಮ ಕಾಲದ ಪರಿಷ್ಕರಣೆಯಲ್ಲಿ ಇದನ್ನು ಬರೆದಿಲ್ಲ. ನಾನು ‘ಮನುಜ ಮತ ವಿಶ್ವಪಥ’ ಸಂದೇಶದ ಬೆಳಕಿನಲ್ಲಿ ಸಾಗುತ್ತಿದ್ದೇನೆ. ನಾವು ಕುವೆಂಪು ಅವರ ಅರ್ಥಪೂರ್ಣ ಸಾಧನೆ ಸ್ವಲ್ಪವೂ ಕಡೆಗಣಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.