ಪದ್ಮಶ್ರೀ ಪ್ರಶಸ್ತಿ ಸಿಗದಿದ್ದಕ್ಕೆ ಸೋನು ಸೂದ್​ಗೆ ಬೇಸರ? ನಟನ ಪ್ರತಿಕ್ರಿಯೆ ಏನು? | Sonu Sood Happy with Not receiving Padma Shri award


ಪದ್ಮಶ್ರೀ ಪ್ರಶಸ್ತಿ ಸಿಗದಿದ್ದಕ್ಕೆ ಸೋನು ಸೂದ್​ಗೆ ಬೇಸರ? ನಟನ ಪ್ರತಿಕ್ರಿಯೆ ಏನು?

ನಟ ಸೋನು ಸೂದ್

ನಾನಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ (Padma Shri Award) ನೀಡಲಾಗುತ್ತದೆ. ಈ ಬಾರಿ ಸಿನಿಮಾ ಕ್ಷೇತ್ರದಿಂದ ಕಂಗನಾ ರಣಾವತ್ (Kangana Ranaut) ಮೊದಲಾದವರಿಗೆ ಈ ಪ್ರಶಸ್ತಿ ಸಿಕ್ಕಿದೆ. ಕಂಗನಾಗೆ ಪ್ರಶಸ್ತಿ ನೀಡಿದ ಬಗ್ಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಕೆಲವರು ತಮ್ಮ ನೆಚ್ಚಿನ ನಟನಿಗೆ ಈ ಅವಾರ್ಡ್​ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆ ಪೈಕಿ ಸೋನು ಸೂದ್​ (Sonu Sood) ಅಭಿಮಾನಿಗಳು ಕೂಡ ಹೌದು. ಕೊವಿಡ್​ ಕಾಣಿಸಿಕೊಂಡ ನಂತರ ಸೋನು ಅವರು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದರು. ಸಾಕಷ್ಟು ಜನರ ಪಾಲಿಗೆ ಅಕ್ಷರಶಃ ದೇವರಾಗಿದ್ದಾರೆ ಸೋನು. ಇದೇ ಕಾರಣಕ್ಕೆ ಅವರ ಫೋಟೋವನ್ನು ಮನೆಯಲ್ಲಿಟ್ಟು ಪೂಜೆ ಮಾಡುವ ಅನೇಕರಿದ್ದಾರೆ. ಈಗ ತಮಗೆ ಪ್ರಶಸ್ತಿ ಸಿಗದೆ ಇರುವ ಬಗ್ಗೆ ಸೋನು ಮಾತನಾಡಿದ್ದಾರೆ.

ಸೋನುಗೆ ಪದ್ಮಶ್ರೀ ಸಿಕ್ಕಿಲ್ಲ ಎನ್ನುವುದಕ್ಕೆ ಬೇಸರವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಸೋನು ಈ ಬಗ್ಗೆ ಹೇಳೋದೇ ಬೇರೆ. ‘ಪ್ರಾಮಾಣಿಕವಾಗಿ ಹೇಳೋದಾದರೆ ಇದನ್ನು ನಾನು ನಿರೀಕ್ಷಿಸಿರಲಿಲ್ಲ. ನನಗೆ ಜನರ ಪ್ರೀತಿಯೇ ದೊಡ್ಡ ಪ್ರಶಸ್ತಿ. ನನ್ನ ಮನೆಯ ಕೆಳಗೆ ನನ್ನನ್ನು ಭೇಟಿಯಾಗಲು ಈಗಲೂ ಜನರು ಕಾಯುತ್ತಿದ್ದಾರೆ’ ಎಂದಿದ್ದಾರೆ. ಈ ಮೂಲಕ ಜನರ ಅಭಿಮಾನ ಹಾಗೂ ಪ್ರೀತಿಯೇ ದೊಡ್ಡದು ಎಂಬುದು ರಿಯಲ್​ ಹೀರೋನ ಅಭಿಪ್ರಾಯ.

ಸೋನು ಸೂದ್​ ಈ ಮುಂದೆಯೂ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ ಇಟ್ಟುಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಅವರು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ‘ಜನರು ಸಹಾಯಕ್ಕಾಗಿ ನನ್ನ ಬಳಿಗೆ ಬರುವವರೆಗೂ, ಅವರಿಗೆ ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ. ನನ್ನ ಪ್ರಯತ್ನಗಳಿಗೆ ಮನ್ನಣೆ ಇದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಯಾರೋ ಗುರುತಿಸಬೇಕು ಎಂದು ನಾನು ಇದನ್ನು ಮಾಡುತ್ತಿಲ್ಲ. ನಾನು ಪ್ರತಿ ರಾತ್ರಿ ಚಿಂತೆ ಇಲ್ಲದೆ ಸುಖ ನಿದ್ರೆ ಪಡೆಯುತ್ತಿದ್ದೇನಲ್ಲ ಅದನ್ನು ಯಾರಿಂದಲೂ ವಿವರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಸೋನು ಸೂದ್.

ಕೊವಿಡ್​ ಮೊದಲನೇ ಅಲೆ ಕಾಣಿಸಿಕೊಂಡ ನಂತರ ಸೋನು ಸೂದ್​ ಸಹಾಯಕ್ಕೆ ನಿಂತರು. ತಮ್ಮ ಸ್ವಂತ ದುಡಿಮೆಯಿಂದ ಜನರ ಸಹಾಯಕ್ಕೆ ಮುಂದಾದರು. ಈ ವರೆಗೆ ಲಕ್ಷಾಂತರ ಜನರಿಗೆ ಸೋನು ಅವರಿಂದ ಸಹಾಯ ಸಿಕ್ಕಿದೆ. ಸಿನಿಮಾಗಳಲ್ಲಿ ನೆಗೆಟಿವ್​ ರೋಲ್​ಗಳನ್ನು ಮಾಡುವುದಿಲ್ಲ ಎಂದು ಸೋನು ಹೇಳಿದ್ದಾರೆ.

ಇದನ್ನೂ ಓದಿ:  ‘2 ಬಾರಿ ರಾಜ್ಯಸಭಾ ಸದಸ್ಯನಾಗುವ ಚಾನ್ಸ್​​ ತಿರಸ್ಕರಿಸಿದ್ದೆ’; ತೆರಿಗೆ ವಂಚನೆ ಆರೋಪದ ಬಳಿಕ ಸೋನು ಸೂದ್​ ಹೇಳಿಕೆ

TV9 Kannada


Leave a Reply

Your email address will not be published. Required fields are marked *