ಪತಿಯ ಮೂರನೇ ದಿನದ ತಿಥಿ ಕಾರ್ಯದ ದಿನವೇ ಪತ್ನಿ ಸಾವು

ಪತಿಯ ಮೂರನೇ ದಿನದ ತಿಥಿ ಕಾರ್ಯದ ದಿನವೇ ಪತ್ನಿ ಸಾವು

ದಾವಣಗೆರೆ: ಕೊರೊನಾ ಮಹಾಮಾರಿಗೆ ಮೂರು ದಿನದ ಅಂತರದಲ್ಲಿ ಪತಿ-ಪತ್ನಿ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಪತಿಯ ಮೂರನೇ ದಿನದ ತಿಥಿ ಕಾರ್ಯದ ದಿನವೇ ಪತ್ನಿ ಮೃತಪಟ್ಟಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾಗಿದ್ದ ಅಜ್ಜಪ್ಪ(54) ಹಾಗೂ ಅವರ ಪತ್ನಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹನುಮಮ್ಮ ಕೋವಿಡ್​​ಗೆ ಬಲಿಯಾದವರು.

ಕಳೆದ ಸೋಮವಾರದಂದು ಕೋವಿಡ್ ಸೋಂಕಿನಿಂದ ಅಜ್ಜಪ್ಪ ಕೊನೆಯುಸಿರೆಳೆದಿದ್ದರು. ನಿನ್ನೆ ಅಜ್ಜಪ್ಪ ಅವರ ತಿಥಿ ದಿನ ಪತ್ನಿ ಹನುಮಮ್ಮ ಕೂಡ ಅಸುನೀಗಿದ್ದಾರೆ.

 

The post ಪತಿಯ ಮೂರನೇ ದಿನದ ತಿಥಿ ಕಾರ್ಯದ ದಿನವೇ ಪತ್ನಿ ಸಾವು appeared first on News First Kannada.

Source: newsfirstlive.com

Source link