ಸ್ಯಾಂಡಲ್ವುಡ್ನಲ್ಲಿ ಕೋಟಿ ನಿರ್ಮಾಪಕ ಎಂದೇ ಖ್ಯಾತಿಗಳಿಸಿರುವ ಕೋಟಿ ರಾಮು ಅವರ ನಿರ್ಮಾಣದ ಕೊನೆಯ ಚಿತ್ರವನ್ನು ಪತ್ನಿ ಮಾಲಾಶ್ರೀ ರಿಲೀಸ್ ಮಾಡುತ್ತಿದ್ದಾರೆ. ಈ ಮೂಲಕ ಪತಿ ಕೊನೆಯ ಕನಸಿನ ಚಿತ್ರವನ್ನು ರಿಲೀಸ್ ಮಾಡಲು ಮುಂದಾಗಿದ್ದು ಅದರ ಡೇಟ್ನ್ನು ಘೋಷಿಸಿದ್ದಾರೆ.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಲಕ್ಕಿ ಶಂಕರ್ ನಿರ್ದೇಶನದ ‘ಅರ್ಜುನ್ ಗೌಡ’ ಸಿನಿಮಾ ಡಿಸೆಂಬರ್ 31 ರಂದು ರಿಲೀಸ್ ಆಗುತ್ತಿದೆ. ನಿರ್ಮಾಪಕ ದಿವಂಗತ ಕೋಟಿ ರಾಮು ನಿರ್ಮಾಣದಲ್ಲಿ ಮೂಡಿ ಬಂದಿರುವ ಕೊನೆ ಸಿನಿಮಾ ಇದಾಗಿದೆ. ಹೀಗಾಗಿ ರಾಮು ಪತ್ನಿ ನಟಿ ಮಾಲಾಶ್ರಿ ಅರ್ಜುನ್ ಗೌಡ ಸಿನಿಮಾವನ್ನು ಇದೇ 31 ರಂದು ಬಿಡುಗಡೆ ಮಾಡುವುದಾಗಿ ನಿರ್ಧರಿಸಿದ್ದಾರೆ.
ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡಿದ್ದು ಅರ್ಜುನ್ ಕಿಟ್ಟು ಸಂಕಲನ, ಜೈ ಆನಂದ್ ಛಾಯಾಗ್ರಹಣವಿದೆ. ಇನ್ನು ಪ್ರಜ್ವಲ್ ದೇವರಾಜ್ ಅವರಿಗೆ ಜೋಡಿಯಾಗಿ ಬಿಗ್ಬಾಸ್ ಪ್ರಿಯಾಂಕಾ ತಿಮ್ಮೇಶ್ ಅಭಿನಯಿಸಿದ್ದಾರೆ. ರಾಮು ಅವರ ಸಿನಿಮಾ ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.ಈಗಾಗ್ಲೇ ಟ್ರೈಲರ್ ನಿಂದ ಗಮನ ಸೆಳೆದಿರೋ ಅರ್ಜುನ್ ಗೌಡ, ನೈಜ ಘಟನೆಯನ್ನಾಧರಿಸಿದ ಚಿತ್ರವೆಂಬ ಸೂಚನೆ ಕೊಡ್ತಿದೆ.