ಲಕ್ನೋ: ಕೊರೊನಾದಿಂದಾಗಿ ಮೃತಪಟ್ಟ ಪತ್ನಿ ದೇಹವನ್ನು ಅಂತ್ಯಸಂಸ್ಕಾರ ಮಾಡಲು ಗ್ರಾಮದ ಜನ ಯಾರು ಬಾರದ ಕಾರಣ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಶವವನ್ನು ಸೈಕಲ್‍ನಲ್ಲಿ ಸಾಗಿಸಿರುವ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ.

ಕೊರೊನಾ ಎರಡನೇ ಅಲೆ ಭೀಕರವಾಗಿ ಜನರ ಪ್ರಾಣವನ್ನೇ ಬಲಿ ಪಡೆಯುತ್ತಿದೆ. ಈ ಮಧ್ಯೆ ಜನ ಕೊರೊನಾದಿಂದ ಮೃತಪಟ್ಟರೆ ಅಂತವರ ಅಂತ್ಯಸಂಸ್ಕಾರಕ್ಕೂ ಭಯ ಪಡುವಂತಹ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ.

ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಕೊರೊನಾದಿಂದಾಗಿ ಮಹಿಳೆಯೊಬ್ಬರು ಮರಣ ಹೊಂದಿದ್ದರು. ಅವರ ದೇಹವನ್ನು ಸಂಸ್ಕಾರ ಮಾಡಲು ಗ್ರಾಮಸ್ಥರು ಬಾರದ ಕಾರಣ ವಯಸ್ಸಾದ ಮಹಿಳೆಯ ಪತಿ ಸೈಕಲ್‍ನಲ್ಲಿ ಕಟ್ಟಿಕೊಂಡು ಸ್ಮಶಾನಕ್ಕೆ ಸಾಗಿದ್ದಾರೆ. ಅದರಲ್ಲೂ ಸೈಕಲ್‍ನಲ್ಲಿ ಸಾಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಬಿದ್ದಿದ್ದಾರೆ.

ಕೊನೆಗೆ ವಯಸ್ಸಾದ ವ್ಯಕ್ತಿಯ ಸಹಾಯಕ್ಕೆ ಬಂದ ಸ್ಥಳೀಯ ಪೊಲೀಸರು ನೆರವಾಗಿದ್ದಾರೆ. ಬಳಿಕ ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, ಈ ವ್ಯಕ್ತಿಯ ಹೆಸರು ತಿಲಖಧರಿ ಯಾಗಿದ್ದು ಇವರಿಗೆ 70 ವರ್ಷ ವಯಸ್ಸು ಇವರು ಜಾನ್‍ಪುರದ ಅಂಬರ್ಪುರ ಗ್ರಾಮದವರಾಗಿದ್ದು, ಇವರ ಪತ್ನಿ ಕೊರೊನಾದಿಂದಾಗಿ ಮೃತಪಟ್ಟಿದ್ದರು. ಬಳಿಕ ಶವಸಂಸ್ಕಾರಕ್ಕೆ ಗ್ರಾಮದಲ್ಲಿ ಅವಕಾಶ ಕೊಡದ ಕಾರಣ ಈರೀತಿ ಸೈಕಲ್‍ನಲ್ಲಿ ಕಟ್ಟಿ ಬೇರೆಡೆ ಸಾಗಿಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

The post ಪತ್ನಿಯ ಹೆಣವನ್ನು ಸೈಕಲ್‍ನಲ್ಲಿ ಸಾಗಿಸಿ ಅಂತ್ಯಸಂಸ್ಕಾರ ಮಾಡಿದ ಪತಿ appeared first on Public TV.

Source: publictv.in

Source link