ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಬಾಬಾ ರಾಮ್‍ದೇವ್ ಅವರ ಪಂತಂಜಲಿ ಆಯುರ್ವೇದದ ಕೊರೊನಿಲ್ ಕೊರೊನಾ ಔಷಧಿ ಕುರಿತು ಹೇಳಿದ ಬೆನ್ನಲ್ಲೇ ಇದೀಗ ಹರಿಯಾಣದಲ್ಲಿ 1 ಲಕ್ಷ ಔಷಧಿ ಕಿಟ್‍ಗಳನ್ನು ಕೊರೊನಾ ಸೋಂಕಿತರಿಗೆ ಉಚಿತವಾಗಿ ಹಂಚಲಾಗಿದೆ.

ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೊರೊನಾ ಸೋಂಕಿತರು ಬೇಗ ಗುಣಮುಖರಾಗಲಿ ಎಂಬ ಉದ್ದೇಶದಿಂದ ಪತಂಜಲಿ ಆಯುರ್ವೇದದ ಕೊರೊನಿಲ್ ಔಷಧಿಯ 1 ಲಕ್ಷ ಕಿಟ್‍ಗಳನ್ನು ಕಿಟ್‍ಗಳನ್ನು ಉಚಿತವಾಗಿ ಹಂಚಲಾಗುತ್ತಿದೆ. ಈ ಕಿಟ್‍ಗಳ ಅರ್ಧದಷ್ಟು ವೆಚ್ಚವನ್ನು ಪತಂಜಲಿ ಹಾಗೂ ಉಳಿದ ಅರ್ಧ ವೆಚ್ಚವನ್ನು ಸರ್ಕಾರದ ‘ಕೋವಿಡ್ ರಿಲೀಫ್ ಫಂಡ್’ ನಿಂದ ಭರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಹರಿಯಾಣದಲ್ಲಿನ ಕೋವಿಡ್ ಸೋಂಕಿತರಿಗೆ 1 ಲಕ್ಷ ಕೊರೊನಿಲ್ ಕಿಟ್‍ಗಳನ್ನು ಉಚಿತವಾಗಿ ಹಂಚಲಾಗಿದೆ. ಇದರ ಅರ್ಧದಷ್ಟು ಹಣವನ್ನು ಪತಂಜಲಿ ಭರಿಸಿದೆ, ಉಳಿದ ಅರ್ಧ ಹಣವನ್ನು ಸರ್ಕಾರದ ಕೋವಿಡ್ ರಿಲೀಫ್ ಫಂಡ್‍ನಿಂದ ಭರಿಸಲಾಗಿದೆ ಎಂದು ತಿಳಿಸಿದರು.

ಕಿಟ್‍ನಲ್ಲಿ 3 ರೀತಿಯ ಔಷಧಿ ಇದ್ದು, ಕೊರೊನಿಲ್ ಮಾತ್ರೆಗಳು, ಸ್ವಾಸರಿ ವಾತಿ ಹಾಗೂ ಅನು ತೈಲವನ್ನು ಒಳಗೊಂಡಿದೆ. ಬಾಬಾ ರಾಮ್‍ದೇವ್ ಅವರು ಕೊರೊನಾ ಮೊದಲ ಅಲೆ ಪೀಕ್‍ನಲ್ಲಿದ್ದಾಗ ಜೂನ್ 23ರಂದು ಆಯುರ್ವೇದ ಔಷಧಿಯಾದ ಕೊರೊನಿಲ್‍ನ್ನು ಪರಿಚಯಿಸಿದ್ದರು. ಈ ವೇಳೆ ಭಾರೀ ಚರ್ಚೆ ನಡೆದಿತ್ತು.

ಕೇಂದ್ರ ಸರ್ಕಾರದ ಸಹಕಾರದೊಂದಿಗೆ ರಾಜ್ಯದ 8 ಜಿಲ್ಲೆಗಳಲ್ಲಿ ಪ್ರೆಷರ್ ಸ್ವಿಂಗ್ ಅಡ್ಸಪ್ರ್ಷನ್ ಆಕ್ಸಿಜನ್ ಪ್ಲಾಂಟ್‍ಗಳನ್ನು ನಿರ್ಮಿಸಲಾಗುತ್ತಿದೆ. ಈ ಕೆಲಸವನ್ನು ಡಿಆರ್‍ಡಿಒಗೆ ವಹಿಸಿದ್ದು, ಜೂನ್ 30ರೊಳಗೆ ಕೆಲಸ ಪೂರ್ಣಗೊಳ್ಳಲಿದೆ ಎಂದು ಅವರು ವಿವರಿಸಿದರು.

The post ಪತಂಜಲಿಯ ಕೊರೊನಿಲ್ ಔಷಧಿ- 1 ಲಕ್ಷ ಸೋಂಕಿತರಿಗೆ ಉಚಿತವಾಗಿ ಹಂಚಿದ ಹರಿಯಾಣ ಸರ್ಕಾರ appeared first on Public TV.

Source: publictv.in

Source link