ಚಿಕ್ಕೋಡಿ: ಹೃದಯಾಘಾತದಿಂದ ಹೆಂಡತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮನನೊಂದು ಪತಿ ಹಾಗೂ ಮಕ್ಕಳ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಚನ್ನವ್ವ ರಂಗಾಪುರೆ(40) ಹೃದಯಾಘಾತದಿಂದ ಕಳೆದ ಒಂದು ವಾರದ ಹಿಂದೆ ಸಾವನ್ನಪ್ಪಿದ್ದರು. ಇದರಿಂದ ಮನನೊಂದು ಇಂದು ನೇಣು ಬಿಗಿದು ಪತಿ ಕಾಡಪ್ಪ(47) ಕೀರ್ತಿ(20) ಸ್ಪೂರ್ತಿ(18) ಸಾವನ್ನಪ್ಪಿದ್ದಾರೆ.

ಚನ್ನವ್ವನ ಸಾವಿನಿಂದ ಅವಳ ಪತಿ ಮತ್ತು ಮಕ್ಕಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಒಟ್ಟಿಗೆ ಪ್ರಾಣಕಳೆದುಕೊಂಡಿರುವ ಈ ಘಟನೆಯಿಂದ ಪೊಗತ್ಯಾನಟ್ಟಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಪತ್ನಿ ಸಾವಿನಿಂದ ಮನನೊಂದು ಇಬ್ಬರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ appeared first on Public TV.

Source: publictv.in

Source link