ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಕೊಲೆಗೈದ ಪತಿ | Young man was killed by his husband for having an immoral relationship with his wife in Yadgir


ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಪತಿ ಕೊಲೆ ಮಾಡಿರುವ ಘಟನೆ ಯಾದಗಿರಿ ತಾಲೂಕಿನ ಕಡೇಚೂರ್ ಬಳಿ ನಿನ್ನೆ (ಆ 4) ರಂದು ನಡೆದಿದೆ.

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಕೊಲೆಗೈದ ಪತಿ

ಪ್ರಾತಿನಿಧಿಕ ಚಿತ್ರ

ಯಾದಗಿರಿ: ಪತ್ನಿಯೊಂದಿಗೆ (Wife) ಅನೈತಿಕ ಸಂಬಂಧ (Immoral Relations) ಹೊಂದಿದ್ದ ಯುವಕನನ್ನು ಪತಿ (Husband) ಕೊಲೆ (Murder) ಮಾಡಿರುವ ಘಟನೆ ಯಾದಗಿರಿ (Yadgiri) ತಾಲೂಕಿನ ಕಡೇಚೂರ್ ಬಳಿ ನಿನ್ನೆ (ಆ 4) ರಂದು ನಡೆದಿದೆ. ಸಿದ್ದಪ್ಪ(25) ಕೊಲೆಯಾದ ಯುವಕ. ನಾಗರಾಜ್ ಕೊಲೆಗೈದ ಆರೋಪಿ. ಶಹಾಪುರ‌ ತಾಲೂಕಿನ ಬೋಳಾರಿ ನಿವಾಸಿಯಾಗಿರುವ ಸಿದ್ದಪ್ಪ ಮತ್ತು ನಾಗರಾಜ್​ ಪತ್ನಿ ಬೆಂಗಳೂರಿನಲ್ಲಿ ಒಂದೇ ಕಡೆ ಕೆಲಸ ಮಾಡುವಾಗ ಪರಿಚಯವಾಗಿದ್ದರು.

ಮುಂದೆ ಸಿದ್ದಪ್ಪ ನಾಗರಾಜ್​ ಪತ್ನಿಯೊಂದಿಗೆ ಕಳೆದ 2 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದನು. ಈಗ ನಾಗರಾಜ್​ನಿಗೆ ವಿಷಯ ತಿಳಿದು ಸಿದ್ದಪ್ಪನನ್ನು ಬಡಿಗೆಯಿಂದ ಹೊಡೆದು ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ಕುಟುಂಬದ ಮೂವರು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತಾಯಿ, ಮಗು ಸಾವಿನ ರಹಸ್ಯ ಬಯಲು

ಬೆಂಗಳೂರು: ಒಂದೇ ಕುಟುಂಬದ ಮೂವರು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತಾಯಿ, 9 ವರ್ಷದ ಮಗುವಿನ ಸಾವಿನ ಸತ್ಯ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅಸಲಿ ಕೃತ್ಯ ಬಹಿರಂಗವಾಗಿದೆ. ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ ಜ್ಯೋತಿ, ಪುತ್ರ ನಂದೀಶ್ ಕುತ್ತಿಗೆ ಬಿಗಿದು ಮಹೇಶ್ ಕೊಂದಿದ್ದ. ನಂತರ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಆ.18ರಂದು ಬೆಂಗಳೂರಿನ ಕೋಣನಕುಂಟೆಯ ಮೈಸೂರು ಬ್ಯಾಂಕ್ ಕಾಲೊನಿಯಲ್ಲಿ ಘಟನೆ ನಡೆದಿತ್ತು. ಪತಿ ಮಹೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ್ರೆ, ಪತ್ನಿ ಹಾಗೂ ಮಗು ಬೆಡ್ ಮೇಲೆ ಶವವಾಗಿ ಬಿದಿದ್ದರು. ಪತಿ ಒಬ್ಬರನ್ನು ಕೊಂದು ನೇಣು ಬಿಗಿದುಕೊಂಡ ಅನುಮಾನ ಮೂಡಿತ್ತು.

ಆದರೆ ಹೇಗೆ ಪತ್ನಿ ಹಾಗೂ ಮಗು ಸಾವನಪ್ಪಿದ್ದಾರೆಂಬ ಅನುಮಾನ ಮೂಡಿತ್ತು. ಹೀಗಾಗಿ ಮರಣೊತ್ತರ ಪರಿಕ್ಷೆಯ ವರದಿಗಾಗಿ ಪೊಲೀಸರು ಕಾದಿದ್ದರು. ಈಗ ಮರಣೊತ್ತರ ಪರಿಕ್ಷೆಯಲ್ಲಿ ತಾಯಿ ಮಗು ಸಾವಿನ ರಹಸ್ಯ ಬಯಲಾಗಿದೆ. ಕ್ಯಾನ್ಸರ್​​ನಿಂದ ಮಹೇಶ್ ಬಳಲುತಿದ್ದ. ತನಗೆ ಕ್ಯಾನ್ಸರ್ ಇರೊದು ತಿಳಿದು ಸಾವಿನ ನಿರ್ಧಾರ ಮಾಡಿದ್ದ. ಇದೇ ವೇಳೆ ಪತ್ನಿ ಹಾಗೂ ಒಂಬತ್ತು ವರ್ಷದ ಮಗನನ್ನು ಹತ್ಯೆ ಮಾಡಿದ್ದ ಎನ್ನಲಾಗುತ್ತಿದೆ.

ಹೇಳೋಕೆ ಮೆಕ್ಯಾನಿಕ್ ಆದ್ರೆ ಫುಲ್‌ಟೈಂ ಬೈಕ್ ಕಳ್ಳತನ

ಬೆಂಗಳೂರು: ಹೇಳೋಕೆ ಮೆಕ್ಯಾನಿಕ್ ಆದ್ರೆ ಫುಲ್‌ಟೈಂ ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಅಫ್ರೋಜ್ ಪಾಷಾ, ಹುಸೇನ್ ಸೌದದ್ ಬಂಧಿತ ಆರೋಪಿ. ನಕಲಿ ಕೀ ಬಳಸಿ ನೀಟಾಗಿ ಕಳ್ಳತನ ಮಾಡುತ್ತಿದ್ದರು. 20 ಬೈಕ್​ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಾಜಿನಗರದ ಮನೆಯಲ್ಲೇ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಅಫ್ರೋಜ್, ಕಳ್ಳತನ ಮಾಡಿದ ವಾಹನದ ಬಿಡಿಭಾಗವನ್ನ ಬಿಚ್ಚಿ ಮಾರಾಟ ಮಾಡುತ್ತಿದ್ದರು. ಕಳೆದ ಆರೇಳು ತಿಂಗಳಿನಿಂದ ಬೈಕ್ ಕಳ್ಳತನ ಮಾಡುತ್ತಿದ್ದರು. ಬನಶಂಕರಿ, ಜೆಪಿ ನಗರ, ಬಸವನಗುಡಿ, ಶಿವಾಜಿನಗರ ಸೇರಿ ಹಲವೆಡೆ ಬೈಕ್ ಕಳ್ಳತನ ಮಾಡಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.