ಭೋಪಾಲ್: ಗ್ವಾಲಿಯಾರ್ ನಲ್ಲಿ ಪದೇ ಪದೇ ವಿದ್ಯುತ್ ಕೈಕೊಟ್ಟ ಪರಿಣಾಮ ಇಂಧನ ಸಚಿವರೇ ಎಲೆಕ್ಟ್ರಿಕ್ ಪೋಲ್ ಏರಿ ಪರಿಶೀಲಿಸಿದ್ದಾರೆ. ಸದ್ಯ ಸಚಿವರು ಕಂಬ ಏರಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಗ್ವಾಲಿಯರ್ ನಲ್ಲಿ ಪದೇ ಪದೇ ವಿದ್ಯುತ್ ಸಮಸ್ಯೆ ಬಗ್ಗೆ ದೂರುಗಳ ಬಂದ ಹಿನ್ನೆಲೆ ಇಂಧನ ಸಚಿವ ಪ್ರಧ್ಯುಮಾನ್ ತೋಮರ್ ಪರಿಶೀಲನೆಗೆ ತೆರಳಿದ್ದರು. ವಿದ್ಯುತ್ ಸಮಸ್ಯೆ ಕೇಳಿ ಬಂದ ಬಡವಾಣೆಗೆ ತೆರಳಿದ ಸಚಿವರು, ಅಲ್ಲಿಯೇ ಇದ್ದ ಏಣಿ ಸಹಾಯದಿಂದ ಕಂಬ ಏರಿ ಟ್ರಾನ್ಸ್ ಫಾರ್ಮರ್ ಪರಿಶೀಲನೆ ಮಾಡಿದರು. ಇನ್ನು ಟ್ರಾನ್ಸ್ ಫಾರ್ಮರ್ ಸುತ್ತಲೂ ಹಬ್ಬಿಕೊಂಡಿದ್ದ ಬಳ್ಳಿಯನ್ನ ತೆಗೆದು ಸ್ವಚ್ಛಗೊಳಿಸಿದರು. ತಮ್ಮ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗೆ ಸ್ಥಳೀಯ ನಿವಾಸಿಗಳಲ್ಲಿ ಸಚಿವರು ಕ್ಷಮೆ ಕೇಳಿದರು.

ತದನಂತರ ಸುದ್ದಿಗೋಷ್ಠಿ ನಡೆಸಿದ ಸಚಿವರು. ವಿದ್ಯುತ್ ಪೂರೈಕೆ ವ್ಯತ್ಯಯಗೊಂಡ ಸ್ಥಳಗಳಲ್ಲಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವು ಕಡೆ ಟ್ರಿಪಿಂಗ್ ಸಮಸ್ಯೆಯುಂಟಾಗಿದ್ದು, ಅದರನ್ನ ಸರಿಪಡಿಸುವಂತೆ ನಿರ್ದೇಶನ ನೀಡಲಾಗಿದೆ. ಸರ್ಕಾರದ ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್‍ಗಾಗಿ ಮಳೆಯನ್ನೂ ಲೆಕ್ಕಿಸದೆ ಗುಡ್ಡ ಹತ್ತಿ ಕುಳಿತ ವಿದ್ಯಾರ್ಥಿಗಳು

The post ಪದೇ ಪದೇ ಕೈ ಕೊಟ್ಟ ಕರೆಂಟ್ – ವಿದ್ಯುತ್ ಕಂಬ ಏರಿ ಪರಿಶೀಲಿಸಿದ ಸಚಿವ appeared first on Public TV.

Source: publictv.in

Source link