ಚಾಮರಾಜನಗರ: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಂತ್ಯ ಸಂಸ್ಕಾರವಿಲ್ಲದೇ ಅನಾಥವಾಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿಯಲ್ಲಿ ನಡೆದಿದೆ.

ಮಹದೇವಪ್ಪ(75) ಕೋವಿಡ್​​ನಿಂದ ಮೃತಪಟ್ಟವರು. ಮಹದೇವಪ್ಪ ಅವರ ಪತ್ನಿ ಗಿರಿಜಮ್ಮ ಅವರಿಗೂ ಸೋಂಕು ತುಗುಲಿದ್ದು, ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಇದ್ದ ಒಬ್ಬ ಮಗ ಗಂಗಾಧರ ಕೂಡ ಕಳೆದ ಏಳೆಂಟು ವರ್ಷಗಳ ಹಿಂದೆಯೇ ಮನೆ ಬಿಟ್ಟು ತೆರಳಿದ್ದು, ಅಂತ್ಯಸಂಸ್ಕಾರಕ್ಕೆ ಪತ್ನಿಯು ಇಲ್ಲ, ಮಗನು ಇಲ್ಲದಂತಹ ಕರುಣಾಜನಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ದೂರದ ಸಂಬಂಧಿಕರೇ ಮೃತ ದೇಹದ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

The post ಪತ್ನಿಗೆ ಪಾಸಿಟಿವ್, ಮನೆ ಬಿಟ್ಟು ಹೋಗಿರೋ ಮಗ- ಅನಾಥವಾಯ್ತು ತಂದೆಯ ಮೃತದೇಹ appeared first on News First Kannada.

Source: newsfirstlive.com

Source link