ಪತಿ ಹತ್ಯೆಗೆ ಪತ್ನಿಯೇ ಸುಪಾರಿ.. ಆ ಕ್ಷಣದಲ್ಲಿ ಸಿಕ್ಕಿ ಬಿದ್ದಳು ಖತರ್ನಾಕ್​ ಹೆಂಡತಿ!

ಪತಿ ಹತ್ಯೆಗೆ ಪತ್ನಿಯೇ ಸುಪಾರಿ.. ಆ ಕ್ಷಣದಲ್ಲಿ ಸಿಕ್ಕಿ ಬಿದ್ದಳು ಖತರ್ನಾಕ್​ ಹೆಂಡತಿ!

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಗೆ ಮೂಹೂರ್ತವಿಟ್ಟು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಹುಸ್ಕೂರಿನಲ್ಲಿ ನಡೆದಿದೆ.

ಗಿರೀಶ್ ಮತ್ತು ರೂಪ ಎಂಬುವವರು ಆರು ವರ್ಷದ ಹಿಂದೆ ಮದುವೆಯಾಗಿದ್ರು. ರೂಪ ಕೆಲಸಕ್ಕೆ ಹೋಗುತ್ತಿದ್ದಳು, ಈ ನಡುವೆ ಕಲ್ಪ್ ಕುಮಾರ್ ಜೈನ್ ಎಂಬಾತ ರೂಪಳಿಗೆ ಪರಿಚಯವಾಗಿದ್ದಾನೆ. ಕ್ರಮೇಣ ಪರಿಚಯ ಮುಂದುವರೆದು ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಕ್ರಮೇಣ ರೂಪಾಳ ನಡುವಳಿಕೆಯಲ್ಲಿ ವ್ಯತ್ಯಾಸ ಕಂಡ ಗಂಡ ಇನ್ನು ಕೆಲಸಕ್ಕೆ ಹೋಗುವುದು ಬೇಡ ಎಂದಿದ್ದಾನಂತೆ.

ಈ ವಿಷಯವನ್ನು ರೂಪಾ ತನ್ನ ಪ್ರಿಯಕರನಿಗೆ ತಿಳಿಸಿದ್ದಾಳೆ. ತಮ್ಮ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಿದ್ದಾನೆಂದು ​ ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಮುಗಿಸಲು ಸ್ಕೇಚ್ ಹಾಕಿದ್ದಾಳೆ ಎನ್ನಲಾಗಿದೆ. ಜಿಮ್​ನಲ್ಲಿ ಪರಿಚಯವಿದ್ದ ನಾಲ್ವರು ಸ್ನೇಹಿತರಿಗೆ ತನ್ನ ಗಂಡನ ಹತ್ಯೆ ಮಾಡಿದರೆ 15ಲಕ್ಷ ಕೊಡುವುದಾಗಿ ಹೇಳಿದ್ದಾಳೆ. ಅದೇ ಪ್ರಕಾರವಾಗಿ 3ಲಕ್ಷ ರೂ. ಕೊಟ್ಟು ಆದಷ್ಟು ಬೇಗ ಹತ್ಯೆ ಮಾಡುವಂತೆ ಸೂಚಿಸಿದ್ದಾಳೆ ಅನ್ನೋ ಆರೋಪ ಕೇಳಿ ಬಂದಿದೆ.

ಹತ್ಯೆಗೆ ಸ್ಕೆಚ್ ಮುನ್ನ ಪೊಲೀಸರು ಅಟ್ಯಾಕ್​ ಮಾಡಿದ್ದು, ಇನ್ನೇನು ಗಂಡನನ್ನು ಕೊಲ್ಲಬೇಕು ಎಂದು ಹೆಂಡತಿ ಮತ್ತು ಪ್ರಿಯಕರ ಮುಂದಾಗುತ್ತಿದ್ದಂತೆಯೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಈ ವೇಳೆ ಸಿಕ್ಕಿ ಬಿದ್ದ ಖತರ್ನಾಕ್​ ಹೆಂಡತಿ ಗಂಡನ ಕೊಲೆಗೆ ಪ್ರಿಯಕರನ ಜೊತೆ ಸೇರಿ ಸ್ನೇಹಿತರಿಗೆ ಸುಪಾರಿ ನೀಡಿರುವ ಸಂಗತಿ ಬೆಳಕಿಗೆ ಬಂದಿದ್ದು ಪ್ರಿಯಕರ ಕಲ್ಪ್ ಕುಮಾರ್ ಜೈನ್ ಸೇರಿ 6 ಜನ ಆರೋಪಿಗಳನ್ನು ಮಾದನಾಯಕನ ಹಳ್ಳಿ ಪೊಲೀಸರು  ಬಂಧಿಸಿದ್ದಾರೆ.

The post ಪತಿ ಹತ್ಯೆಗೆ ಪತ್ನಿಯೇ ಸುಪಾರಿ.. ಆ ಕ್ಷಣದಲ್ಲಿ ಸಿಕ್ಕಿ ಬಿದ್ದಳು ಖತರ್ನಾಕ್​ ಹೆಂಡತಿ! appeared first on News First Kannada.

Source: newsfirstlive.com

Source link