ಅಪ್ಪು ಒಬ್ಬ ದೇವರ ಭಕ್ತನಾಗಿದ್ದರು. ಸಮಯ ಸಿಕ್ಕಾಗೆಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡುವುದು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ಮಾಡುತ್ತಿದ್ದರು. ಅದರಲ್ಲಿಯೂ ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ವಿಶೇಷ ಪ್ರೀತಿ, ಭಕ್ತಿಯನ್ನು ಅಪ್ಪು ಹೊಂದಿದ್ದರು. ಶ್ರೀಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಆಗಾಗ ಭೇಟಿ ನೀಡುತ್ತಿದ್ದರು.
ಹೌದು, ಅಪ್ಪುಗೆ ಮಂಜುನಾಥನ ಮೇಲೆ ಭಕ್ತಿಯಿತ್ತು. ಇದೇ ಕಾರಣಕ್ಕೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆಯುತ್ತಿದ್ರು. ಮೊದಲೆಲ್ಲ ಅಣ್ಣಾವ್ರ ಜೊತೆಗೆ ಹೋಗುತ್ತಿದ್ರೆ, ಅನಂತರ ಕುಟುಂಬದ ಜೊತೆ, ಸ್ನೇಹಿತರ ಜೊತೆ ಸೇರಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ರು. ಧರ್ಮಸ್ಥಳ ಹೆಸರಲ್ಲಿಯೇ ಒಂದು ಶಕ್ತಿ ಇದೆ ಅನ್ನೋದನ್ನು ಅಪ್ಪು ಹೇಳಿದ್ರು.
ಎರಡು ವರ್ಷಕ್ಕೊಮ್ಮೆ ಭೇಟಿ ನೀಡುತ್ತಿದ್ದ ಅಪ್ಪು
ಅಪ್ಪುಗೆ ಧರ್ಮಸ್ಥಳದ ಮೇಲಿರೋ ಭಕ್ತಿ ಅಪಾರವಾಗಿತ್ತು. ಧರ್ಮಸ್ಥಳಕ್ಕೆ ಸಮೀಪದ ಸ್ಥಳಗಳಲ್ಲಿ ಶೂಟಿಂಗ್ ನಡೆಯುತ್ತಿದ್ರೆ, ಹಾಗೇ ಮಂಜುನಾಥನ ದರ್ಶನ ಪಡೆಯುತ್ತಿದ್ರು. ಆದ್ರೆ, ಒಮ್ಮೆ ಧರ್ಮಸ್ಥಳದ ಸಮೀಪ ಶೂಟಿಂಗ್ ನಡೆಯುತ್ತಿಲ್ಲ ಅಂತಾದ್ರೆ, ಕನಿಷ್ಠ ಎರಡು ವರ್ಷಕ್ಕೆ ಒಮ್ಮೆಯಾದ್ರೂ ದರ್ಶನಕ್ಕೆ ಹೋಗುತ್ತಿದ್ರು. ಇದನ್ನು ಸ್ವತಃ ಅಪ್ಪುನೇ ಒಮ್ಮೆ ತಿಳಿಸಿದ್ದರು.
ಧಾರ್ಮಿಕ ಕಾರ್ಯಕ್ರಮದಲ್ಲಿಯೂ ಭಾಗಿ
ವರನಟ ಡಾ.ರಾಜ್ ಕುಮಾರ್ ಕಾಲದಿಂದಲೂ ಪುನೀತ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡ್ತಾ ಇದ್ರು. ಮಂಜುನಾಥನ ಆಶೀರ್ವಾದ ಪಡೆದು, ಅಲ್ಲಿಂದ ಡಾ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು ವಾಪಸ್ ಬೆಂಗಳೂರಿಗೆ ಬರ್ತಾ ಇದ್ರು. ಕಳೆದ ವರ್ಷ ಅಪ್ಪುಗೆ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಹ್ವಾನ ಬಂದಿತ್ತು. ತುಂಬಾ ಸಂತೋಷದಿಂದ ಆಹ್ವಾನವನ್ನು ಸ್ವೀಕರಿಸಿದ ಪುನೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸನ್ಮಾನಿಸಿದ್ರು.
ಭಜನೆ, ನೃತೃಕ್ಕೆ ಮನಸೋತಿದ್ದ ಅಪ್ಪು
ಧರ್ಮಸ್ಥಳದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಭಜನೆ, ನೃತ್ಯ ಕಾರ್ಯಕ್ರಮ ಸೇರಿದಂತೆ ವಿವಿಧ ಭಕ್ತಿ ಪ್ರದಾನ ದಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತೆ. ಅವುಗಳು ಭಕ್ತರನ್ನು ಆಕರ್ಶಿಸಿ ಬಿಡುತ್ತವೆ. ಎಲ್ಲರಲ್ಲಿಯೂ ಭಕ್ತಿಯ ಭಾವನೆಯನ್ನು ಹೊರಹೊಮ್ಮಿಸುತ್ತವೆ. ಅದೇ ರೀತಿ ಡಾ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದಲ್ಲಿಯೂ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದನ್ನು ನೋಡಿದ ಅಪ್ಪು ಮನಸೋತಿದ್ರು.
ಹೆಗ್ಗಡೆಯವರ ಗುಣಗಾನ ಮಾಡಿದ್ದ ಅಪ್ಪು
ಧರ್ಮಸ್ಥಳದಲ್ಲಿ ಎಲ್ಲವೂ ಅಚ್ಚು ಕಟ್ಟು. ಯಾವುದೇ ವಿವಾದ ಗೊಂದಲಗಳಿಗೆ ಅಲ್ಲಿ ಅವಕಾಶವೇ ಇಲ್ಲ. ಕಾಲಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಸುಲಲಿತವಾಗಿ ನಡೆಯುತ್ತವೆ. ಎಷ್ಟೇ ಜನ ಭಕ್ತರು ಭೇಟಿ ನೀಡಿದ್ರೂ ಎಲ್ಲರಿಗೂ ಅನ್ನದಾನ ನಡೆಯುತ್ತೆ. ಇಂತಹವೊಂದು ಶಿಸ್ತಿನ ಹಿಂದೆ ಇದ್ದವರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು. ಎಲ್ಲಾ ಕಡೆಯಿಂದಲೂ ಧರ್ಮಾಧಿಕಾರಿಗಳ ಕಾರ್ಯಕ್ಕೆ ಭಾರೀ ಪ್ರಮಾಣದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಪ್ಪು ಕೂಡ ಇದನ್ನೇ ಹೇಳಿದ್ದು.
ಭಕ್ತಿ ಗೀತೆ ಹಾಡಿದ್ದ ಪುನೀತ್
ಅಪ್ಪು ಒಬ್ಬ ನಟನಾಗಿ ಹೇಗೆ ಮಿಂಚಿದ್ದಾರೋ ಅದೇ ರೀತಿ ಗಾಯಕನಾಗಿಯೂ ಮಿಂಚಿದ್ದಾರೆ. ಬಾಲಕನಾಗಿದ್ದಾಗಲೂ ಅಪ್ಪುಗೆ ಗಾಯನದ ಬಗ್ಗೆ ಒಲವಿತ್ತು. ಸುಮಾರು ಹಾಡುಗಳನ್ನು ಹಾಡಿದ್ರು. ಅನಂತರ ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿ ಅಭಿನಯಿಸಲು ಆರಂಭಿಸಿದ ಮೇಲೆ ಮತ್ತೆ ಹಾಡಲು ಆರಂಭಿಸಿದ್ರು. ಕೇವಲ ತನ್ನ ಚಿತ್ರಕ್ಕೆ ಅಷ್ಟೇ ಅಲ್ಲ, ಬೇರೆ ಬೇರೆ ಹೀರೋಗಳ ಚಿತ್ರಕ್ಕೂ ಹಾಡನ್ನು ಹಾಡಿದ್ದಾರೆ.
ಅನೇಕ ಸಾಂಗ್‌ಗಳು ಸೂಪರ್ ಹಿಟ್ ಆಗಿವೆ. ಹಾಗೇ ಗಾಯನದಿಂದ ಬರುವ ಪೂರ್ಣ ಪ್ರಮಾಣದ ಹಣವನ್ನು ಅಪ್ಪು ಧಾನಧರ್ಮಕ್ಕಾಗಿಯೇ ವಿನಿಯೊಗಿಸುತ್ತಿದ್ರು. ಧರ್ಮಸ್ಥಳದಲ್ಲಿ ಅಪ್ಪು ಪಾಲ್ಗೊಂಡಾಗ ಅಲ್ಲಿರುವ ಶ್ರೀಮಂಜುನಾಥನ ಭಕ್ತರು, ಅಭಿಮಾನಿಗಳು ಅಪ್ಪು ಗಾಯನವನ್ನು ನಿರೀಕ್ಷಿಸಿದ್ರು. ಅಂತಹ ಸಂದರ್ಭದಲ್ಲಿ ಅಪ್ಪು ಹಾಡಿದ ಹಾಡನ್ನು ನೋಡಿ.
ಡಾ.ರಾಜ್ ಕೂಡ ಮಂಜುನಾಥನ ಭಕ್ತರಾಗಿದ್ರು
ಡಾ.ರಾಜ್ ಜೊತೆ ಭೇಟಿ ನೀಡುತ್ತಿದ್ದ ಅಪ್ಪು
ಅಪ್ಪು ವಿನಯವಂತ, ಸರಳಜೀವಿ, ಸಭ್ಯ ನಡತೆ ಹೊಂದಿರೋ ವ್ಯಕ್ತಿಯಾಗಿದ್ರು ಅಂದ್ರೆ ಅದಕ್ಕೆ ಕಾರಣ ವರನಟ ಡಾ.ರಾಜ್ ಕುಮಾರ್. ಹೌದು, ರಾಜ್ ಕುಮಾರ್ ತುಂಬಾ ಸರಳ, ವಿನಯವಂತರಾಗಿದ್ರು. ಅಪ್ಪು ಡಾ.ರಾಜ್ ಕುಮಾರ್ ಮಗನಾಗಿ ಅವರ ಜೊತೆ ಹೆಚ್ಚಿನ ಸಮಯ ಕಳೆದಿದ್ದಾರೆ.
ಅಪ್ಪು ಚಿಕ್ಕವನಿರುವಾಗ ಡಾ.ರಾಜ್ ಜೊತೆ ಅನೇಕ ಚಿತ್ರಮಾಡಿದ್ದಾರೆ. ಹೀಗಾಗಿ ಶೂಟಿಂಗ್ ಸಂದರ್ಭದಲ್ಲಿ ಕೂಡ ಅಪ್ಪು ರಾಜ್‌ಕುಮಾರ್ ಜೊತೆಗೆ ಇರುತ್ತಿದ್ರು. ಇದರಿಂದಾಗಿ ರಾಜ್ ಕುಮಾರ್ ಅವರಲ್ಲಿದ್ದ ಸರಳತೆ, ವಿನಯತೆ ಹಾಗೇ ಪುನೀತ್‌ಗೂ ಬಂದಿತ್ತು. ಡಾ.ರಾಜ್ ದೇವರ ಭಕ್ತಕೂಡ ಆಗಿದ್ರು. ಅನೇಕ ಭಕ್ತಿ ಪ್ರಧಾನ ಸಿನಿಮಾಗಳನ್ನು ಮಾಡಿ ಜನರ ಮನಸ್ಸಿನಲ್ಲಿ ನೆಲೆನಿಂತಿದ್ದಾರೆ. ಅನೇಕ ಬಾರಿ ಡಾ.ರಾಜ್ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಂತಹ ಸಂದರ್ಭದಲ್ಲಿ ಅಪ್ಪು ಅನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ರು. ಹೀಗಾಗಿ ಅಪ್ಪು ಕೂಡ ಡಾ.ರಾಜ್ ಅವರಂತೆ ದೇವರ ಭಕ್ತರಾಗಿದ್ರು.