ಪರಿಷತ್​​ ಚುನಾವಣೆ: ಕಾಂಗ್ರೆಸ್​, ಬಿಜೆಪಿಗೆ ಶಾಕ್​​ ಕೊಟ್ಟ ಸುಮಲತಾ ಅಂಬರೀಶ್​​ ನಿರ್ಧಾರ

ಮಂಡ್ಯ: ವಿಧಾನ ಪರಿಷತ್​​​ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಯಾವ ಪಕ್ಷಕ್ಕೆ ಸಪೋರ್ಟ್​​ ಮಾಡಲಿದ್ದಾರೆ ಎಂಬ ಚರ್ಚೆ ಜೋರಾಗಿತ್ತು. ಈ ಬೆನ್ನಲ್ಲೀಗ ಈ ಸಂಬಂಧ ಮಾತಾಡಿರುವ ಸುಮಲತಾ, ಕಾಂಗ್ರೆಸ್​ ಮತ್ತು ಬಿಜೆಪಿಗೆ ಶಾಕ್​​ ನೀಡಿದ್ದಾರೆ.

ನಾನು ಮಂಡ್ಯ ಜನರ ಆಶೀರ್ವಾದದಿಂದ ಈ ಸ್ಥಾನದಲ್ಲಿ ಇದ್ದೇನೆ. ಎಲ್ಲ ಪಕ್ಷದವರು ನನಗೆ ಸಪೋರ್ಟ್ ಮಾಡಿದ್ದಾರೆ. ಯಾವುದಾದರು ಒಂದು ಪಕ್ಷಕ್ಕೆ ಬೆಂಬಲ ಕೊಟ್ಟರೆ ಅದು ವಿವಾದ ಸೃಷ್ಟಿಸುತ್ತೆ. ಮಂಡ್ಯ ಜಿಲ್ಲೆಗೆ ಯಾರು ಅಭಿವೃದ್ದಿ ಕೆಲಸ ಮಾಡುತ್ತಾರೊ ಅವರಿಗೆ ವೋಟ್ ಅಂತು ಹಾಕುತ್ತೇನೆ ಎಂದು ಹೇಳಿದರು.

ಯಾರಿಗೂ ಬೆಂಬಲ ನೀಡದೆ ತಟಸ್ಥವಾಗಿರುತ್ತೇನೆ. ಇದು ಚುನಾಯಿತ ಸದಸ್ಯರಿಂದ ನಡೆಯುವ ಚುನಾವಣೆ. ಇದರಲ್ಲಿ ಕ್ಯಾಂಪೇನ್ ಮಾಡುವ ಸಂದರ್ಭ ಬರುವುದಿಲ್ಲ. ಅವರವರ ಅಭ್ಯರ್ಥಿಗಳ ಶಕ್ತಿ ಮೇಲೆ ಎಲ್ಲ ಅವಲಂಬಿತವಾಗಿರುತ್ತೆ. ನಾನು ಎಲ್ಲಿಗೂ ಪ್ರಚಾರಕ್ಕೆ ಬರಲ್ಲ, ಖಂಡಿತ ತಟಸ್ಥ. ನನ್ನ ಸಂಪರ್ಕಿಸಿ ಬೆಂಬಲ ಕೇಳಿದವರಿಗೆ ಶುಭಾಶಯವಷ್ಟೆ ಹೇಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ‘ಸುಮಲತಾ ಬೆಂಬಲ ಬಿಜೆಪಿ ಪಡೆಯಲಿ, ಆದರೆ..’- ಕಾಂಗ್ರೆಸ್​​ ಮಾಜಿ ಸಚಿವ ಚಲುವರಾಯಸ್ವಾಮಿ

The post ಪರಿಷತ್​​ ಚುನಾವಣೆ: ಕಾಂಗ್ರೆಸ್​, ಬಿಜೆಪಿಗೆ ಶಾಕ್​​ ಕೊಟ್ಟ ಸುಮಲತಾ ಅಂಬರೀಶ್​​ ನಿರ್ಧಾರ appeared first on News First Kannada.

News First Live Kannada

Leave a comment

Your email address will not be published. Required fields are marked *