ಪರಿಷತ್ ಚುನಾವಣೆಗೆ ಇಬ್ಬರ ಹೆಸರು ದೆಹಲಿಗೆ ರವಾನೆ; ಜೆಡಿಎಸ್ಗೆ ಹೊಡೆತ, ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರುವ ಸಾಧ್ಯತೆ | Big drop for jds Basavaraj horatti may join bjp


ಪರಿಷತ್ ಚುನಾವಣೆಗೆ ಇಬ್ಬರ ಹೆಸರು ದೆಹಲಿಗೆ ರವಾನೆ; ಜೆಡಿಎಸ್ಗೆ ಹೊಡೆತ, ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರುವ ಸಾಧ್ಯತೆ

ಸಭಾಪತಿ ಬಸವರಾಜ ಹೊರಟ್ಟಿ (ಸಂಗ್ರಹ ಚಿತ್ರ)

ಧಾರವಾಡ: ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ ನೆಲಕಚ್ಚಿರೋ ಜೆಡಿಎಸ್ಗೆ ಮತ್ತೊಂದು ದೊಡ್ಡ ಹೊಡೆತ ಬಿಳೋ ಆತಂಕ ಎದುರಾಗಿದೆ. ರಾಜ್ಯ ಕೇಸರಿ ಪಡೆ ದೊಡ್ಡ ನಾಯಕನ ಬೇಟೆಗೆ ರೆಡಿಯಾಗಿದ್ದು, ದಳಪತಿಗಳಗೆ ಆತಂಕ ಎದುರಾಗಿದೆ. ರಾಜ್ಯ ಜೆಡಿಎಸ್ಗೆ ಮೇಲಿಂದ ಮೇಲೆ ಪಕ್ಷಾಂತರ ಪರ್ವದ ಹೊಡೆತ ಬಿಳುತ್ತಲೇ ಇದೆ. ಈಗಾಗಲೇ ಸಾಕಷ್ಟು ಜನ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಹಾಗೂ ಬಿಜೆಪಿ ಕಡೆ ಮುಖ ಮಾಡುತ್ತಿರುವಾಗಲೇ ರಾಜ್ಯ ದಳಪತಿಗಳಿಗೆ ಮತ್ತೊಂದು ಶಾಕ್ ಎದುರಾಗಿದೆ.

ಉತ್ತರ ಕರ್ನಾಟಕ ಬಹುದೊಡ್ಡ ನಾಯಕನ ಪಕ್ಷಾಂತರದ ಮೂನ್ಸೂಚನೆ ಸಿಕ್ಕದೆ. ಅದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ಬಿಜೆಪಿ ಗಾಳ ಹಾಕಿದೆ. ಅದಕ್ಕೆ ಹೊರಟ್ಟಿ ಕೂಡಾ ಅಡ್ಡಗೋಡೆ ಮೇಕೆ ದೀಪ ಇಟ್ಟಂತೆ ಮಾತನಾಡಿರೋದು ಮತ್ತಷ್ಟು ಕೂತುಹಲವನ್ನ ಹುಟ್ಟುಹಾಕಿದೆ. ಈ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡಾ ಸಕಾರಾತ್ಮಕವಾಗಿ ಮಾತನಾಡಿದ್ದು, ಪಕ್ಷಕ್ಕೆ ಬಂದ್ರೆ ಬರಲಿ ಎನ್ನೋ ಮಾತನಾಡಿದ್ದಾರೆ. ಈ ನಡುವೆ ಜೂನ್ ಜುಲೈನಲ್ಲಿ ಹೊರಟ್ಟಿಯವರ ಅವಧಿ ಮುಗಿದು, ಶಿಕ್ಷಕರ ಕ್ಷೇತ್ರದಿಂದ ಪರಿಷತ್ಗೆ ಚುನಾವಣೆಗೆ ಬರುತ್ತೆ. ಹೀಗಾಗೇ ಆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹೊರಟ್ಟಿ ಕೂಡಾ ತೆರೆ ಮರೆ ಪ್ರಯತ್ನ ನಡೆಸಿದ್ದಾನ್ನಲಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಜೋಶಿಯವತ ಹೇಳಿಕೆಗೆ ಧನ್ಯವಾದ ತಿಳಿಸುತ್ತಾ ಜೆಡಿಎಸ್ ಬಿಡವುದಿಲ್ಲ ಎನ್ನೋದನ್ನ ಹೇಳಲೇ ಇಲ್ಲ ಬದಲಾಗಿ ಮೇ ತಿಂಗಳನಲ್ಲಿ ನನ್ನ ನಿರ್ಧಾರ ತಿಳಿಸುತ್ತೇನೆ ಎನ್ನೋ ಮೂಲಕ ಅಡ್ಡಗೂಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಹೀಗಾಗೇ ಹೊರಟ್ಟಿ ಜೆಡಿಎಸ್ ಬಿಡೋದು ಖಚಿತ ಎಂದು ಹೇಳಲಾಗುತ್ತಿದೆ.

ಸದ್ಯ ಜೆಡಿಎಸ್ ನಿಂದ ಆಯ್ಕೆಯಾಗಿರೋ ಬಸವರಾಜ ಹೊರಟ್ಟಿ ಸತತ ಏಳನೇ ಭಾರಿ ಶಿಕ್ಷಕರ ಕ್ಷೇತ್ರದದಿಂದ ಗೆದ್ದು ಪರಿಷತ್ ಪ್ರವೇಶಿಸಿ ದಾಖಲೆ ಬರೆದಿರೋ ಹೊರಟ್ಟಿ, ಈ ಭಾರಿ ಜೆಡಿಎಸ್ ನ ದಹನೀಯ ಸ್ಥಿತಿ ಕಂಡು ಜೆಡಿಎಸ್ ತೊರೆಯಲಿದ್ದಾರೆ ಎನ್ನೋ ಗುಸು ಗುಸು ಪಿಸು ಪಿಸು ಚರ್ಚೆ ಶುರುವಾಗಿದೆ. ಈ ಮಧ್ಯೆ ಬಿಜೆಪಿ ನಾಯಕರು ಕೂಡಾ ಹೊರಟ್ಟಿ ಅಗಮನಕ್ಕೆ ಒಲವು ತೊರಿದ್ದು, ಮುಂಬರೋ ಏಲೆಕ್ಷನ್ ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲೋ ಮೂಲಕ ದಾಖಲೆ ನಿರ್ಮಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಅದಕ್ಕೂ ಮೊದಲು ಬಿಜೆಪಿಯಿಂದ ಟಿಕೆಟ್ ಕನ್ಪರ್ಮ್ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಇನ್ನೊಂದು ಸಾಧ್ಯತೆಯನ್ನ ಕೂಡಾ ಚಿಂತಿಸಲಾಗುತ್ತಿದ್ದು, ಪಕ್ಷೇತರವಾಗಿ ನಿಂತು ಬಿಜೆಪಿಯಿಂದ ಆಂತರಿಕ ಬೆಂಬಲ ಪಡೆದು ಪರಿಷತ್ ಪ್ರವೇಶ ಪಡೆಯಬುದು ಎನ್ನೋ ಚಿಂತನೆ ನಡೆದಿದೆ. ಈ ಮಧ್ಯೆ ಬಿಜೆಪಿ ಬೆಂಬಲದಿಂದಲೇ ಸಭಾಪತಿಯಾಗಿರೋ ಹೊರಟ್ಟಿ ಬಿಜೆಪಿ ಸೇರಿದ್ರೆ ಅಚ್ಚರಿ ಇಲ್ಲ ಎನ್ನೊ ಮಾತುಗಳು ಉತ್ತರ ಕರ್ನಾಟಕ ಭಾಗದಲ್ಲಿ ಕೇಳತೊಡಗಿವೆ.

ಇನ್ನು ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಿ, ಜೆಡಿಎಸ್ಗೆ ದೊಡ್ಡ ಹೊಡೆತ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಮೊದಲೆ ನೆಲೆಕಂಡುಕೊಳ್ಳಲು ಪರದಾಡುತ್ತಿರೊ ಜೆಡಿಎಸ್ ಗೆ ಮತ್ತೊಂದು ಮರ್ಮಾಘಾತ ಎದುರಾಗುವ ಕಾಲ‌ ಸನ್ನಿಹಿತವಾಗಿದೆ‌.

ವರದಿ: ದತ್ತಾತ್ರೇಯ ಪಾಟೀಲ್, ಟಿವಿ9 ಹುಬ್ಬಳ್ಳಿ.

TV9 Kannada


Leave a Reply

Your email address will not be published. Required fields are marked *