ಬೆಳಗಾವಿ: ಡಿಸೆಂಬರ್ 10 ರಂದು ಕರ್ನಾಟಕ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಚುನಾವಣೆ ದಿನಾಂಕ ಘೋಷಣೆಯಾಗಿದ್ದೆ ತಡ ಕುಂದಾನಗರಿಯಲ್ಲಿ ಎಲೆಕ್ಷನ್ ಚಟುವಟಿಕೆಗಳು ಗರಿಗೆದರಿವೆ.
ಕಾಂಗ್ರೆಸ್ ನಲ್ಲಿ ಟಿಕೆಟ್ಗಾಗಿ ಘಟಾನುಘಟಿಗಳ ಪೈಪೋಟಿ ನಡೆಸುತ್ತಿದ್ದು ಜಿಲ್ಲಾ ಕಾಂಗ್ರೆಸ್ ನಿಂದ 7 ಜನರ ಹೆಸರನ್ನು ಈಗಾಗಲೇ ಕೆಪಿಸಿಸಿಗೆ ಶಿಪಾರಸ್ಸು ಮಾಡಲಾಗಿದೆ. ಮಾಜಿ ಸಚಿವ ಪ್ರಕಾಶ ಹುಕ್ಕೇರಿ, ಮಾಜಿ ಶಾಸಕರಾದ ವೀರಕುಮಾರ ಪಾಟೀಲ್, ಶಹಜಹಾನ್ ಡೋಂಗರಗಾಂವ್, ಡಾ.ಎನ್.ಎ.ಮಗದುಮ್ಮ, ಸುನೀಲ್ ಹನಮಣ್ಣವರ, ಕಿರಣ ಸಾಧುನವರ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೋಳಿ ಹೆಸರನ್ನ ಶಿಪಾರಸು ಮಾಡಲಾಗಿದೆ.
ಅಷ್ಟೇ ಅಲ್ಲದೆ ಪ್ರಕಾಶ ಹುಕ್ಕೇರಿ ತಮಗೆ ಟಿಕೇಟ್ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಖುದ್ದಾಗಿ ಭೇಟಿ ಮಾಡಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಲಖನ್ ಜಾರಕಿಹೋಳಿ ಪಕ್ಷೇತರರಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಈಗಾಗಲೇ ಸಹೋದರರ ಜೊತೆ ಈ ಕುರಿತು ಚರ್ಚೆ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ವಿವೇಕರಾವ್ ಪಾಟೀಲ್ ಗೆಲುವಿನಲ್ಲಿ ಜಾರಕಿಹೋಳಿ ಬ್ರದರ್ಸ್ ನಿರ್ಣಾಯ ಪಾತ್ರ ವಹಿಸಿದ್ದರು. ಸದ್ಯ ಲಖನ್ ಜಾರಕಿಹೋಳಿ ಕಣಕ್ಕಿಳಿದ್ರೆ ಕಾಂಗ್ರೆಸ್- ಬಿಜೆಪಿಯಲ್ಲಿ ತಳಮಳ ಶುರುವಾಗೋದಂತು ಗ್ಯಾರೆಂಟಿ.
ಇತ್ತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೋಳಿ ನಾನು ವಿಧಾನಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ. ಕಳೆದ 6ತಿಂಗಳಿಂದ ಪರಿಷತ್ ಚುನಾವಣೆ ತಯಾರಿ ಆರಂಭಿಸಿದ್ದೇನೆ 14 ತಾಲೂಕಿನಲ್ಲಿ ಪ್ರವಾಸ ಮಾಡಿ ನನ್ನ ಬೆಂಬಲಿಸುವಂತೆ ಕೊರಿದ್ದೇನೆ. ಹೀಗಾಗಿ ಈಗಾಗಲೇ ಟಿಕೆಟ್ ನೀಡುವಂತೆ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಕೊನೆಗಳಿಗೆಯಲ್ಲಿ ಸಿದ್ಧರಾಮಯ್ಯ, ಡಿಕೆಎಸ್, ಸತೀಶ್ ಜಾರಕಿಹೋಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.
The post ಪರಿಷತ್ ಚುನಾವಣೆ: ಟಿಕೆಟ್ಗಾಗಿ ಬೆಳಗಾವಿ ಕಾಂಗ್ರೆಸ್ ನಾಯಕರ ನಡುವೆ ತೀವ್ರ ಪೈಪೋಟಿ appeared first on News First Kannada.