ಕೇಂದ್ರ ಸರ್ಕಾರ ಸಾಧಕರಿಗೆ ನೀಡುವ ಪದ್ಮ ಪ್ರಶಸ್ತಿಗೆ ತಕ್ಕ ಸಾಧಕರನ್ನ ಸೂಚಿಸುವಂತೆ ಸಾರ್ವಜನಿಕರಿಗೆ ಆಯ್ಕೆ ಮಾಡುವ ಅವಕಾಶ ನೀಡಿದ ಬೆನ್ನಲ್ಲೇ ಹಿರಿಯ ನಟ ಅನಂತ್​ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡುವಂತೆ ಸ್ಯಾಂಡಲ್​ವುಡ್​ನ ಹಲ ನಟರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಇದಕ್ಕೆ ಪೂರಕವಂತೆ, ರಾಕಿಂಗ್​ ಸ್ಟಾರ್​ ಯಶ್​ ಕೂಡ ಸಾಥ್​ ನೀಡಿದ್ದಾರೆ.

ಹೌದು ರಾಕಿಂಗ್​ ಸ್ಟಾರ್​ ಯಶ್​ ಕೂಡ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದು ಅನಂತ್​ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡುವುದಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಅನಂತ್​ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡುವಂತೆ ಬರೆದುಕೊಂಡಿರುವ ಯಶ್​ ‘ಅಭಿನಯ ಅನ್ನೋದು ವರ್ತನೆ’.. ಚಿಕ್ಕವಯಸ್ಸಿನಲ್ಲಿ ಅವ್ರ ಕಾಮಿಡಿಗಳನ್ನ ನೋಡಿ ಸುಮಾರು ನಕ್ಕಿದ್ದೇವೆ, ಅವ್ರು ಅಳೋದನ್ನ ನೋಡಿ, ನಾವು ಅತ್ತಿದ್ದೇವೆ. ದೆವ್ವದ ಸಿನಿಮಾಗಳಲ್ಲಿ ಅವ್ರು ನಟಿಸಿರೋದನ್ನ ನೋಡಿ ನಾವು ಸುಮಾರ್​ ಸಲ ಹೆದರಿಕೊಂಡಿದ್ದೀವಿ. ನನಗೆ ಯಾವಾಗ್ಲೂ ಒಂದು ಆಸೆಯಿತ್ತು, ಆವ್ರು ಮಾಡೋ ಸಿನಿಮಾದಲ್ಲಿ ನನ್ನದು ಒಂದು ಪಾತ್ರ ಮಾಡ್ಬೇಕು. ನನಗೆ ‘ಎವರ್​ಗ್ರೀನ್​’ ಅನ್ನೋ ಪದಕ್ಕೆ ಇವರೇ ಉದಾಹರಣೆ. ಅವ್ರು, ಮುಂಚೆ ಮಾಡಿರೋ ಸಿನಿಮಾಗಳಿಗೂ ಈಗ ಮಾಡಿರೋ ಸಿನಿಮಾಗಳನ್ನ ನೋಡಿದ್ರೆ ಯಾವುದೇ ರೀತಿಯ ಸಣ್ಣ ವ್ಯತ್ಯಾಸವೂ ಇಲ್ಲ. ಅವ್ರು ಅದೆಷ್ಟೇ ಭಾಷೆಗಳಲ್ಲಿ ನಟಿಸಿರಬಹುದು, ಆದ್ರೆ ಅವ್ರು ಯಾವತ್ತಿದ್ರೂ ಕರ್ನಾಟಕದ ಆಸ್ತಿ. ಅನಂತ್​ನಾಗ್​ ಬರೀ ನಟನಲ್ಲ, ಅವ್ರು ಅತ್ಯದ್ಭುತ ನಟ. ಇವರಿಗಿಂತ ಅದ್ಭುತ ನಟ ಪದ್ಮ ಪ್ರಶಸ್ತಿ ಪಡೆಯೋದಕ್ಕೆ ಯಾರಿದ್ದಾರೆ’ ಅಂತ ಬರೆದುಕೊಂಡಿದ್ದಾರೆ ಯಶ್​

ಈ ಹಿಂದೆ ನಟ, ನಿರ್ದೇಶಕರಾದ ರಕ್ಷಿತ್ ಶೆಟ್ಟಿ ಹಾಗೂ ರಿಶಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಈ ಅಭಿಯಾನ ಆರಂಭಿಸಿದ್ದಾರೆ. ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು #ananthnagforpadma ಹ್ಯಾಷ್​​ಟ್ಯಾಗ್ ಬಳಸುವ ಮೂಲಕ ಅನಂತ್​ನಾಗ್​ ಅವರಿಗೆ ಪದ್ಮ ಪ್ರಶಸ್ತಿ ನೀಡುವುದಕ್ಕೆ ಬೆಂಬಲ ಸೂಚಿಸಿದ್ದಾರೆ.

 

The post ಪದ್ಮಶ್ರೀ ಪಡೆಯೋದಕ್ಕೆ ಅನಂತ್​ನಾಗ್​ಗಿಂತ ಮತ್ತೊಬ್ಬ ನಟ ಯಾರೂ ಇಲ್ಲ: ಯಶ್​ ಬೆಂಬಲ appeared first on News First Kannada.

Source: newsfirstlive.com

Source link