ಪರಿಷತ್ ಚುನಾವಣೆ ಕಾವು ಜೋರಾಗಿದ್ರು ಪ್ರಚಾರದಿಂದ ಬಿಜೆಪಿ ‘ಫೈರ್ ಬ್ರ್ಯಾಂಡ್’ ದೂರ ದೂರ.. ಯಾಕೆ?


ಕಾರವಾರ: ಉತ್ತರ ಕನ್ನಡದಲ್ಲಿ ಪರಿಷತ್ ಚುನಾವಣೆ ಕಾವು ಜೋರಾಗಿದೆ.. ಕಾಂಗ್ರೆಸ್​​-ಬಿಜೆಪಿ ಅಬ್ಬರದ ಪ್ರಚಾರದಲ್ಲಿ ತೊಡಗಿವೆ.. ಜಿಲ್ಲೆಯಲ್ಲಿ ಐದು ಶಾಸಕರನ್ನ ಹೊಂದಿರುವ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆ.. ಆದ್ರೆ ಪಕ್ಷದ ಪ್ರಭಾವಿ ಮುಖಂಡ ಫೈರ್ ಬ್ರ್ಯಾಂಡ್ ಅನಂತ್​ಕುಮಾರ್​ ಹೆಗಡೆ ಸುಳಿವೆ ಇಲ್ಲ.. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಅನಂತ್​ ಕುಮಾರ್ ಹೆಗಡೆ.. ರಾಜ್ಯ ಬಿಜೆಪಿ ಫೈರ್ ಬ್ರ್ಯಾಂಡ್.. ಉತ್ತರ ಕನ್ನಡ ಜಿಲ್ಲೆಯಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾದವ್ರು.. ಅನಂತ್​ ಕುಮಾರ್ ಹೆಗಡೆ ಸೂಚಿಸಿದ ವ್ಯಕ್ತಿಗೆ ಪಕ್ಷದ ಟಿಕೆಟ್ ಸಿಗುತ್ತೆ.. ಅವರು ಹೇಳಿದ ಹಾಗೇ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕ್ರಮ ನಡೆಯುತ್ತಿವೆ.. ಆದರೆ ಪರಿಷತ್ ಚುನಾವಣೆಯಲ್ಲಿ ಮಾತ್ರ ಅನಂತ್ ಕುಮಾರ್ ಹೆಗಡೆ ಮಾತ್ರ ಕಾಣೆಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಿಂದ ಗಣಪತಿ ಉಳ್ವೇಕರ್‌ಗೆ ಬಿಜೆಪಿ ಟಿಕೆಟ್ ನೀಡಿದೆ.. ಗಣಪತಿ ಹೇಳಿ ಕೇಳಿ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಬೆಂಬಲಿತ ಅಭ್ಯರ್ಥಿ.. ಆದ್ರೆ ಈ ಬಾರಿಯ ಪರಿಷತ್ ಚುನಾವಣೆ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದರೂ ಸಹ ಅನಂತ್ ಕುಮಾರ್ ಸಿರಿಯಸ್ ಆಗಿಲ್ಲ.. ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ, ಅಭ್ಯರ್ಥಿ ಪರ ಪ್ರಚಾರದಲ್ಲಾಗಲೀ ಎಲ್ಲಿಯೂ ಕಾಣಿಸಿಲ್ಲ.. ಇದು ಪಕ್ಷದವರಲ್ಲೂ ಸಹ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

ಸದ್ಯ ಅನಂತ್​ ಕುಮಾರ್ ಹೆಗಡೆ, ಚುನಾವಣಾ ಕಣದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಇದು ಪರೋಕ್ಷವಾಗಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಮಾತು ಕೇಳಿ ಬರ್ತಿದೆ. ಆದ್ರೆ, ಅವರು ನಮ್ಮ ಹಿರಿಯ ನಾಯಕರು. ಪ್ರಚಾರಕ್ಕೆ ಬಾರದಿದ್ದರೂ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ ಅಂತಾ ಪಕ್ಷದ ಸ್ಥಳೀಯ ನಾಯಕರು ಸ್ಪಷ್ಟನೆ ನೀಡಿದ್ದಾರೆ.

ಒಟ್ನಲ್ಲಿ ಚುನಾವಣೆ ವೇಳೆ ಪಕ್ಷದ ಪ್ರಭಾವಿ ಮುಖಂಡ ಅನಂತ್​ ಕುಮಾರ್​ ಹೆಗಡೆ ಮಾತ್ರ ಕಾಣೆ ಆಗಿದ್ದಾರೆ.. ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸದಿರೋದು ಚರ್ಚೆಗೆ ಗ್ರಾಸವಾಗಿದೆ.. ಇದು ಚುನಾವಣೆ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತೆ ಅನ್ನೋದು ಕಾದು ನೋಡಬೇಕು.

ವಿಶೇಷ ಬರಹ: ಸಂದೀಪ್ ಸಾಗರ್, ನ್ಯೂಸ್ ಫಸ್ಟ್, ಕಾರವಾರ

News First Live Kannada


Leave a Reply

Your email address will not be published. Required fields are marked *