ಪತಿಯ ಕಿರುಕುಳ ಹಾಗೂ ವಿಫಲ ದಾಂಪತ್ಯದ ಬಗ್ಗೆ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ಸಾನಿಯಾ ಖಾನ್ ಗಂಡನಿಂದಲೇ ಕೊಲೆಯಾದಳು! | Sania Khan who talked about her failed marriage and torture on Tik Tok killed by her husband in Chicago


ಸಾನಿಯಾ ಟಿಕ್‌ಟಾಕ್‌ನಲ್ಲಿ ಪ್ಲಾಟ್​ಫಾರ್ಮ್​​​ನಲ್ಲಿ, ಮದುವೆ ಬಳಿಕ ಪತಿಯಿಂದ ಹಿಂಸೆ ಅನುಭವಿಸುವ ಮತ್ತು ವಿಚ್ಛೇದನದ ಕಳಂಕ ಹೊತ್ತು ಬದುಕುವ ಅಸಂಖ್ಯಾತ ಮಹಿಳೆಯರ ಧ್ವನಿಯಾಗಿದ್ದಳು. ಸಾನಿಯಾಳ ಸಾವಿಗೆ ಸ್ನೇಹಿತರು ದಿಗ್ಭ್ರಾಂತಿ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.

ಪತಿಯ ಕಿರುಕುಳ ಹಾಗೂ ವಿಫಲ ದಾಂಪತ್ಯದ ಬಗ್ಗೆ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ಸಾನಿಯಾ ಖಾನ್ ಗಂಡನಿಂದಲೇ ಕೊಲೆಯಾದಳು!

ಸಾನಿಯಾ ಖಾನ್‘

ತನ್ನ ವಿಫಲ ದಾಂಪತ್ಯ ಹಾಗೂ ಪತಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಟಿಕ್ ಟಾಕ್ ನಲ್ಲಿ ವಿಡಿಯೋಗಳನ್ನು ಶೇರ್ ಮಾಡಿ ನಂತರ ಅವನಿಂದ ವಿಚ್ಛೇದನ ಪಡೆದ ಪಾಕಿಸ್ತಾನ ಮೂಲದ ಅಮೇರಿಕನ್ ಮಹಿಳೆ ವಿಚ್ಛೇದಿತ ಗಂಡನಿಂದಲೇ ಕೊಲೆಯಾಗಿರುವಳೆಂದು ಬಿಬಿಸಿ ವರದಿ ಮಾಡಿದೆ. ಸದರಿ ಘಟನೆಯು ಕಳೆದ ತಿಂಗಳು ಚಿಕಾಗೋನಲ್ಲಿ ನಡೆದಿದೆ ಎಂದು ವರದಿ ಮಾಡಿರುವ ಮಾಧ್ಯಮವು, ಆಗ ಸಾನಿಯಾ ಖಾನ್ ಟೆನ್ನೆಸ್ಸೀಗೆ ಹೊರಡುವ ತಯಾರಿ ಮಾಡಿಕೊಳ್ಳುತ್ತಿದ್ದಳು ಎಂದಿದೆ. 36-ವರ್ಷ-ವಯಸ್ಸಿನ ರಾಹೆಲ್ ಅಹ್ಮದ್ ಎಂದು ಗುರುತಿಸಲಾಗಿರುವ ಆಕೆಯ ಪತಿ ನಂತರ ಗನ್ನೊಂದರಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಫಾಕ್ಸ್ ನ್ಯೂಸ್ ವರದಿಯ ಪ್ರಕಾರ ಸಾನಿಯಾ, ರಾಹೆಲ್ ಅಹ್ಮದ್ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಟಿಕ್ ಟಾಕ್ನಲ್ಲಿ ಪೋಸ್ಟ್ ಮಾಡಿದ ನಂತರ ಅವನು ಆಕೆಯನ್ನು ಕೊಲ್ಲುವ ಉದ್ದೇಶದಿಂದಲೇ ಜಾರ್ಜಿಯಾದಿಂದ ಚಿಕಾಗೋಗೆ ಬಂದಿದ್ದ.
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಸಾನಿಯಾಳ ಮನೆಯಲ್ಲಿ ಗುಂಡೇಟಿನಿಂದ ಛಿದ್ರಗೊಂಡಿದ್ದ ದೇಹಗಳು ಪತ್ತೆಯಾದವು ಎಂದು ಪೊಲೀಸ್ ನೀಡಿರುವ ಮಾಹಿತಿಯನ್ನು ಫಾಕ್ಸ್ ನ್ಯೂಸ್ ತನ್ನ ವರದಿಯಲ್ಲಿ ಪ್ರಕಟಿಸಿದೆ.

ಜೂನ್ 2021ರಲ್ಲಿ ಅಹ್ಮದ್ ನನ್ನು ಮದುವೆಯಾ ಚಿಕಾಗೋಗೆ ತೆರಳುವ ಸಾನಿಯಾ ಐದು ವರ್ಷಗಳ ಕಾಲ ಅವನೊಂದಿಗೆ ಡೇಟಿಂಗ್ ನಲ್ಲಿದ್ದಳು.

ಫಾಕ್ಸ್ ನ್ಯೂಸ್ ಪ್ರಕಾರ, ಅಹ್ಮದ್ ಕುಟುಂಬವು ಅವನು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿತ್ತು. ಜಾರ್ಜಿಯಾ ಪೊಲೀಸರು ಚಿಕಾಗೋನಲ್ಲಿರುವ ತಮ್ಮ ಸಹೊದ್ಯೋಗಿಗಳಿಗೆ 36 ವರ್ಷ ವಯಸ್ಸಿನ ಅಹ್ಮದ್ ‘ತನ್ನ ಮದುವೆಯನ್ನು ಉಳಿಸಿಕೊಳ್ಳಲು’ ಚಿಕಾಗೋಗೆ (1,100 ಕಿಲೋಮೀಟರ್ಗಳಿಗಿಂತ ದೂರ) ಬಂದಿದ್ದಾನೆ ಎಂದು ತಿಳಿಸಿದ್ದರು.

ಸಾನಿಯಾ ಟಿಕ್‌ಟಾಕ್‌ನಲ್ಲಿ ಪ್ಲಾಟ್​ಫಾರ್ಮ್​​​ನಲ್ಲಿ, ಮದುವೆ ಬಳಿಕ ಪತಿಯಿಂದ ಹಿಂಸೆ ಅನುಭವಿಸುವ ಮತ್ತು ವಿಚ್ಛೇದನದ ಕಳಂಕ ಹೊತ್ತು ಬದುಕುವ ಅಸಂಖ್ಯಾತ ಮಹಿಳೆಯರ ಧ್ವನಿಯಾಗಿದ್ದಳು. ಸಾನಿಯಾಳ ಸಾವಿಗೆ ಸ್ನೇಹಿತರು ದಿಗ್ಭ್ರಾಂತಿ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.

‘29 ವರ್ಷದವಳಾಗಲಿದ್ದ ಆಕೆ ಈ ವರ್ಷ ತನಗೆ ಎಲ್ಲ ಒಳ್ಳೆಯದಾಗಲಿದೆ, ಬದುಕನ್ನು ಹೊಸದಾಗಿ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದೇನೆ, ಅದರ ಬಗ್ಗೆ ನೆನಸಿಕೊಂಡು ರೋಮಾಂಚಿತಳಾಗುತ್ತಿದ್ದೇನೆ,’ ಎಂದು ಯೂನಿವರ್ಸಿಟಿಯಲ್ಲಿ ಸಾನಿಯಾಳ ಸಹಪಾಠಿಯಾಗಿದ್ದ ಬ್ರಿಯಾನಾ ವಿಲಿಯಮ್ಸ್ ಹೇಳಿರುವುದನ್ನು ಪತ್ರಿಕೆ ವರದಿ ಮಾಡಿದೆ.

‘ಸಾನಿಯಾ ತನ್ನ ಸ್ನೇಹಿತರಿಗಾಗಿ ಯಾವುದೇ ತ್ಯಾಗ ಮಾಡಲು ರೆಡಿಯಾಗಿರುತ್ತಿದ್ದಳು’ ಎಂದು ಅಕೆಯ ಅತ್ಯಂತ ಆಪ್ತ ಗೆಳತಿ ಮೆಹ್ರು ಶೇಖ್ ಹೇಳಿದ್ದಾರೆ.

ಇನ್ಸ್ಸ್ಟಾಗ್ರಾಮ್ ನಲ್ಲಿ ಸದಾ ಸಕ್ರಿಯಳಾಗಿರುತ್ತಿದ್ದ ಸಾನಿಯಾ, ಮದುವೆ ಪೋಟೋಗ್ರಫಿ, ಪ್ರಸೂತಿ ಶೂಟ್ಗಳು, ಸೀಮಂತ ಮೊದಲಾದ ಪೋಸ್ಟ್ ಮತ್ತು ಕ್ರಿಯಾಶೀಲತೆಯ ಮುಖಾಂತರವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಳು.

ಟಿಕ್‌ಟಾಕ್ ವೀಡಿಯೊವೊಂದರಲ್ಲಿ, ಸಾನಿಯಾ ತನ್ನ ಸಮುದಾಯ ಮತ್ತು ಕುಟುಂಬ ನೆರವಿಗೆ ಬಾರದ ಬಗ್ಗೆ ಮಾತನಾಡಿದ್ದು ತನ್ನನ್ನು ಸಮುದಾಯ ‘ಕಪ್ಪು ಕುರಿ’ ಎಂದು ಬಣ್ಣಿಸಿಕೊಂಡಿದ್ದಾಳೆ.

‘ದಕ್ಷಿಣ ಏಷ್ಯಾದ ಮಹಿಳೆಯೊಬ್ಬಳಿಗೆ ವಿಚ್ಛೇದನದ ಯಾತನೆ ಮೂಲಕ ಹಾದುಹೋಗುವುವಾಗ ಬದುಕೇ ಕೊನೆಗೊಂಡಂತೆ ಭಾಸವಾಗುತ್ತದೆ,’ ಎಂದು ಒಂದು ಟಿಕ್ ಟಾಕ್ ವಿಡಿಯೋನಲ್ಲಿ ಸಾನಿಯಾ ಹೇಳಿದ್ದನ್ನು ಬಿಬಿಸಿ ವರದಿ ಮಾಡಿದೆ.

ಸಾಯುವ ಸಮಯದಲ್ಲಿ ಸಾನಿಯಾಗೆ ಇನ್ಸ್ಟಾಗ್ರಾಮ್ನಲ್ಲಿ 20,000 ಫಾಲೋಯರ್ಸ್ ಇದ್ದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *