ಪರಿಷತ್​ಗೆ ಆಯ್ಕೆಯಾದ ಸದಸ್ಯರು ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ; ರಾಜೀವ್, ಜಮೀರ್ ಮತ್ತು ಹ್ಯಾರಿಸ್ ವಿನೋದವಾಗಿ ಹರಟುತ್ತಿದ್ದರು | Rajeev, Zameer, and Harris involved in friendly banter even as newly elected Council members took oath ARBಈ ಸಂದರ್ಭದಲ್ಲಿ ಕುಡಚಿಯ ಬಿಜೆಪಿ ಶಾಸಕ ಪಿ ರಾಜೀವ್ ಮತ್ತು ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್ ಮತ್ತು ಎನ್ ಎ ಹ್ಯಾರಿಸ್ ಲೋಕಾಭಿರಾಮವಾಗಿ ಹರಟುತ್ತಿರುವುದು ವಿಡಿಯೋನಲ್ಲಿ ಸೆರೆಯಾಗಿದೆ.

TV9kannada Web Team


| Edited By: Arun Belly

Jun 16, 2022 | 5:36 PM
ಬೆಂಗಳೂರು: ವಿಧಾನ ಪರಿಷತ್​ಗೆ ಆಯ್ಕೆಯಾದ ನೂತನ ಸದಸ್ಯರು ಬುಧವಾರ ವಿಧಾನ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ನ ನಾಗರಾಜ ಯಾದವ (Nagaraj Yadav) ಮತ್ತು ಬಿಜೆಪಿಯ ಲಕ್ಷ್ಮಣ ಸವದಿ ಭಗವಂತನ ಹೆಸರಲ್ಲಿ ಪ್ರಮಾಣ ಮಾಡಿದರೆ, ಕಾಂಗ್ರೆಸ್ಸಿನವರೇ ಆದ ಅಬ್ದುಲ್ ಜಬ್ಬಾರ್ (Abdul Jabbar) ಅಲ್ಲಾಹು ಹೆಸರಲ್ಲಿ, ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರು ಡಾ ಬಿ ಆರ್ ಅಂಬೇಡ್ಕರ್ ಹೆಸರಲ್ಲಿ ಮತ್ತು ಅದೇ ಪಕ್ಷದ ಹೇಮಲತಾ ಮಹರ್ಷಿ (Hemalata Maharshi) ವಾಲ್ಮೀಕಿ ಮತ್ತು ಜೆಡಿಎಸ್ ನ ಎಸ್ ಎ ಶರವಣ (SA Saravana) ಸಾಯಿಬಾಬಾ ಹಾಗೂ ತಿರುಪತಿ ತಿಮ್ಮಪ್ಪನ ಹೆಸರಲ್ಲಿ ಪ್ರಮಾಣ ಮಾಡಿದರು.

ಈ ಸಂದರ್ಭದಲ್ಲಿ ಕುಡಚಿಯ ಬಿಜೆಪಿ ಶಾಸಕ ಪಿ ರಾಜೀವ್ ಮತ್ತು ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್ ಮತ್ತು ಎನ್ ಎ ಹ್ಯಾರಿಸ್ ಲೋಕಾಭಿರಾಮವಾಗಿ ಹರಟುತ್ತಿರುವುದು ವಿಡಿಯೋನಲ್ಲಿ ಸೆರೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published.