ಚಿಕ್ಕಬಳ್ಳಾಪುರ: ಪಡಿತರ ಪಡೆಯಬೇಕಾದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದಲ್ಲಿ ಕೋವಿಡ್ ಟೆಸ್ಟ್ ಗೆ ಓಳಗಾಗೋದು ಕಡ್ಡಾಯ ಮಾಡಲಾಗಿದೆ.

ಕೋವಿಡ್-19 ಸೋಂಕಿತರ ಪತ್ತೆ ಹಚ್ಚಿ ಸೋಂಕು ತಡೆಗಟ್ಟಲು ಆರೂಢಿ ಗ್ರಾಮಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಈ ಉಪಾಯವನ್ನು ಮಾಡಿವೆ. ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುವ ಗ್ರಾಹಕರಿಗೆ ಮೊದಲು ಸ್ಥಳದಲ್ಲಿಯೇ ಕೋವಿಡ್-19 ಟೆಸ್ಟ್ ಗೆ ಸ್ವಾಬ್ ಸಂಗ್ರಹ ಮಾಡಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿಂದು 5,783 ಕೊರೊನಾ ಪ್ರಕರಣ, 168 ಸಾವು- 15,290 ಡಿಸ್ಚಾರ್ಜ್

ಸುಮಾರು 600 ಕಾರ್ಡ್ ಹೊಂದಿರುವ ನ್ಯಾಯಬೆಲೆ ಅಂಗಡಿ ಇದಾಗಿದ್ದು, ಇಂದಿನಿಂದ ಪಡಿತರ ವಿತರಣೆ ಆರಂಭವಾಗಿದೆ. ನಿರಂತರ ತಪಾಸಣೆ ನಡೆಸುವ ಮೂಲಕ ಸೋಂಕಿತರ ಪತ್ತೆ ಹಚ್ಚುವ ಯೋಜನೆ ರೂಪಿಸಲಾಗಿದೆ. ಕೊರೊನಾ ತಪಾಸಣೆ ಕಾರಣ ಆರಂಭದಲ್ಲಿ ಆತಂಕದಿಂದ ಪಡಿತರ ಪಡೆಯಲು ಗ್ರಾಹಕರು ಹಿಂದೇಟು ಹಾಕಿದ್ದರು. ಸಮಯ ಕಳೆದಂತೆ ತಪಾಸಣೆಗೆ ಒಳಗಾಗಿ ಪಡಿತರ ಪಡೆಯುತ್ತಿದ್ದಾರೆ.

The post ಪಡಿತರ ಬೇಕಂದ್ರೆ ಕೋವಿಡ್ ಟೆಸ್ಟ್ ಕಡ್ಡಾಯ appeared first on Public TV.

Source: publictv.in

Source link