ಪರಭಾಷೆಯಲ್ಲೂ ‘ಜೇಮ್ಸ್​’ ಟೀಸರ್​ ಮಿಲಿಯನ್​ ವೀಕ್ಷಣೆ; ತಮಿಳು, ಹಿಂದಿ, ತೆಲುಗು ಪ್ರೇಕ್ಷಕರು ಏನಂದ್ರು? | Puneeth Rajkumar starrer James movie teaser gets more than Million views in other languages


ಪರಭಾಷೆಯಲ್ಲೂ ‘ಜೇಮ್ಸ್​’ ಟೀಸರ್​ ಮಿಲಿಯನ್​ ವೀಕ್ಷಣೆ; ತಮಿಳು, ಹಿಂದಿ, ತೆಲುಗು ಪ್ರೇಕ್ಷಕರು ಏನಂದ್ರು?

ಪುನೀತ್​ ರಾಜ್​ಕುಮಾರ್

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಅಭಿಮಾನಿಗಳು ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ‘ಜೇಮ್ಸ್​’ ಸಿನಿಮಾದ ಟೀಸರ್​ (James Movie Teaser) ಬಿಡುಗಡೆ ಆಗಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಂಭ್ರಮವನ್ನು ನೋಡಲು ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ. ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಪುನೀತ್​ ರಾಜ್​ಕುಮಾರ್​ ಅವರು ‘ಜೇಮ್ಸ್​’ ಶೂಟಿಂಗ್​ ಮುಗಿಸಿದ್ದರು. ಆದರೆ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ. ಚೇತನ್​ ಕುಮಾರ್​ ನಿರ್ದೇಶನದ ‘ಜೇಮ್ಸ್​’ ಸಿನಿಮಾ (James Movie) ತುಂಬ ಅದ್ದೂರಿಯಾಗಿ ಮೂಡಿಬಂದಿದೆ ಎಂಬುದಕ್ಕೆ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಬಹುಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಹಾಗಾಗಿ ಕನ್ನಡದ ಜೊತೆಗೆ ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿಯೂ ಟೀಸರ್​ ರಿಲೀಸ್​ ಆಗಿದೆ. ಎಲ್ಲ ಭಾಷೆಯಲ್ಲೂ ಪುನೀತ್​ ರಾಜ್​ಕುಮಾರ್​ ಅವರಿಗೆ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಈ ಟೀಸರ್​ ಕಂಡು ಮೆಚ್ಚುಗೆ ಸೂಚಿಸಿದ್ದಾರೆ. ಪರಭಾಷೆಯಲ್ಲೂ ‘ಜೇಮ್ಸ್​’ ಟೀಸರ್​ಗೆ ಮಿಲಿಯನ್​ಗಟ್ಟಲೆ ವೀವ್ಸ್​ ಸಿಕ್ಕಿದೆ. ಇದು ಕರುನಾಡಿನಲ್ಲಿ ಇರುವ ಅಪ್ಪು ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿದೆ.

ಮಂಗಳವಾರ (ಫೆ.11) ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ‘ಜೇಮ್ಸ್​’ ಟೀಸರ್​ ಬಿಡುಗಡೆ ಆಯಿತು. ಒಂದು ದಿನ ಕಳೆಯುವುದರೊಳಗೆ ಯೂಟ್ಯೂಬ್​ನಲ್ಲಿ ಕನ್ನಡದ ಟೀಸರ್​ ಅನ್ನು 90 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅದೇ ರೀತಿ, ಪರಭಾಷೆ ಮಂದಿ ಕೂಡ ಮುಗಿಬಿದ್ದು ನೋಡಿದ್ದಾರೆ. ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿ 1.1 ಮಿಲಿಯನ್​ (11 ಲಕ್ಷ), ತೆಲುಗಿನಲ್ಲಿ 1.4 ಮಿಲಿಯನ್​ (14 ಲಕ್ಷ) ವೀವ್ಸ್​ ಆಗಿದೆ.

‘ಪುನೀತ್​ ರಾಜ್​ಕುಮಾರ್​ ಅವರ ಕೊನೇ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗುತ್ತಿರುವುದು ನಮಗೆ ಖುಷಿ ತಂದಿದೆ. ಈ ಸಿನಿಮಾದಿಂದ ಅವರು ರೆಕಾರ್ಡ್​ ಬ್ರೇಕ್​ ಮಾಡಲಿದ್ದಾರೆ. ಇಂದು ಪುನೀತ್​ ಇಲ್ಲ ಎಂಬುದನ್ನು ನಂಬೋಕೆ ಆಗುತ್ತಿಲ್ಲ’ ಎಂದು ಪರಭಾಷೆ ಮಂದಿ ಕಮೆಂಟ್​ ಮಾಡಿದ್ದಾರೆ.

ಹಲವು ಕಾರಣಗಳಿಂದಾಗಿ ‘ಜೇಮ್ಸ್​’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಮತ್ತು ಶಿವರಾಜ್​ಕುಮಾರ್​ ಕೂಡ ನಟಿಸಿದ್ದಾರೆ. ಈಗಾಗಲೇ ಅವರ ಪಾತ್ರಗಳ ಡಬ್ಬಿಂಗ್​ ಕೂಡ ಮುಗಿದಿದೆ. ಪುನೀತ್​ ರಾಜ್​ಕುಮಾರ್​ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದಾರೆ.

ಮಾ.17ರಂದು ಪುನೀತ್​ ರಾಜ್​ಕುಮಾರ್​ ಜನ್ಮದಿನ. ಅಂದೇ ‘ಜೇಮ್ಸ್​’ ಕೂಡ ಬಿಡುಗಡೆ ಆಗಲಿದೆ. ಇದು ಅಭಿಮಾನಿಗಳಲ್ಲಿ ಹೊಸ ಹುರುಪು ತುಂಬಿದೆ. ಈ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಫ್ಯಾನ್ಸ್​ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ‘ಜೇಮ್ಸ್​’ ಬಿಡುಗಡೆಯಾದಾಗ ಚಿತ್ರಮಂದಿರಗಳ ಎದುರಲ್ಲಿ ಹಲವು ಬಗೆಯ ಸಮಾಜಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಪ್ಪು ಅಭಿಮಾನಿಗಳು ಪ್ಲ್ಯಾನ್​ ಮಾಡಿಕೊಳ್ಳುತ್ತಿದ್ದಾರೆ.

‘ರಾಜಕುಮಾರ’ ಚಿತ್ರದ ಬಳಿಕ ನಟಿ ಪ್ರಿಯಾ ಆನಂದ್​ ಅವರು ‘ಜೇಮ್ಸ್​’ ಸಿನಿಮಾದಲ್ಲಿ ಮತ್ತೊಮ್ಮೆ ಪುನೀತ್​ಗೆ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಚರಣ್​ ರಾಜ್​ ಸಂಗೀತ ನೀಡಿದ್ದಾರೆ. ಶ್ರೀಕಾಂತ್​, ಶರತ್​ ಕುಮಾರ್​ ಮುಂತಾದ ಸ್ಟಾರ್​ ಕಲಾವಿದರು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

TV9 Kannada


Leave a Reply

Your email address will not be published.