ಬಳ್ಳಾರಿ: ಒಂದೇ ದಿನ ಗಂಡ ಹೆಂಡತಿ ಇಬ್ಬರೂ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ನಡೆದಿದೆ. ಬೆಳಗ್ಗೆ ಪತಿ ಸಾವನ್ನಪ್ಪಿದ್ರೆ, ಸಂಜೆ ವೇಳೆ, ಪತ್ನಿ ಸಾವನ್ನಪ್ಪಿದ್ದಾರೆ.

ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿ ಗ್ರಾಮದ 65 ವರ್ಷದ ಪರಮೇಶ್ವರಪ್ಪ ಕೊರೊನಾ ಸೋಂಕು ಗುಣಮುಖರಾಗದೇ ನಿನ್ನೆ  ಸಾವನ್ನಪ್ಪಿದ್ರು. ಪತಿಯ ಅಂತ್ಯಸಂಸ್ಕಾರ ಮಾಡಿ ಮನೆಗೆ ಬಂದಿದ್ದ ಪತ್ನಿಗೆ ಹೃದಯಾಘಾತವಾಗಿ ವಾಮದೇವಮ್ಮ ಕೂಡ  ಸಾವನ್ನಪ್ಪಿದ್ದಾರೆ. ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಪರಮೇಶ್ವರಪ್ಪ ಹಲವು ದಿನಗಳಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಾಯಿದ್ರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮನನೊಂದ ಪತ್ನಿ, ಪತಿಯ ದಾಋಇಯನ್ನೇ ಹಿಡಿದು ಹೋಗಿರೋದು ಗ್ರಾಮಸ್ಥರಿಗೆ  ನೋವುಂಟಾಗಿದೆ.

The post ಪತಿ ಅಂತ್ಯಸಂಸ್ಕಾರ ಮಾಡಿ ಬಂದ ಪತ್ನಿಗೆ ಹೃದಯಾಘಾತ; ಸಾವಿನಲ್ಲೂ ಒಂದಾದ ದಂಪತಿ appeared first on News First Kannada.

Source: newsfirstlive.com

Source link