ಪರಿಚಯಸ್ಥರು, ಬ್ರೋಕರ್​ಗಳಿಗೆ ಪ್ರಾಪರ್ಟಿ ಪತ್ರ ಕೊಡುವವರೇ ಎಚ್ಚರ! ನಿಮಗೆ ತಿಳಿಯದಂತೆಯೇ ನಿಮ್ಮ ಸೈಟ್ ಸೇಲ್ ಆಗುತ್ತೆ | HSR Layout Police arrest 2 accused who sells property by cheating owner


ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಂಚನೆಯ ಗ್ಯಾಂಗ್ ಪತ್ತೆಯಾಗಿದೆ. ನಿಮಗೆ ಅರಿವಿಲ್ಲದಂತೆ ನಿಮ್ಮ ಪ್ರಾಪರ್ಟಿಯನ್ನ ಮಾರಾಟ ಮಾಡಿ ವಂಚನೆ ಮಾಡ್ತಾರೆ.

ಪರಿಚಯಸ್ಥರು, ಬ್ರೋಕರ್​ಗಳಿಗೆ ಪ್ರಾಪರ್ಟಿ ಪತ್ರ ಕೊಡುವವರೇ ಎಚ್ಚರ! ನಿಮಗೆ ತಿಳಿಯದಂತೆಯೇ ನಿಮ್ಮ ಸೈಟ್ ಸೇಲ್ ಆಗುತ್ತೆ

ಕೃಷ್ಣಾ ರೆಡ್ಡಿ

ಬೆಂಗಳೂರು: ಪರಿಚಯಸ್ಥರು, ಬ್ರೋಕರ್ ಗಳಿಗೆ ನಿಮ್ಮ ಪ್ರಾಪರ್ಟಿ ಪತ್ರ ಕೊಡುವವರೇ ಎಚ್ಚರ. ಜೆರಾಕ್ಸ್ ಡಾಕ್ಯುಮೆಂಟ್ಸ್ ಕೊಟ್ರೂ ನಿಮ್ಮನ್ನ ಠಾಣೆ ಮೆಟ್ಟಿಲು ಹತ್ತಿಸುತ್ತಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಂಚನೆಯ ಗ್ಯಾಂಗ್ ಪತ್ತೆಯಾಗಿದೆ. ನಿಮಗೆ ಅರಿವಿಲ್ಲದಂತೆ ನಿಮ್ಮ ಪ್ರಾಪರ್ಟಿಯನ್ನ ಮಾರಾಟ ಮಾಡಿ ವಂಚನೆ ಮಾಡ್ತಾರೆ.

ಹೆಚ್​ಎಸ್​ಆರ್ ಲೇಔಟ್ ನಲ್ಲಿ ಪ್ರಾಪರ್ಟಿ ಹೊಂದಿದ್ದ 76 ವರ್ಷದ ಕೃಷ್ಣಾರೆಡ್ಡಿ ಎಂಬುವವರು ವಂಚನೆಗೆ ಒಳಗಾಗಿದ್ದಾರೆ. ಮಾಲೀಕನಾ ಹೆಸರು ವಂಚಕನ ಹೆಸರು ಒಂದೇ ಇದಿದ್ದರಿಂದ ವಂಚನೆ ಮಾಡೋದಕ್ಕೆ ಮತ್ತಷ್ಟು ಸುಲಭವಾಗಿದೆ. ಸದ್ಯ ಈಗ ವಂಚನೆಗೆ ಒಳಗಾದ ಕೃಷ್ಣಾರೆಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

TV9 Kannada


Leave a Reply

Your email address will not be published.