ಪಯಣ ಮುಗಿಸಲು ಸಜ್ಜಾದ ‘ಮಿಥುನ​ ರಾಶಿ’-ಕಾರಣವೇನು..?


ಕಿರುತೆರೆಯ ದುನಿಯಾದಲ್ಲಿ ಎಷ್ಟೊ ಧಾರಾವಾಹಿಗಳು ಬಂದೊಗ್ತಾವೆ. ಅದ್ರಲ್ಲಿ ಕೆಲವು ಸಕ್ಸಸ್ ಕಾಣ್ತವೆ, ಇನ್ನ ಕೆಲವು ಅನ್ಕೊಡಿದ್ದ ಮಟ್ಟಕ್ಕೆ ತಲುಪೊದಿಲ್ಲ. ಎಲ್ಲಾ ಧಾರಾವಾಹಿಗಳು ಒಂದಲ್ಲ ಒಂದಿನ ಅಂತಿಮ ಘಟ್ಟಕ್ಕೆ ಬರಲೇ ಬೇಕು. ಹೀಗ ಅದೇ ಸಾಲಿನಲ್ಲಿ ಸದ್ಯ, ಕಿರುತೆರೆಯ ಅಭಿಮಾನಿಗಳಿಗೆ ಎರಡು ಪ್ರಮುಖ ಧಾರಾವಾಹಿಗಳು ತನ್ನ ವಿದಾಯ ಹೇಳಲು ಸಿದ್ಧವಾಗಿದೆ.

ಹೌದು, ಕಿರುತೆರೆಯಲ್ಲಿ ತನ್ನದೆ ಆದ ವಿಭಿನ್ನ ಕತೆಯೊಂದಿಗೆ ಜನರ ಮನಸೂರೆಗೊಳ್ಳಿಸಿದಂತಹ ಕಲರ್ಸ್ ಕನ್ನಡ ವಾಹಿನಿಯ ಮಿಥುನ ರಾಶಿ ತನ್ನ ಅಭಿಮಾನಿಗಳಿಗೆ ಅಂತಿಮ ವಿದಾಯ ಹೇಳಲು ಸಜ್ಜಾಗಿದೆ. ಈ ಕತೆಯ ಪ್ರೋಮೋ ಬಂದಾಗ ಬಹಳಷ್ಟು ಜನಕ್ಕೆ ಇಷ್ಟವಾಗಿತ್ತು ಅದ್ರಲ್ಲೂ ಮಧ್ಯಮ ವರ್ಗದ ವೀಕ್ಷಕರಿಗೆ ಅಚ್ಚುಮೆಚ್ಚಾಗಿತ್ತು. ಕಾರಣ, ಅದ್ರಲ್ಲಿ ನಾಯಕ ನಟಿ ಆಟೋ ರಾಣಿ ಆಗಿರ್ತಾಳೆ , ಆಟೋ ಓಡ್ಸೊದೆ ಅವ್ಳ ಕೆಲಸ, ಈ ವೀಶೆಷ ಕಾನ್ಸೆಪ್ಟ್​ನಿಂದಾಗಿ ಧಾರಾವಾಹಿ ಬಂದ ಕೆಲವೆ ದಿನಗಳಲ್ಲಿ ಜನರ ಫೇವರೀಟ್ ಲಿಸ್ಟ್ ಸೇರಿತ್ತು.

ಸತತ ಮೂರು ವರ್ಷಗಳಿಂದ ತನ್ನದೆ ಆದ ರೀತಿಯಲ್ಲಿ ಮನರಂಜಿಸ್ತಾನೆ ಬಂದಿತ್ತು.ಆದ್ರೆ ಇದೀಗ ಮಿಥುನ ರಾಶಿ ತನ್ನ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದೆ. ಇನ್ನೇನು ಕೆಲವೆ ದಿನಗಳಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿ ವಿದಾಯ ಹೇಳಲಿದೆ. ಹಾಗೇನೆ ಮತ್ತೊಂದು ಹೊಸ ಧಾರಾವಾಹಿ ದಾಸ ಪುರಂದರ ಬರ್ತಿದೆ.ಒಂದು ಔಟ್ ಆಗ್ತಿದೆ, ಇನ್ನೊಂದು ಇನ್ ಆಗ್ತಿದೆ.

ಇನ್ನು ಮತ್ತೊಂದು ಧಾರಾವಾಹಿ ಅಂದ್ರೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಕಾವ್ಯಂಜಲಿ ಧಾರಾವಾಹಿಯು ತನ್ನ ಕತೆಗೆ ಶಿಘ್ರದಲ್ಲೆ ವಿದಾಯ ಹೇಳಲಿದೆ. ನಿಜ ಹೇಳ್ಬೆಕಂದ್ರೆ, ಈ ಧಾರಾವಾಹಿ ಸ್ಲ್ವಲ್ಪ ದಿನಗಳ ಮುಂಚೆಯೆ ಮುಗಿಬೇಕಿತ್ತು. ಆದ್ರೆ, ವೀಕ್ಷಕರ ಒತ್ತಾಯದ ಮೇರೆಗೆ ಸಂಚಿಕೆಗಳನ್ನು ಮುಂದುವರೆಸಿದ್ದರು. ಆದ್ರೆ ಈಗ ತನ್ನ ಕತೆಗೆ ವಿದಾಯ ಹೇಳಲು ಕಾವ್ಯಾಂಜಲಿ ಧಾರಾವಾಹಿ ಸಜ್ಜಾಗಿದೆ. ಒಟ್ನಲ್ಲಿ, ಈ ಎರಡು ಧಾರಾವಾಹಿಗಳು ತನ್ನದೆ ಆದ ವಿಭಿನ್ನ ಕತೆಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದವು.ಈಗ ಜನ ಮನ ಗೆದ್ದು, ವಿದಾಯ ಹೇಳ್ತಿವೆ.

The post ಪಯಣ ಮುಗಿಸಲು ಸಜ್ಜಾದ ‘ಮಿಥುನ​ ರಾಶಿ’-ಕಾರಣವೇನು..? appeared first on News First Kannada.

News First Live Kannada


Leave a Reply

Your email address will not be published.