ಪದ್ಮಶ್ರೀ ಪಡೆಯಲು ಬರಿಗಾಲಲ್ಲೇ ಬಂದ ಅಕ್ಷರ ಸಂತ; ಹಾಜಬ್ಬರನ್ನ ಅಚ್ಚರಿಯಿಂದಲೇ ಕಣ್ತುಂಬಿಕೊಂಡ ರಾಷ್ಟ್ರಪತಿ


ಅಕ್ಷರ ಸಂತ ಅಂತಲೇ ಖ್ಯಾತಿ ಪಡೆದಿರುವ ದಕ್ಷಿಣಕನ್ನಡದ ಹರೆಕಾಳ ಹಾಜಬ್ಬ ಇಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರವನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್​ರಿಂದ ಪಡೆದುಕೊಂಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಖ್ಯಾತನಾಮರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮಗುವಿನಂತೆ ಬರಿಗಾಲ್ಲೇ ಹೆಜ್ಜೆ ಹಾಕುತ್ತಾ ಬಂದ ಅಕ್ಷರ ಸಂತ ಹಾಜಬ್ಬರಿಗೆ ರಾಷ್ಟ್ರ ಪತಿಗಳು ಪದ್ಮಶ್ರೀ ಪ್ರದಾನ ಮಾಡಿದ್ದಾರೆ.

ಸ್ವತಃ ಅನಕ್ಷರಸ್ಥರಾಗಿದ್ದರೂ ಬೀದಿ ಬದಿಯಲ್ಲಿ ಕಿತ್ತಳೆ ವ್ಯಾಪಾರ ಮಾಡುತ್ತಲೇ ತನ್ನ ಸ್ವಂತ ದುಡಿಮೆಯಲ್ಲೇ ಶಾಲೆ ಕಟ್ಟಿದ ಹಾಜಬ್ಬರಿಂದ ಇಂದು ನೂರಾರು ಮಕ್ಕಳು ಶಿಕ್ಷಿತರಾಗಿದ್ದಾರೆ. ತಮಗೆ ಬಂದ ಪ್ರಶಸ್ತಿಯ ಮೊತ್ತವನ್ನೂ ಶಾಲೆಗಾಗಿ ಅರ್ಪಿಸಿದ ಜಾಬ್ಬರಿಗೆ ಕೇಂದ್ರ ಸರ್ಕಾರ 2020ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರವನ್ನ ಘೋಷಿಸಿತ್ತು.

ಅದರಂತೆ ಇಂದು ಅವರ ಪದ್ಮಶ್ರೀ ಪುರಸ್ಕಾರ ಪಡೆಯಲು ಬಂದಾಗ.. ರಾಷ್ಟ್ರಪತಿ ರಾಮನಾಥ್ ಕೋವಿಂದ ಅಚ್ಚರಿಯಿಂದಲೇ ತದೇಕ ಚಿತ್ತದಿಂದ ಹಾಜನಬ್ಬರನ್ನು ಕಣ್ತುಂಬಿಕೊಂಡಿದ್ದಾರೆ. ಒಂದೆಡೆ ಅವರು ಪದ್ಮಶ್ರೀ ಪಡೆಯುತ್ತಲೇ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಉಳಿದ ಪುರಸ್ಕೃತರು ಜೋರಾದ ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದ್ರು. ಇನ್ನೊಂದೆಡೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕ್ಯಾಮರಾದತ್ತ ನೋಡುವಂತೆ ಹಾಜನಬ್ಬರಿಗೆ ತಿಳಿಸಿ ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದು ಕೂಡ ವಿಶೇಷವಾಗಿತ್ತು.

ಇನ್ನು ಪದ್ಮಶ್ರೀ ಪುರಸ್ಕೃತ ಹಾಜನಬ್ಬರಿಗೆ ಅಭಿನಂದನೆ ಮಹಾಪೂರವೇ ಹರಿದು ಬಂದಿದ್ದು, ಅವುಗಳಲ್ಲಿ ಆಯ್ದ ಕೆಲ ಪೋಸ್ಟ್​ಗಳು ಹೀಗಿವೆ..

 

 

 

News First Live Kannada


Leave a Reply

Your email address will not be published. Required fields are marked *