ಬೆಂಗಳೂರು: ಇತ್ತೀಚೆಗಷ್ಟೇ ತನ್ನ ಗಂಡನನ್ನ ತಾನೇ ಕೊಂದು, ಮಹಿಳೆಯೊಬ್ಬಳು ಪೊಲೀಸರಿಗೆ ಶರಣಾಗಿದ್ದ ಸುದ್ದಿ ಭಾರೀ ಸದ್ದು ಮಾಡಿತ್ತು. ಪತಿಯನ್ನ ಕೊಂದಿದ್ದಕ್ಕೆ ಪತಿಯೇ ಕಾರಣ ಅಂತ ಪೊಲೀಸರ ಮುಂದೆ ಆಕೆ ಹೇಳಿ ಕೊಂಡಿದ್ದಳು. ಆದ್ರೀಗ, ಪತ್ನಿಯಿಂದಲೇ ಪತಿ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.
ಕಿರುಕುಳ ಕೊಡ್ತಿದ್ದ ಅಂತ ಕಥೆ ಕಟ್ಟಿದ್ದ ಕಿರಾತಕಿ
ಮಳ್ಳಿ, ಮಳ್ಳಿ ಮಂಚಕ್ಕೆಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದಿದ್ಲು ಈ ಸುಪನಾತಿ ಸುಬ್ಬಿ. ಬ್ಯೂಟೀಷಿಯನ್ ಆದವಳ ಮೋಡಿಗೆ ಬಿದ್ದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್, ಈಕೆಗೆ ಉಡುಗೊರೆ ಕೊಟ್ಟ ಬಂಗ್ಲೆಲೇ, ಅವಳಿಂದ್ಲೇ ಹೆಣವಾಗಿದ್ದ. ಮೊದಲು ಸ್ವಾಮಿರಾಜ್ ಎರಡನೇ ಪತ್ನಿ ನೇತ್ರಾವತಿ, ಗಂಡನ ಕಿರುಕುಳದಿಂದ್ಲೇ ಹೀಗೆ ಮಾಡಿದ್ದಾಳೆ ಅಂತಲೇ ಪೊಲೀಸರು ನಂಬಿದ್ರು. ಆದ್ರೀಗ, ವೈಯ್ಯಾರಿಯ ಹನಿ ಹನಿ ಪ್ರೇಮ್ ಕಹಾನಿ ಬಟಾಬಯಲಾಗಿದೆ.
ಪ್ರಿಯಕರ ಜೊತೆ ಸೇರಿ ಮರ್ಡರ್..
ಕಬ್ಬಿಣದ ರಿಂಚ್ನಿಂದ ಪತಿ ಸ್ವಾಮಿರಾಜ್ನನ್ನ ಕೊಲೆಗೈದು ಮಾದನಾಯನಹಳ್ಳಿ ಪೊಲೀಸ್ ಠಾಣೆಗೆ ಪತ್ನಿ ನೇತ್ರಾ ಶರಣಾಗಿದ್ದಳು. ಸಂಬಂಧಿಗಳೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಲು ಹಿಂಸಿಸುತ್ತಿದ್ದ ಎಂದು ಪೊಲೀಸರ ಬಳಿ ಬೇರೆ ಕಥೆ ಕಟ್ಟಿದ್ದಳು. ಇದೀಗ, ಪೊಲೀಸರ ವಿಚಾರಣೆ ವೇಳೆ ನೇತ್ರಾವತಿ ಕರಾಳ ಮುಖ ಬಿಚ್ಚಿಟ್ಟಿದ್ದಾಳೆ.
ಲವರ್ ಜೊತೆ ಸೇರಿ ಪತಿಗೆ ಇಟ್ಟಿದ್ಲು ಮುಹೂರ್ತ
ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿ ಬಳಿ ಕಾರು, ಬಂಗ್ಲೆ ಕೊಡಿಸಿದ್ರೂ, ಬೇರೊಬ್ಬನ ಜೊತೆ ನೇತ್ರಾ ಅಕ್ರಮ ಸಂಬಂಧ ಹೊಂದಿದ್ದಳಂತೆ. ಅಕ್ರಮ ಸಂಬಂಧದ ವಿಷಯ ತಿಳಿದು ಸ್ವಾಮಿರಾಜ್, ನೇತ್ರಾಳಿಗೆ ವಾರ್ನ್ ಸಹ ಮಾಡಿದ್ದರಂತೆ. ಗಂಡನ ಮಾತನ್ನೂ ಲೆಕ್ಕಿಸದೇ ಪ್ರಿಯಕರನ ಜೊತೆ ಪತ್ನಿ ನೇತ್ರಾ ಹೋಗಿದ್ದಳಂತೆ. ಇದರಿಂದ ಕೋಪಗೊಂಡು ಮನೆಯಲ್ಲಿ ನೇತ್ರಾ ಮತ್ತು ಸ್ವಾಮಿರಾಜ್ ಜಗಳವಾಡಿದ್ದರಂತೆ. ಹೀಗಾಗಿ, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಾನೇ ಅಂತ ಪ್ರಿಯಕರನ ಜೊತೆ ಸೇರಿ, ನೇತ್ರಾ ಪತಿ ಸ್ವಾಮಿರಾಜ್ನನ್ನೇ ಹತ್ಯೆಗೈದಿದ್ದಾಳೆ. ಪ್ರಕರಣ ಸಂಬಂಧ ನೇತ್ರಾ ಪ್ರಿಯಕರ ಭರತ್ ಹಾಗೂ ಆತನ ಸ್ನೇಹಿತ ವಿಜಯ್ನನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಗೊರೆ ಕೊಟ್ಟಿದ್ದ ಬಂಗ್ಲೆಯಲ್ಲೇ ಪತಿ ಹತ್ಯೆ
ಇನ್ನು, ಪೊಲೀಸರ ಮುಂದೆ ತಾನು ಶರಣಾದ್ರೆ, ತನ್ನ ಪ್ರಿಯಕರ ಹಾಗೂ ಸ್ನೇಹಿತ ಸೇಫ್ ಆಗ್ತಾರೆ ಅಂತ ನೇತ್ರಾ ಈ ರೀತಿ ಪ್ಲಾನ್ ಮಾಡಿದ್ಲಂತೆ. ಜೊತೆಗೆ ಲಾಯರ್ ಒಬ್ಬರಿಗೆ 50 ಸಾವಿರ ಕೊಟ್ಟು, ಜಾಮೀನು ಕೊಡಿಸುವಂತೆಯೂ ಡೀಲ್ ಮಾಡಿಕೊಂಡಿದ್ಲು ಅನ್ನೋದು ತನಿಖೆಯಿಂದ ಹೊರಬಿದ್ದಿದೆ. ಎಷ್ಟೇ ಪಾಪ ಮಾಡಿದ್ರು, ಕೊನೆಗೆ ನರಕದಲ್ಲೇ ಜಾಗ ಅನ್ನೋ ಹಾಗೆ, ಎಷ್ಟೇ ಖತರ್ನಾಕ್ ಪ್ಲಾನ್ ಮಾಡಿದ್ರು, ಕೊನೆಗೂ ಜೈಲೂಟವೇ ಗ್ಯಾರೆಂಟಿ ಅನ್ನೋದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ.
ವಿಶೇಷ ಬರಹ: ಅಂಕಿತಾ ರೈ, ನ್ಯೂಸ್ಫಸ್ಟ್, ಬೆಂಗಳೂರು