ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊರೊನಾ ಸೋಂಕಿನ ಭೀತಿ ಎದುರಾಗಿದೆ. ಹೀಗಾಗಿ ಸೋಂಕು ಹರಡದಂತೆ ತಡೆಯಲು ಜೈಲಿನಲ್ಲಿ ಸುರಕ್ಷತೆಗೆ ಪೂರಕ ವ್ಯವಸ್ಥೆ ಮಾಡಲಾಗಿದೆ.  ಕೈದಿಗಳಿಗೆ ಕೊರೊನಾ ನೆಗಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಪ್ರತಿದಿನ ಬರುವ ಕೈದಿಗಳಿಗೆ ಕೊರೊನಾ ಟೆಸ್ಟ್​ ಮಾಡಲಾಗ್ತಿದೆ.

ಈವರೆಗೆ ಒಟ್ಟು 44 ಕೈದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದ್ರೆ ಬಹುತೇಕ ಕೈದಿಗಳಿಗೆ ಏಸಿಂಪ್ಟಮ್ಯಾಟಿಕ್ ಇದೆ. ಅಂದ್ರೆ ಅವರಿಗೆ ರೋಗಲಕ್ಷಣ ಕಾಣಿಸಿಕೊಂಡಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಟ್ಟು 5,062 ಕೈದಿಗಳಿದ್ದಾರೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲೇ ಇಲಾಖೆ ಪ್ರತ್ಯೇಕವಾಗಿ ಕ್ವಾರಂಟೀನ್ ಜೈಲು ನಿರ್ಮಿಸಿತ್ತು. ಈಗ ಹೊಸದಾಗಿ ಜೈಲಿಗೆ ಬರುವ ಎಲ್ಲಾ ಕೈದಿಗಳನ್ನು ಕೂಡ ಸಿಬ್ಬಂದಿ ಕ್ವಾರಂಟೀನ್ ಜೈಲಿಗೆ ಕಳುಹಿಸುತ್ತಿದ್ದಾರೆ.

ಕೈದಿಗಳ ಱಪಿಡ್  ಟೆಸ್ಟ್ ಮಾಡಿಸಿಕೊಂಡು ಬರುವ ಪೊಲೀಸರು, ಕೊರೊನಾ ಪಾಸಿಟೀವ್ ಬಂದವರನ್ನ ED ಆಸ್ಪತ್ರೆಗೆ ದಾಖಲು ಮಾಡ್ತಿದ್ದಾರೆ. ಟೆಸ್ಟ್​ನಲ್ಲಿ ನೆಗೆಟಿವ್ ಬಂದ್ರು ಕೂಡ 10 ದಿನಗಳ ಬಳಿಕ ಆರ್​​ಟಿಪಿಸಿಆರ್ ಪರೀಕ್ಷೆ ಮಾಡಿಸಿ, ಅದ್ರಲ್ಲಿ ಪಾಸಿಟೀವ್ ಬಂದವರನ್ನ ಹಜ್ ಭವನ್ ಮತ್ತು ED ಆಸ್ಪತ್ರೆಗೆ ಸ್ಥಳಾಂತರ ಮಾಡ್ತಿದ್ದಾರೆ.

ಈಗಾಗಲೇ ಹಜ್ ಭವನದಲ್ಲಿ 30 ಕೈದಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ED ಆಸ್ಪತ್ರೆಯಲ್ಲಿ 11  ಪುರುಷರು, 3 ಮಹಿಳಾ ಕೈದಿಗಳಿಗೆ ಚಿಕಿತ್ಸೆ ನೀಡಲಾಗ್ತಿದೆ ಎಂದು ನ್ಯೂಸ್​​ಫಸ್ಟ್​​ಗೆ ಜೈಲಿನ ಚೀಫ್ ಸೂಪರಿಂಟೆಂಡೆಂಟ್ ರಂಗನಾಥ್ ತಿಳಿಸಿದ್ದಾರೆ.

The post ಪರಪ್ಪನ ಅಗ್ರಹಾರದಲ್ಲಿ ಹೊಸದಾಗಿ ಬರುವ ಎಲ್ಲ ಕೈದಿಗಳಿಗೂ ಕೊರೊನಾ ಟೆಸ್ಟ್​ appeared first on News First Kannada.

Source: newsfirstlive.com

Source link