ಪರಿಷತ್​​ನಲ್ಲಿ ಮತಾಂತರ ನಿಷೇಧ ಮಸೂದೆ ಪಾಸ್ ಮಾಡಲು BJP ಮಾಸ್ಟರ್ ಪ್ಲಾನ್..!


ಒಂದು ಬಾರಿ ಪರಿಷತ್​​ನಲ್ಲಿ ಮತಾಂತರ ಮಸೂದೆ ಮಂಡಿಸಲು ಹೋಗಿ ಕೇಸರಿ ಪಡೆ ಯಡವಟ್ಟು ಮಾಡಿಕೊಂಡಿದೆ. ಆದ್ರೆ ಛಲ ಬಿಡದ ಕಮಲ ಕಲಿಗಳು ಮತ್ತೆ ಪರಿಷತ್​​ನಲ್ಲಿ ಬಿಲ್ ಪಾಸ್ ಮಾಡಲು ಸಜ್ಜಾಗಿದ್ದಾರೆ. ಈ ಬಾರಿ ಕಾಡ್ತಿರೋ ಬಹುಮತ ಕೊರತೆ ನೀಗಿಸಲು ಕೂಡ ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಮತಾಂತರ ನಿಷೇಧ ಕಾಯ್ದೆ ಕೇಸರಿ ಪಡೆಯ ಪ್ರತಿಷ್ಠೆ. ಇದೇ ಕಾರಣಕ್ಕೆ ಕಳೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಕಾಯ್ದೆ ಮಂಡಿಸಿ ಬಿಲ್ ಪಾಸ್ ಕೂಡ ಮಾಡಿತ್ತು. ಆದ್ರೆ ಅದೇ ಜೋಶ್​​​​ನಲ್ಲಿ ಪರಿಷತ್​​ಗೆ ಎಂಟ್ರಿಯಾದ ಕಾಯ್ದೆ ಕಮಲ ಕಲಿಗಳ ಯಡವಟ್ಟಿಂದ ಅನುಮೋದನೆ ಪಡೆದಿರಲಿಲ್ಲ. ಆದ್ರೆ ಈ ಬಾರಿ ಬಿಲ್ ಮಂಡನೆ ಮಾಡಿಯೇ ತೀರುತ್ತೇವೆಂದು ಬಿಜೆಪಿ ಪಣ ತೊಟ್ಟಿದೆ.

ಬಹುಮತ ಕೊರತೆ ನೀಗಿಸಲು ಲಖನ್ ಬೆಂಬಲಕ್ಕೆ ಪ್ಲ್ಯಾನ್​
ಪರಿಷತ್​​ನಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆಗೆ ಬಿಜೆಪಿಯೇನೋ ಸಜ್ಜಾಗಿದೆ. ಆದ್ರೆ ಈ ಬಾರಿ ಬಹುಮತದ ಕೊರತೆ ಕಾಡ್ತಿದೆ. ಬಹುಮತದ ಕೊರತೆ ಹೇಗೆ ನಿಭಾಯಿಸೋದು ಅನ್ನೋದು ಬಿಜೆಪಿಗೆ ದೊಡ್ಡ ತಲೆನೋವಾಗಿ ಕಾಡ್ತಿದೆ. ಇದಕ್ಕೆ ಕೇಸರಿ ಪಾಳಯ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಅದೇ.. ಲಖನ್ ಬೆಂಬಲ.
ಪರಿಷತ್ ನಂಬರ್ ಗೇಮ್

ಸದ್ಯ ವಿಧಾನ ಪರಿಷತ್​ನಲ್ಲಿ ಒಟ್ಟು 37 ಬಿಜೆಪಿ ಸದಸ್ಯರಿದ್ದಾರೆ. ಮಸೂದೆ ಪಾಸ್ ಆಗಲು 38 ಸದಸ್ಯರ ಬಲ ಬಿಜೆಪಿಗೆ ಬೇಕು. ಹೀಗಾಗಿ ಲಖನ್ ಬೆಂಬಲ ಪಡೆದು ಮಸೂದೆ ಮಂಡಿಸಲು ಬಿಜೆಪಿ ಪ್ಲಾನ್ ಮಾಡಿದೆ. ಒಂದು ವೇಳೆ ಲಖನ್ ಬೆಂಬಲ ಸಿಕ್ಕರೆ ಈ ವಾರದಲ್ಲೇ ಮಸೂದೆ ಮಂಡನೆಯಾಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಪ್ರವೃತ್ತವಾಗಿದೆ. ಬಹುಮತದ ಕೊರತೆ ನೀಗಿಸಿ ಮಸೂದೆ ಮಸೂದೆ ಮಂಡನೆ ಮಾಡಿ ಅನುಮೋದನೆ ಪಡೆಯೋಕೆ ತಯಾರಿಗಳೂ ನಡೀತಿವೆ. ಈ ನಿಟ್ಟಿನಲ್ಲಿ ಲಖನ್ ಬೆಂಬಲ ಪಡೆಯೋ ಯತ್ನ ಜೋರಾಗಿದೆ.

ಲಖನ್ ಸಪೋರ್ಟ್ ಸರ್ಕಸ್
ಲಖನ್ ಬೆಂಬಲದ ಬಗ್ಗೆ ರಮೇಶ್ ಜೊತೆ ಬಿಜೆಪಿ ಚರ್ಚೆ ನಡೆಸಿದೆ. ರಮೇಶ್ ಜಾರಕಿಹೊಳಿ ಜೊತೆ ಒಂದು ಸುತ್ತಿನ ಮಾತುಕತೆಯೂ ನಡೆದಿದೆ. ರಮೇಶ್ ಜೊತೆ ಮಾತುಕತೆ ಬಳಿಕ ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಭೇಟಿಯಾಗಿ ಮುಂದಿನ ಹಂತದ ಬಗ್ಗೆ ಚರ್ಚೆ ನಡೆಸಿರುವ ನಡೆಸಿದ್ದಾರೆ. ಬಳಿಕ ಸಿಎಂ ಜೊತೆಗೂ ಜಾರಕಿಹೊಳಿ ಬ್ರದರ್ಸ್ ಮಾತುಕತೆ ನಡೆಸಿದ್ದಾರೆ.

ಒಟ್ಟಿನಲ್ಲಿ ಪರಿಷತ್​ನಲ್ಲಿ ಮತಾಂತರ ಮಸೂದೆ ಪಾಸ್ ಆಗಲು ಬಹುಮತಕ್ಕಾಗಿ ಪಕ್ಷೇತರ ಅಭ್ಯರ್ಥಿ ಲಖನ್ ಬೆಂಬಲ ಅಗತ್ಯವಾಗಿದೆ. ಹೀಗಾಗಿ ಬಿಜೆಪಿ ರಮೇಶ್ ಜಾರಕಿಹೊಳಿ ಮೂಲಕ ಲಖನ್ ಬೆಂಬಲಕ್ಕೆ ಪ್ಲ್ಯಾನ್ ಮಾಡಿದೆ. ಇದು ವರ್ಕೌಟ್ ಆಗೋ ಹಂತದಲ್ಲೂ ಇದೆ ಎನ್ನಲಾಗ್ತಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಪರಿಷತ್​​ನಲ್ಲೂ ಮತಾಂತರ ನಿಷೇಧ ಕಾಯ್ದೆ ಅನುಮೋದನೆ ಪಡೆಯೋದು ಪಕ್ಕಾ ಆದಂತಿದೆ.

ವಿಶೇಷ ವರದಿ: ಗಣಪತಿ, ಪೊಲಿಟಿಕಲ್ ಬ್ಯೂರೋ

News First Live Kannada


Leave a Reply

Your email address will not be published. Required fields are marked *