ಬೆಂಗಳೂರು: ರಾಜ್ಯದ 25 ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಭಾರೀ ತಂತ್ರ ರೂಪಿಸಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದು, ಬಹುಮತ ಗಳಿಸುವ ಲೆಕ್ಕಾಚಾರದಲ್ಲಿ ಕೈ ನಾಯಕರು ಇದ್ದಾರೆ. ಹಾಗಾಗಿ ಸದ್ಯ ಆಯಾ ಜಿಲ್ಲೆಗಳ ಕಾಂಗ್ರೆಸ್ ಶಾಸಕರಿಗೆ ಅಧ್ಯಕ್ಷ DK ಶಿವಕುಮಾರ್ ಜವಾಬ್ದಾರಿವೊಂದು ನೀಡಿದ್ದಾರೆ.
ತಮ್ಮ ಕ್ಷೇತ್ರಗಳಲ್ಲಿ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿಗೆ ಲೀಡ್ ಬರಬೇಕು. ಇತರ ಪಕ್ಷಗಳ ಮತದಾರ ಗ್ರಾಮ ಪಂಚಾಯತ್ ಸದಸ್ಯರ ಮತ ಪಕ್ಷದ ಅಭ್ಯರ್ಥಿಗೆ ಸಿಗಬೇಕು. ವಿಧಾನ ಪರಿಷತ್ ಚುನಾವಣೆಯಲ್ಲಿ ತಾವು ಗಳಿಸುವ ಮತಗಳು ಮುಂದಿನ ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ರೆ, 2023ರ ಸಾರ್ವತ್ರಿಕ ಚುನಾವಣೆಗೆ ದಾರಿ ಸಲೀಸಾಗಲಿದೆ ಎಂದಿದ್ದಾರೆ ಡಿಕೆ ಶಿವಕುಮಾರ್.
ಅಭ್ಯರ್ಥಿ ಯಾರೇ ಇರಲಿ, ಪಕ್ಷದ ಗೆಲುವೆಂದೇ ಭಾವಿಸಿ. ವಿಧಾನ ಪರಿಷತ್ ಚುನಾವಣೆಯ ಗೆಲುವು ತಮಗೂ ಅನುಕೂಲ ಆಗಲಿದೆ. ತಳ ಮಟ್ಟದಲ್ಲಿ ಕಾರ್ಯಕರ್ತರ ವಿಶ್ವಾಸ ಗಳಿಸಲು ಪರಿಷತ್ತು ಚುನಾವಣೆ ಸಹಕಾರಿ ಆಗಲಿದೆ. ವಿಧಾನ ಪರಿಷತ್ ಚುನಾವಣೆ ಗೆದ್ರೆ, ವಿಧಾನ ಸಭಾ ಚುನಾವಣೆಗೆ ಆಗಲಿದೆ ಅನುಕೂಲ. ವಿಧಾನ ಪರಿಷತ್ ಗೆಲ್ಲುವ ಮೂಲಕ ವಿಧಾನಸಭಾ ಚುನಾವಣೆಗೆ ರೆಡಿ ಆಗೋಣ ಎಂದಿದ್ದಾರೆ.
The post ಪರಿಷತ್ ಚುನಾವಣೆ: ಕಾಂಗ್ರೆಸ್ ಶಾಸಕರಿಗೆ ಹೊಸ ಟಾಸ್ಕ್ ಕೊಟ್ಟ ಡಿ.ಕೆ ಶಿವಕುಮಾರ್ appeared first on News First Kannada.