ಬೆಂಗಳೂರು: 19 ಕ್ಷೇತ್ರಗಳಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲ ಕೇಳಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗಳಿ ಇಲ್ಲದೆ ಕಡೆ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎಂದಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿ ಆಯೋಜಿಸಿ ಮಾತನಾಡಿದ ಅವರು ಪರಿಷತ್ ಎಲೆಕ್ಷನ್ನಲ್ಲಿ ಬಿಜೆಪಿಗೆ ಬೆಂಬಲ ವಿಚಾರ ಆ ಕ್ಷೇತ್ರಗಳ ಸ್ಥಳೀಯ ನಾಯಕರಿಗೆ ಬಿಟ್ಟಿದ್ದು. ಸದ್ಯ ನಾವು 6 ಕ್ಷೇತ್ರದಲ್ಲಿ ಯಾರ ಬೆಂಬಲವನ್ನು ಪಡೆದಿಲ್ಲ. ಪಕ್ಷದಲ್ಲಿ ಒಳ ಒಪ್ಪಂದ ಹೊರ ಒಪ್ಪಂದ ಯಾವುದು ಇಲ್ಲ, ಹೀಗಾಗಿ ಕೇಸರಿ ಪಾಳಯದ ಜೊತೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದರು.
ಬಿಎಸ್ವೈ ಅವರು ಕೆಲವೊಂದು ಸಲ ಬೆಂಬಲ ನೀಡುವಂತೆ ದೂರವಾಣಿ ಕರೆ ಮಾಡಿ ಕೂಡ ಕೇಳಿದ್ದಾರೆ. ಇದು ಅವರ ರಾಜಕೀಯ ಮುತ್ಸದ್ಧಿತನವನ್ನು ತೋರುತ್ತದೆ ಅಷ್ಟೇ ಅದರಲ್ಲೇನು ಇಲ್ಲ. ಅವರನ್ನು ಬಿಟ್ಟರೆ ಯಾರೂ ಕೂಡ ಇದರ ಬಗ್ಗೆ ಮಾತನಾಡಿಲ್ಲ ಸಿಎಂ ಬೊಮ್ಮಾಯಿ ಕೂಡ ಕೇಳಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.