ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವುದಾಗಿ ಹೇಳಿದ ವರ್ತೂರು ಪ್ರಕಾಶ್; ಬೆಂಬಲಿಗರ ಸಭೆಯಲ್ಲಿ ಕಣ್ಣೀರು | Varthur Prakash to support BJP in MLC Election Karnataka Politics


ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವುದಾಗಿ ಹೇಳಿದ ವರ್ತೂರು ಪ್ರಕಾಶ್; ಬೆಂಬಲಿಗರ ಸಭೆಯಲ್ಲಿ ಕಣ್ಣೀರು

ವರ್ತೂರು ಪ್ರಕಾಶ್

ಕೋಲಾರ: ಕಳೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಹಲವರು ಶ್ರಮಿಸಿದರು. ನನ್ನ ಬಳಿ ಅಧಿಕಾರ ಇಲ್ಲದಿದ್ದರೂ ನೀವು ನನ್ನ ಬೆಂಬಲಕ್ಕಿದ್ದೀರಿ ಎಂದು ಬೆಂಬಲಿಗರ ಸಭೆಯಲ್ಲಿ ಕಣ್ಣೀರು ಹಾಕಿದ ವರ್ತೂರು ಪ್ರಕಾಶ್​, ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ತಮ್ಮ ಬೆಂಬಲಿಗರ ಸಭೆಯಲ್ಲಿ ವರ್ತೂರು ಪ್ರಕಾಶ್ ಈ ಬಗ್ಗೆ​ ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ ಹಾಜರಿದ್ದರು ಎಂದು ತಿಳಿದುಬಂದಿದೆ. ಪರಿಷತ್​ ಚುನಾವಣೆ ಸಂಬಂಧ ಕೋಲಾರ ನಗರದ ಪೂಜಾ ಕಲ್ಯಾಣ ಮಂಟಪದಲ್ಲಿ ವರ್ತೂರು ಪ್ರಕಾಶ್​ ಸಭೆ ನಡೆಸಿದ್ದಾರೆ. ಈ ವೇಳೆ, ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ನೆರವು ಬಯಸಿದ್ದಾರೆ. ಹುಲಿ ತರ ಇದ್ದೀಯಾ, ಹುಲಿ ತರ ನಡೆಸಿಕೊಳ್ಳುತ್ತೇನೆ ಅಂದ್ರು. ಇಂದು ಬೆಳಗ್ಗೆ ಸಿಎಂ ಬೊಮ್ಮಾಯಿ ನನಗೆ ಭರವಸೆ ನೀಡಿದ್ದಾರೆ. ಗೋವಿಂದ ಕಾರಜೋಳ ಸಹ ಹುಲಿ ತರ ಇದ್ದೀಯಾ ಅಂದರು. ಬಿಜೆಪಿಯವರು ನನ್ನನ್ನು ಬಹಳ ಪ್ರೀತಿಯಿಂದ ನಡೆಸಿಕೊಳ್ತಿದ್ದಾರೆ ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ.

ಕಳೆದ 3-4 ವರ್ಷಗಳಿಂದ ನಾನು ದುಃಖ ಅನುಭವಿಸಿದ್ದೇನೆ. ನಿಮ್ಮ ದುಡ್ಡಲ್ಲೇ ನೀವು ಜಿ.ಪಂ., ಗ್ರಾ.ಪಂ. ಚುನಾವಣೆ ಗೆದ್ರಿ. ಕಿಡ್ನ್ಯಾಪ್ ಆಗಿದ್ದಾಗ ನನ್ನ ಜೀವ ಉಳಿದಿದ್ದೇ ಹೆಚ್ಚು. ಕಾಂಗ್ರೆಸ್​ ಅಭ್ಯರ್ಥಿ ಅನಿಲ್ ಈ ಹಿಂದೆ ನನ್ನನ್ನು ಸೋಲಿಸಿದ್ದ. ಅದೇ ರೀತಿ ಅವರನ್ನು ಸೋಲಿಸುವವರೆಗೂ ಸಮಾಧಾನವಿಲ್ಲ ಎಂದು ಬೆಂಬಲಿಗರ ಸಭೆಯಲ್ಲಿ ವರ್ತೂರು ಪ್ರಕಾಶ್​ ಕಣ್ಣೀರು ಹಾಕಿದ್ದಾರೆ. ಸಿಎಂ ನನ್ನನ್ನು ಒಳ್ಳೆ ರೀತಿ ನಡೆಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದು ಕೋಲಾರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್​ ಹೇಳಿಕೆ ನೀಡಿದ್ದಾರೆ.

ಬೆಂಬಲಿಗರ ಜೊತೆಗೆ ಶಾಸಕ ವರ್ತೂರು ಪ್ರಕಾಶ್​ ಸಭೆ ಮಾಡಿದ್ದಾರೆ. ಕೋಲಾರ ನಗರದ ಪೂಜಾ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಲಾಗಿದೆ. ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ ಸೇರಿ ಹಲವರು ಭಾಗಿ ಆಗಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲದ ಬಗ್ಗೆ ಚರ್ಚೆ ನಡೆಸಲಾಗಿದೆ. ಹಾಗೂ ಬೆಂಬಲ ನೀಡುವ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.

ಇದನ್ನೂ ಓದಿ: ಮಾಜಿ ಸಚಿವ ವರ್ತೂರು ಪ್ರಕಾಶ್‌ರನ್ನ ಕಿಡ್ನಾಪ್‌ ಮಾಡಿದ್ದ ಕಿಂಗ್‌ಪಿನ್‌ ಅರೆಸ್ಟ್‌

ಇದನ್ನೂ ಓದಿ: ಕೊವಿಡ್ ನಿಯಮ ಉಲ್ಲಂಘಿಸಿ ಸಭೆ, ಬಿರಿಯಾನಿ ಊಟ; ವರ್ತೂರು ಪ್ರಕಾಶ್ ಸೇರಿ 105 ಜನರ ಮೇಲೆ ಎಫ್​ಐಆರ್ ದಾಖಲು

TV9 Kannada


Leave a Reply

Your email address will not be published. Required fields are marked *