ಚಾಮರಾಜನಗರ: ಮನೆಯಲ್ಲಿ ಪತಿ ಇಲ್ಲದಿರುವಾಗ ಬರ್ತಾ ಇದ್ದ ಪ್ರಿಯಕರ ಪತ್ನಿ ಜತೆ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ, ಮುತ್ತಿಟ್ಟ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಗೂ ಹಾಕಿದ್ದ. ಈ ವಿಷಯ ತಿಳಿದ ಪತಿ ಈ ಅಕ್ರಮ ಸಂಬಂಧವನ್ನು ಕೊಲೆಯಲ್ಲಿ ಅಂತ್ಯಗೊಳಿಸಿದ್ದಾನೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘನೆ ನಡೆದಿದೆ. ತನ್ನ ಮನೆಯಲ್ಲಿ ಪತ್ನಿ ಸೌಭಾಗ್ಯ ಜೊತೆ ಇದ್ದ ಪ್ರಿಯಕರ ಬಸವಶೆಟ್ಟಿ(37)ಯನ್ನು ಕಂಡ ಪತಿ ಶಿವಣ್ಣ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

ಸೌಭಾಗ್ಯ ಮತ್ತು ಬಸವಶೆಟ್ಟಿ ನಡುವೆ ಹಲವು ದಿನಗಳಿಂದ ಅಕ್ರಮ ಸಂಬಂಧ ಇತ್ತು. ಈ ವಿಷಯ ಪತಿ ಶಿವಣ್ಣಗೆ ತಿಳಿಯಿತು. ಪ್ರಿಯಕರ ಮತ್ತು ಪತ್ನಿ ಚುಂಬಿಸಿದ ಫೋಟೋವನ್ನೂ ಶಿವಣ್ಣ ನೋಡಿದ. ಭಾನುವಾರ ರಾತ್ರಿ ಮನೆಗೆ ಹೋದಾಗ ಅಲ್ಲಿ ಪತ್ನಿ ಜೊತೆ ಇದ್ದ ಪ್ರಿಯಕರ ಬಸವಶೆಟ್ಟಿ ಅನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ.

ಹಲ್ಲೆ ಹಿನ್ನೆಲೆಯಲ್ಲಿ ತಲೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೆ ಪ್ರಜ್ಞೆ ತಪ್ಪಿ ಬಿದ್ದ ಪ್ರಿಯಕರ ಬಸವಶೆಟ್ಟಿ ಅನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಬದುಕುಳಿಯಲಿಲ್ಲ.

ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಪತ್ನಿ ಜೊತೆಗಿದ್ದ ಪ್ರಿಯಕರನ ದೊಣ್ಣೆಯಿಂದ ಹೊಡೆದು ಕೊಂದೇಬಿಟ್ಟ! appeared first on Public TV.

Source: publictv.in

Source link