ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ಸ್ ಅವರು ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರವನ್ನ ನಂದ ಕಿಶೋರ್(ಪೊಗರು) ನಿರ್ದೇಶಿಸುತ್ತಿರುವ ವಿಷಯ ಈ ಹಿಂದೆಯೇ ಬಹಿರಂಗವಾಗಿತ್ತು. ಸದ್ಯ ಈ ನೂತನ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಹೊಸಪೇಟೆ ಬಳಿಯ ಶ್ರೀ ಕ್ಷೇತ್ರ ಹುಲಗಿಯ ಹುಲಿಗೆಮ್ಮ ದೇವಿ ಸನ್ನಿಧಿಯಲ್ಲಿ ನೆರವೇರಿದೆ.

ಕೊರೊನಾ ಹಾವಳಿ ಕಡಿಮೆ ಆದ ಬಳಿಕ ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಸಮಾರಂಭ ನಡೆಯಲಿದೆ ಅಂತ ತಿಳಿದು ಬಂದಿದೆ. ಪ್ರಸ್ತುತ ಇರುವ ಈ ಸಂದರ್ಭ ದೂರವಾಗಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಮೊದಲಿನ ಹಾಗೇ ಆರಂಭವಾಗಲಿ ಎನ್ನುವುದೇ ಚಿತ್ರತಂಡದ ಆಶಯ. ಇನ್ನು ಧ್ರುವ ಸರ್ಜಾ ಜೊತೆ ನಂದ ಕಿಶೋರ್​ ‘ದುಬಾರಿ’ ಸಿನಿಮಾ ಅನೌನ್ಸ್​ ಆಗಿ ಪೂಜೆ ಆಗಿತ್ತಾದ್ರೂ, ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಮುಂದೂಡಲಾಗಿದೆ.

‘ಟಗರು’ ಚಿತ್ರದಲ್ಲಿ ‌ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದ ಗುಜ್ಜಲ್ ಪುರುಷೋತ್ತಮ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದು ಪುರುಷೋತ್ತಮ್, ಗುಜ್ಜಲ್ ಟಾಕೀಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರವಾಗಿದೆ. ಈ ಸಿನಿಮಾಗೆ ಕನ್ನಡ ಱಪರ್​ ಚಂದನ್​ ಶೆಟ್ಟಿ ಸಂಗೀತ ನೀಡ್ತಿದ್ದು, ಶೇಖರ್ ಚಂದ್ರು ಛಾಯಾಗ್ರಹಣ ಇರಲಿದೆ. ಕೆ.ಎಂ.ಪ್ರಕಾಶ್ ಸಂಕಲನ, ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ‌.

The post ‘ಪಡ್ಡೆಹುಲಿ’ ಶ್ರೇಯಸ್​ ಹೊಸ ಸಿನಿಮಾಗೆ ಚಾಲನೆ; ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ನಂದ ಕಿಶೋರ್​ appeared first on News First Kannada.

Source: newsfirstlive.com

Source link