ಗಂಡ ಹೆಂಡತಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ಆಂಧ್ರ ಪ್ರದೇಶದ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮಿಡ್ಡೂರಿನ ಗುಡಿಪಲ್ಲೆ ಮಂಡಲದ ಚಂದ್ರಶೇಖರ್ (60) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ದಂಪತಿ ಕೆಲಸಕ್ಕೆಂದು ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ಪತಿ ಚಂದ್ರಶೇಖರ್​ಗೆ ಕೊರೊನಾ ದೃಢವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ​ಪಡೆದಿದ್ರು. ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಂತೆ ದಂಪತಿ ತಮ್ಮ ಊರಿಗೆ ತೆರಳುವಾಗ ಘಟನೆ ನಡೆದಿದೆ.

ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ಅನಾರೋಗ್ಯದಿಂದ ಪತಿ ಚಂದ್ರಶೇಖರ್ ಪತ್ನಿಯ ಮಡಿಲಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪತ್ನಿಯ ರೋದನೆ ಕರುಳು ಹಿಂಡುವಂತಿತ್ತು.

The post ಪತ್ನಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟ ಗಂಡ appeared first on News First Kannada.

Source: newsfirstlive.com

Source link